ಸೂರತ್: ಗುಜರಾತ್ನ ಮೆಹ್ಸಾನಾದ ಕಡಿ ತಾಲ್ಲೂಕಿನ ಜಸಲ್ಪುರ್ ಗ್ರಾಮದಲ್ಲಿ ಕಾರ್ಖಾನೆ ನಿರ್ಮಾಣ ಸ್ಥಳದಲ್ಲಿ ಸಡಿಲ ಮಣ್ಣು ಕುಸಿದು 9 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿದ್ದ ಕಾರ್ಖಾನೆಯಲ್ಲಿ ಕಾರ್ಮಿಕರು ಗುಂಡಿ ಅಗೆಯುತ್ತಿದ್ದಾಗ ಮಣ್ಣು ಕುಸಿದಾಗ ಈ ಘಟನೆ ಸಂಭವಿಸಿದೆ.

ಹತ್ತು ಕಾರ್ಮಿಕರು ಸಿಕ್ಕಿಬಿದ್ದರು, ಆದರೆ ಒಬ್ಬರು ಮೇಲಿನ ಸ್ಥಾನದಲ್ಲಿದ್ದ ಕಾರಣ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇತರ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ತರುಣ್ ದುಗ್ಗಲ್ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಮತ್ತು ಮೃತರ ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರು ದೂರು ದಾಖಲಿಸಲಿದ್ದಾರೆ ಎಂದು ದುಗ್ಗಲ್ ದೃಢಪಡಿಸಿದರು.