ಕೇರಳ: ಬಸ್ಗೆ ಕಂಟೇನರ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪೊಲೀಸರು ಸೇರಿದಂತೆ 32 ಮಂದಿ ಗಾಯಗೊಂಡಿರುವ ಘಟನೆ ಕೊಯ್ಲಾಂಡಿಯಲ್ಲಿ ಇಂದು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಧ್ಯಾಹ್ನ 12.30 ರ ಸುಮಾರಿಗೆ ಚುನಾವಣಾ ಕರ್ತವ್ಯ ಮುಗಿಸಿ ತಮ್ಮ ಸ್ಥಳಗಳಿಗೆ ಹಿಂತಿರುಗುತ್ತಿದ್ದ ಮಲಬಾರ್ ವಿಶೇಷ ಪೊಲೀಸ್ (ಎಂಎಸ್‌ಪಿ) ಸಿಬಂದಿಯನ್ನು ಬಸ್ ಹೊತ್ತೊಯ್ಯುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಯ್ಲಾಂಡಿಯ ಕೊಲ್ಲಂ ಬಳಿ ಬಸ್ ಕಂಟೇನರ್ ಲಾರಿಗೆ ಢಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಬಿಡುಗಡೆ ಮಾಡಲಾಗಿದೆ. ಬಸ್ ಮತ್ತು ಕಂಟೇನರ್ ಲಾರಿಯಲ್ಲಿದ್ದ ಇಪ್ಪತ್ತೇಳು ಪೊಲೀಸರು ಮತ್ತು ಇತರ ಐದು ಮಂದಿ ನೌಕರರು ಗಾಯಗೊಂಡಿದ್ದಾರೆ.

