ಭುವನೇಶ್ವರ: ಸ್ವಾತಂತ್ರ್ಯ ದಿನವಾದ ಇಂದು ಒಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಒಡಿಶಾದಲ್ಲಿ ಎಲ್ಲಾ ವೃತ್ತಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆ ನೀತಿಯನ್ನು ಪರಿಚಯಿಸಿದ್ದಾರೆ. ಕಟಕ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಒಡಿಶಾ ಉಪ ಮುಖ್ಯಮಂತ್ರಿ ಈ ಕುರಿತು ಘೋಷಿಸಿದ್ದಾರೆ. ಈ ಮೂಲಕ ಕೇರಳ ಮತ್ತು ಬಿಹಾರದೊಂದಿಗೆ ಮುಟ್ಟಿನ ರಜೆಯನ್ನು ರಾಜ್ಯ ಸರ್ಕಾರಗಳು ಅಧಿಕೃತಗೊಳಿಸಿದ ರಾಜ್ಯಗಳ ಪಟ್ಟಿಗೆ ಒಡಿಶಾ ಕೂಡ ಸೇರುತ್ತದೆ.
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಒಂದು ದಿನ ರಜೆ ತೆಗೆದುಕೊಳ್ಳಲು ಅವಕಾಶ ನೀಡುವ ಹೊಸ ನೀತಿಯು ಅವರ ಋತುಚಕ್ರದ ಮೊದಲ ಅಥವಾ ಎರಡನೇ ದಿನದಂದು ರಜೆ ಪಡೆಯಲು ಅರ್ಹರಾಗಿರುವವರಿಗೆ ತಕ್ಷಣವೇ ಪ್ರಾರಂಭವಾಗುತ್ತದೆ.

