ತಿರುಚಿರಾಪಳ್ಳಿ : ಇಂದು ಅಕ್ಟೋಬರ್ 3 ರಂದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆಯೊಂದು ಬಂದಿದ್ದು, ಈ ಸಂಬಂಧ ಸದ್ಯ ತನಿಖೆ ನಡೆಯುತ್ತಿದೆ. ಇದುವರೆಗೆ 8 ಶಾಲೆಗಳಿಗೆ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.ವರದಿಗಳ ಪ್ರಕಾರ, ಬಾಂಬ್ ಬೆದರಿಕೆ ಬಂದ ಶಾಲೆಗಳಲ್ಲಿ ತಿರುಚಿರಾಪಳ್ಳಿಯ ಸೇಂಟ್ ಜೋಸೆಫ್ ಕಾಲೇಜು ಸೇರಿದೆ.

ಬಾಂಬ್ ನಿಷ್ಕ್ರಿಯ ದಳ ಹಾಗೂ ಸ್ನಿಫರ್ ಡಾಗ್‌ಗಳು ಸ್ಥಳಕ್ಕೆ ತಲುಪಿವೆ.ತಿರುಚಿರಾಪಳ್ಳಿಯ ಸೇಂಟ್ ಜೋಸೆಫ್ ಕಾಲೇಜು ಸೇರಿದಂತೆ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.