ಗುಜರಾತ್: ಬನಸ್ಕಾಂತ ಜಿಲ್ಲೆಯ ವಾವ್ ಬಳಿ ಮುಂಜಾನೆ 3.35ರ ಸುಮಾರಿಗೆ 3.4 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆ ವರದಿ ಮಾಡಿದೆ.

ಭೂಕಂಪಶಾಸ್ತ್ರದ ವರದಿ ಪ್ರಕಾರ, ವಾವ್ನಿಂದ ಪೂರ್ವ-ಈಶಾನ್ಯಕ್ಕೆ (ಇಎನ್ಇ) 27 ಕಿ.ಮೀ ದೂರದಲ್ಲಿ 4.9 ಕಿ.ಮೀ ಆಳದಲ್ಲಿ ಭೂಕಂಪನ ದಾಖಲಾಗಿದೆ. ಇನ್ನು ಕಳೆದ 200 ವರ್ಷಗಳಲ್ಲಿ ಒಂಬತ್ತು ಪ್ರಮುಖ ಭೂಕಂಪಗಳಿಗೆ ತುತ್ತಾಗಿದೆ ಎನ್ನಲಾಗಿದೆ. ಭೂಕಂಪದಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.