ತಿರುಪತಿ: ಆಂಧ್ರದ ತಿರುಪತಿ ದೇವಸ್ಥಾನದಲ್ಲಿ ಲಡ್ಡುಗೆ ನಕಲಿ ತುಪ್ಪ ಬಳಸಿದ ವಿವಾದದ ಬಳಿಕ ಈಗ ಶಾಲು ವಿವಾದ ಬೆಳಕಿಗೆ ಬಂದಿದೆ. ರೇಷ್ಮೆ ಶಾಲು ಹೆಸರಿನಲ್ಲಿ 100% ಪಾಲಿಸ್ಟಾರ್ ಶಾಲುಗಳನ್ನು ಗುತ್ತಿಗೆದಾರ ಪೂರೈಸಿದ್ದು ಈಗ ಬಿರುಗಾಳಿ ಎಬ್ಬಿಸಿದೆ.
ಇದರಿಂದ 2015 ರಿಂದ 2025 ರವರೆಗಿನ ಒಂದು ದಶಕದಲ್ಲಿ 54 ಕೋಟಿ ರೂಪಾಯಿಗಳ ಹಗರಣ ಆಗಿದೆ. ಗುತ್ತಿಗೆದಾರನೊಬ್ಬ ಟೆಂಡರ್ ದಾಖಲೆಗಳಲ್ಲಿ ನಿರ್ದಿಷ್ಟಪಡಿಸಿದ ಶುದ್ಧ ಮಲ್ಬೆರಿ ರೇಷ್ಮೆ ಉತ್ಪನ್ನಗಳೆಂದು ಬಿಲ್ ಮಾಡುವಾಗ ನಿರಂತರವಾಗಿ ಅಗ್ಗದ ಪಾಲಿಸ್ಟರ್ ದುಪಟ್ಟಾಗಳನ್ನು ಪೂರೈಸಿದ್ದಾನೆ ಎಂದು ಆಂತರಿಕ ವಿಜಿಲೆನ್ಸ್ ವಿಚಾರಣೆಯ ನಂತರ ಈ ಹಗರಣ ಬೆಳಕಿಗೆ ಬಂದಿದೆ.

