ನವದೆಹಲಿ : ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ನವೋದಯ ಶಿಕ್ಷಣ ಸಂಸ್ಥೆಗಳಿಗೆ ಹೊಸ ಶಾಖೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ದೇಶದಲ್ಲಿ ಹೊಸದಾಗಿ 28 ನವೋದಯ ಶಿಕ್ಷಣ ಸಂಸ್ಥೆಗಳು ತಲೆ ಎತ್ತಲಿದೆ. ಶಿಕ್ಷಣ ಸೌಲಭ್ಯ ವಂಚಿತ ಜಿಲ್ಲೆಗಳಲ್ಲಿ ಹೊಸ ಶಾಖೆಗಳು ಕಾರ್ಯಾರಂಭ ಮಾಡಲಿದೆ.

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಪಿಎಂ ಮೋದಿಯವರ ದೂರದೃಷ್ಟಿಯಿಂದ ಹೊಸ ನವೋದಯ ಶಾಲೆಗಳಿಗೆ ಅನುಮತಿ ಸಿಕ್ಕಿದೆ. ಗುಣಮಟ್ಟದ ವಿದ್ಯಾಭ್ಯಾಸ , ಪ್ರತಿಭೆಗಳಿಗೆ ಪೂರಕ ಸಹಕಾರ ಹಾಗೂ ಕೌಶಲ್ಯ ಅಭಿವೃದ್ಧಿಗೆ ನವೋದಯ ಶಾಲೆ ಹೆಸರುವಾಸಿಯಾಗಿದೆ. ಅರುಣಾಚಲ ಪ್ರದೇಶ 8 , ಅಸ್ಸಾಂ 8 , ಮಣಿಪುರ 2 , ಕರ್ನಾಟಕ 1 , ಮಹಾರಾಷ್ಟ್ರ 5 , ಪಶ್ಚಿಮ ಬಂಗಾಳ 2 , ತೆಲಂಗಾಣ ರಾಜ್ಯಕ್ಕೆ 3 ಶಾಲೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.