ಖ್ಯಾತ ಆಸ್ಟ್ರೀಯಾದ ಬಿಲಿಯನೇರ್ ಉದ್ಯಮಿ ರಿಚರ್ಡ್ ಲುಗ್ನರ್ ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಲುಗ್ನರ್ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ನರಳುತ್ತಿದ್ದರು ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಕೇವಲ ಎರಡು ತಿಂಗಳ ಹಿಂದೆ ಆರನೇ ಬಾರಿಗೆ ವಿವಾಹವಾದ ಆಸ್ಟ್ರಿಯಾದ ಉದ್ಯಮಿ ವಿಯೆನ್ನಾದಲ್ಲಿನ ತಮ್ಮ ವಿಲ್ಲಾದಲ್ಲಿ ನಿಧನರಾದರು.

ಲುಗ್ನರ್ ನಿಧನಕ್ಕೆ ಸಂತಾಪ ಸೂಚಿಸಿದ ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಎಕ್ಸ್ ನಲ್ಲಿ, “ರಿಚರ್ಡ್ ಲುಗ್ನರ್ ಯಶಸ್ವಿ ಉದ್ಯಮಿ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಅವರು ಆಸ್ಟ್ರೀಯಾ ಮೂಲದ ನಿರ್ಮಾಣ ಲೋಕದ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದಿದ್ದಾರೆ.