News Karnataka Kannada
Friday, May 03 2024
ಯುಎಇ

ಫೆ.11ಕ್ಕೆ ದುಬೈನಲ್ಲಿ ಸಪ್ತ ಭಾಷ ಸಂಗಮ ಪ್ರದೇಶ ಮಂಜೇಶ್ವರದ ಅನಿವಾಸಿಗರ ಸ್ನೇಹ ಸಮ್ಮಿಲನ

ಸಪ್ತ ಭಾಷೆ ಸಂಗಮ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರವು ವೈವಿಧ್ಯಮಯ ಭಾಷೆ ಸಾಹಿತ್ಯ ಸಾಂಸ್ಕೃತಿಕತೆಗೊಂದು ಕೈಹನ್ನಡಿಯಂತಿದೆ. ಅಲ್ಲಿನ ವಿವಿಧ ಭಾಷೆಗಳನ್ನಾಡುವ ವಿವಿಧ ಜಾತಿಯನ್ನೊಳಗೊಂಡ ಜನರಿದ್ದರೂ ಸದಾ ಸಹೋದರತ್ವದ ಸೌಹರ್ದತೆಯನ್ನು ಸಾರುವ ಆ. ಮಣ್ಣಿನ ಅನಿವಾಸಿಗರು ಉದ್ಯೋಗಕ್ಕಾಗಿ ಯುಎಇತಹ ಗಲ್ಫ್ ರಾಷ್ಟ್ರವನ್ನು ಅವಲಂಭಿಸಿದ್ದು ಇದೀಗ ಮಂಜೇಶ್ವರದ ಜನ ವೈವಿಧ್ಯತೆಯನ್ನು ಒಟ್ಟುಗೂಡಿಸಿಕೊಂಡು ಸಂಭ್ರಮಿಸಲು ಯುಎಇ ಯಲ್ಲಿ ಮೈಸರ್‌ಕಾರ್ ಎಂಬ ಬಳಗವನ್ನು ಕಟ್ಟಿಕೊಂಡು ವಿಭಿನ್ನವಾದ ಪ್ರಯತ್ನವನ್ನು ನಡೆಸಲಾಗಿದೆ.
Photo Credit : News Kannada

ದುಬೈ: ಸಪ್ತ ಭಾಷೆ ಸಂಗಮ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರವು ವೈವಿಧ್ಯಮಯ ಭಾಷೆ ಸಾಹಿತ್ಯ ಸಾಂಸ್ಕೃತಿಕತೆಗೊಂದು ಕೈಹನ್ನಡಿಯಂತಿದೆ. ಅಲ್ಲಿನ ವಿವಿಧ ಭಾಷೆಗಳನ್ನಾಡುವ ವಿವಿಧ ಜಾತಿಯನ್ನೊಳಗೊಂಡ ಜನರಿದ್ದರೂ ಸದಾ ಸಹೋದರತ್ವದ ಸೌಹರ್ದತೆಯನ್ನು ಸಾರುವ ಆ ಮಣ್ಣಿನ ಅನಿವಾಸಿಗರು ಉದ್ಯೋಗಕ್ಕಾಗಿ ಯುಎಇತಹ ಗಲ್ಫ್ ರಾಷ್ಟ್ರವನ್ನು ಅವಲಂಭಿಸಿದ್ದು ಇದೀಗ ಮಂಜೇಶ್ವರದ ಜನ ವೈವಿಧ್ಯತೆಯನ್ನು ಒಟ್ಟುಗೂಡಿಸಿಕೊಂಡು ಸಂಭ್ರಮಿಸಲು ಯುಎಇ ಯಲ್ಲಿ ಮೈಸರ್‌ಕಾರ್ ಎಂಬ ಬಳಗವನ್ನು ಕಟ್ಟಿಕೊಂಡು ವಿಭಿನ್ನವಾದ ಪ್ರಯತ್ನವನ್ನು ನಡೆಸಲಾಗಿದೆ.

