ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಸಿಲುಕಿರುವ ಕನ್ನಡಿಗರು ಇವತ್ತು ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ. ಶ್ರೀನಗರದಿಂದ 177 ಜನರ ತಂಡ ಬೆಂಗಳೂರಿಗೆ ಮರಳಲಿದ್ದಾರೆ.
ಪ್ರವಾಸಿಗರನ್ನ ಸುರಕ್ಷಿತವಾಗಿ ಕರೆತರುವ ಜವಬ್ದಾರಿ ಹೊತ್ತು ಕಾಶ್ಮೀರಕ್ಕೆ ತೆರಳಿರುವ ಸಚಿವ ಸಂತೋಷ್ ಲಾಡ್, ತಮ್ಮ ಸ್ವಂತ ದುಡ್ಡಿನಲ್ಲೇ 177 ಕನ್ನಡಿಗರನ್ನ ಬೆಂಗಳೂರಿಗೆ ಕರೆತರಲಿದ್ದಾರೆ.

