ಅನಂತಪುರ: ಅನಂತಪುರದ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ‘ನನ್ನ ಅತ್ತೆ ಸಾಯುವಂತೆ ಮಾಡು’ ಎಂದು ಬರೆದ 20 ರು. ನೋಟು ಪತ್ತೆಯಾಗಿದೆ.
ಕಾಣಿಕೆ ಎಣಿಕೆ ವೇಳೆ ಉತ್ತಮ ಆರೋಗ್ಯ, ಒಳ್ಳೆ ಕೆಲಸ, ಮದುವೆ, ಮಕ್ಕಳು ಇತ್ಯಾದಿಗಳನ್ನು ಬೇಡಿ ಬರೆದಿರುವ ನೋಟುಗಳು ಸಿಗುವುದು ಸಹಜ. ಆದರೆ ಈಗ ಸಿಕ್ಕ ಈ ನೋಟನ್ನು ಕಂಡು ಅಧಿಕಾರಿಗಳು ದಂಗಾಗಿದ್ದಾರೆ. ಕೆಲವರಿಗಿದು ತಮಾಷೆಯಾಗಿ ಕಂಡರೆ, ಒಂದಿಷ್ಟು ಮಂದಿ ‘ಆ ಅತ್ತೆ ಅದೆಷ್ಟು ಕಾಟ ಕೊಡುತ್ತಿರಬಹುದು’ ಎಂದು ಊಹಿಸಿಕೊಳ್ಳುತ್ತಿದ್ದಾರೆ.