ಇದರ ವಿಸೃತ ರೂಪವೇ ಫೆಬ್ರವರಿ 11 ರಂದು ಜರಗುವ ಸ್ನೇಹ ಸಮ್ಮಿಲನವಾದ “ಗಮ್ಮತ್ 2024” ಎಂಬ ಕಾರ್ಯಕ್ರಮ ಎಂದು ಮೈಸರ್‌ಕಾರ್ ತಂಡದ ರೂವಾರಿ ಡಾ.ಅಬ್ದುಲ್ ರಹಮಾನ್‌ ಬಾವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವರು ಮಾತನಾಡುತ್ತಾ ಕಳೆದ ಎರಡು ವರ್ಷ ಚಿಕ್ಕದಾಗಿ ಚೊಕ್ಕದಾಗಿ ಮೈಸರ್‌ಕಾರ್ ಗಮ್ಮತ್ ಎಂಬ ಕಾರ್ಯಕ್ರಮವನ್ನು ಅಯೊಜಿಸುತ್ತಾ ಮಂಜೇಶ್ಚರದ ಸ್ನೇಹ ಸೌಹರ್ದತೆಯನ್ನು ಕೊಲ್ಲಿ ರಾಷ್ಡ್ರದ ಜನತೆಯಲ್ಲೂ ಜತನವಾಗಿರಿಸಲಾಗಿದೆ. ಈ ವರ್ಷ ಯುಎಇಯ ಎಲ್ಲಾ ರಾಜ್ಯದಲ್ಲಿ ಇರುವ ಮಂಜೇಶ್ವರದವರನ್ನು ಒಟ್ಟುಗೂಡಿಸಿ “ಮೈಸರ್‌ಕಾರ್ ಗಮ್ಮತ್-2024” ಕಾರ್ಯಕ್ರಮಕ್ಕೆ ಯೋಜನೆ ಇರಿಸಿರುವುದರಿಂದ ಅಲ್ಲಿನ ವೈವಿಧ್ಯತೆ ಹಾಗೂ ಏಕತೆಯನ್ನು ಸಾಗರದಾಚೆಗೂ ವಿಸ್ತರಿಸಿ ಮಂಜೇಶ್ವರದ ಜನತೆಯ ಪರಂಪರೆಯನ್ನು ವಿಪುಲಗೊಳಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇದರ ಅಂಗವಾಗಿ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಮಂಜೇಶದವರದ ಜನತೆಯ ಮಹಾ ಸಮ್ಮೇಳನದ ಪ್ರತೀತಿಯಲ್ಲಿ ನಡೆಸಲಾಗುವ ಕಾರ್ಯಕ್ರಮದಲ್ಲಿ ಪ್ರೀತಿ ಬೋಜನದ ವ್ಯವಸ್ಥೆಯು ಮಾಡಲಾಗಿದೆ ಎಂದು ತಿಳಿಸಿದರು.

ಫೆಬ್ರವರಿ 11 ರಂದು ನಗರದ Peas Modern British school Rashidiya ದ ಸಭಾಂಗಣದಲ್ಲಿ ಸಂಜೆ ಮೂರರಿಂದ ರಾತ್ರಿ ಹತ್ತರ ವರೆಗೆ ಜರಗಲಿರುವ “ಮೈಸರ್‌ಕಾರ್ ಗಮ್ಮತ್-2024” ಕಾರ್ಯಕ್ರಮದಲ್ಲಿ ಕೇರಳದ ಖ್ಯಾತ ಗಾಯಕರಾದ ಹಮೀದ್ ಕಲಾಭವನ್ ತಂಡದವರಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಒಪ್ಪನ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಜರಗಲಿದೆ. ಯುಎಇಯಲ್ಲಿ ಇರುವ ಮಂಜೇಶ್ವರದ ಅನಿವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನ್ಯಾಯವಾದಿ ಇಬ್ರಾಹಿಂ ಖಲೀಲ್ ಕೋರಿದ್ದಾರೆ.

ಇನ್ನು ಪ್ರತಿಕಾಗೋಷ್ಠಿಯಲ್ಲಿ ಶೇಖ್ ಅಮೀನ್ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು