ಗಾಜಿಯಾಬಾದ್: ಎರಡು ವರ್ಷದ ಮಗುವಿನ ಮೇಲೆ ಟ್ರಕ್ ಹರಿಸಿರುವ ಭೀಕರ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಇಂದು ನಡೆದಿದೆ. ಆ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಆಘಾತಕಾರಿ ಘಟನೆ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಗರ ನಿಗಮ ಗಾಜಿಯಾಬಾದ್ ಎಂದೂ ಕರೆಯಲ್ಪಡುವ ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಕಸದ ಟ್ರಕ್‌ ಡ್ರೈವರ್​​​ ಪುಟ್ಟ ಬಾಲಕಿಯ ನಿಂತಿರುವುದನ್ನು ನೋಡಿಯೂ ಆಕೆಯ ಮೇಲೆ ಟ್ರಕ್ ಹರಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೈಲಾ ಭಟ್ಟ ವಾರ್ಡ್ ಸಂಖ್ಯೆ 93 ರ ಇಸ್ಲಾಂ ನಗರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಎಲಿನಾ ಎಂದು ಗುರುತಿಸಲಾಗಿರುವ ಬಾಲಕಿ ತನ್ನ ಸಹೋದರಿಯೊಂದಿಗೆ ಲೇನ್‌ನಲ್ಲಿ ನಿಂತಿದ್ದಾಗ ಕಸದ ಟ್ರಕ್ ಆಕೆಯ ಮೇಲೆ ಹರಿದಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಬಾಲಕಿಯನ್ನು ಸಂತೋಷ್ ಆಸ್ಪತ್ರೆಗೆ ರವಾನಿಸಲಾಗಿದೆ.

https://x.com/lokeshRlive/status/1830159629151580290?