ವಿಶಾಖಪಟ್ಟಣ: ಆದಿ ಲೀಲಾ ಫೌಂಡೇಶನ್ ನವದೆಹಲಿ ಇವರಿಂದ ವಿಶಾಖಪಟ್ಟಣದಲ್ಲಿ ೧೦೦ನೇ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇದರಲ್ಲಿ ಬೆಂಗಳೂರಿನ ಕಿಶೋರ್ ಕುಮಾರ್ ಕೆ ಎಸ್ ಅವರನ್ನು ಆದಿ ಲೀಲಾ ಫೌಂಡೇಶನ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಆಗಿ ಆಯ್ಕೆ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಆದಿ ಲೀಲಾ ಫೌಂಡೇಶನ್ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್. ಆದಿ ನಾರಾಯಣ್, ವಿಶಾಖಪಟ್ಟಣ ಜಿಲ್ಲಾ ಕಲೆಕ್ಟರ್ ಎಂ.ಎನ್. ಅರಿಯೇಂದ್ರ ಪ್ರಸಾದ್, ಭಾಸ್ಕರ್ ರಾವ್, ಡಾ. ಬಾಬುರಾವ್ ಉಪಸ್ಥಿತಿಯಲ್ಲಿ ಕಿಶೋರ್ ಕುಮಾರ್ ಅವರನ್ನು ಆದಿ ಲೀಲಾ ಫೌಂಡೇಶನ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಆಗಿ ಆಯ್ಕೆ ಮಾಡಲಾಗಿದೆ.

