Categories: ಯುಎಇ

ಡಿ.10 ರಂದು ದುಬೈ ದಸರಾ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ

ದುಬೈ: ಹೆಮ್ಮೆಯ ದುಬೈ ಕನ್ನಡ ಸಂಘ ಕನ್ನಡಿಗರ ಧ್ವನಿಯಾಗಿ ಯುಎಇ ದೇಶದಲ್ಲಿ ೨೦೧೫ ರಿಂದ ಕನ್ನಡ ನಾಡು ನುಡಿ ಸಂಸ್ಕೃತಿ ಆಗುಹೋಗು ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿದೆ .ದಸರಾ ಕ್ರೀಡೋತ್ಸವ , ಸಾಂಸ್ಕೃತಿಕೋತ್ಸವ , ಸರ್ವಧರ್ಮ ಇಫ್ತಾರ್ ಕೂಟ ಸಂಕ್ರಾಂತಿ ,ಕ್ರಿಸ್ಮಸ್ , ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ಪ್ರತಿಭಾ ಸ್ಪರ್ಧೆಗಳ ಮೂಲಕ ಕನ್ನಡಿಗರನ್ನು ಭಾಷೆ, ನೆಲದ ಮೇಲೆ ಒಲುಮೆ ಮೂಡಿಸುತಿದ್ದಾರೆ.

ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ೬ನೆ ಬಾರಿಗೆ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ ೨೦೨೩ ದಸರಾ ಕಪ್ ಕ್ರಿಕೆಟ್ , ಚೆಸ್, ಬ್ಯಾಡ್ಮಿಂಟನ್ , ಫುಟ್ಬಾಲ್, ವಾಲಿಬಾಲ್ , ಅಥ್ಲೆಟಿಕ್ಸ್, ಥ್ರೋಬಾಲ್, ಕೊಕೋ, ಕಬಡ್ಡಿ, ಹಗ್ಗ ಜಗ್ಗಾಟ, ಮೂಲಕ ಮಕ್ಕಳು, ಮಹಿಳೆಯರು ಮತ್ತು ಪುರುಷರ ಎಲ್ಲಾ ವಯಸ್ಕರಿಗೂ ಕ್ರೀಡಾ ರಂಜನೆಯ ಅವಕಾಶ ಮಾಡಿಕೊಟ್ಟಿದ್ದಾರೆ .ಅಂತ್ಯಾಕ್ಷರಿ, ಕನ್ನಡ ರಸಪ್ರಶ್ನೆ, ಗೊಂಬೆ ಸ್ಪರ್ಧೆ, ಕವಿಗೋಷ್ಠಿ ಸಾಹಿತ್ಯಾಸಕ್ತರ ಮನ ತಣಿಸಲಿವೆ, ಹಾಗೆ ರಂಗೋಲಿ ಸ್ಪರ್ಧೆ ಮತ್ತು ದಸರಾ ಗೊಂಬೆ ಸ್ಪರ್ಧೆ ಸಾಂಸ್ಕ್ರತಿಕ ಲೇಪ ನೀಡಲಿದೆ.

ದಸರಾ ಕಪ್ ಕ್ರಿಕೆಟ್ ಪುರುಷರಿಗೆ ಮತ್ತು ಮಹಿಳೆಯರಿಗೆ ಫೈನಲ್ ಪಂದ್ಯಗಳು ೧೯ ನವೆಂಬರ್ ನಂದು ನಡೆದು ಪ್ರೇಕ್ಷಕರ ಮನಗೆದ್ದವು , ಹರ್ಷೋದ್ಘಾರದೊಂದಿಗೆ ಕ್ರೀಡಾಪ್ರೇಮಿಗಳು ವೀಕ್ಷಿಸಿದರು.

೧೦ ಡಿಸೆಂಬರ್ ೨೦೨೩ರಂದು ದುಬೈಯ ಎಟಿಸಲಾತ್ ಅಕಾಡೆಮಿ ನಡೆಯುವ ಕ್ರೀಡೋತ್ಸವಕ್ಕೆ ಎಲ್ಲಾ ಕ್ರೀಡಾಪಟುಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆ ಸ್ಪರ್ಧಿಗಳು ಕಾತುರದಿಂದ ತಮ್ಮ ಪ್ರತಿಭೆಯನ್ನು ತೋರಲು ಕಾತುರರಾಗಿ ಕಾಯುತಿದ್ದಾರೆ.ಚಂದನವನದ ತಾರೆಗಳಾದ ಶ್ರೀ. ಹೇಮಂತ್, ಶ್ರೀ. ಹರ್ಷವರ್ಧನ್, ಶ್ರೀ. ರಾಹುಲ್ ಡಿಟ್ಟೋ , ಕು. ದಿವ್ಯ ಸಂಗೀತ ಸಂಜೆ ಮೂಲಕ ರಂಜಿಸಲಿದ್ದಾರೆ . ದುಬೈನ ರಾಜಮನೆತನದವರು ಅತಿಥಿಗಳಾಗಿ ಸಮಾರಂಭಕ್ಕೆ ಆಗಮಿಸಲು ಸಮ್ಮತಿಸಿ ತಮ್ಮ ಅಪೂರ್ವ ಬೆಂಬಲ ಸೂಚಿಸಿದ್ದಾರೆ.

ವಾರ್ಷಿಕ ‘ದುಬೈ ಕ್ರೀಡಾ ರತ್ನ ‘ ಪುರಸ್ಕಾರ ಡಾ.ಮಾಲತಿ ಕೃಷ್ಣಮೂರ್ತಿ ಹೊಳ್ಳ, ಅರ್ಜುನ ಪ್ರಶಸ್ತಿ ವಿಜೇತೆ, ಒಲಿಂಪಿಕ್ ಪ್ಯಾರಾ ಅಥ್ಲೀಟ್ ಮತ್ತು ಶ್ರೀ. ದೊಡ್ಡ ಗಣೇಶ್ , ಭಾರತೀಯ ಕ್ರಿಕೆಟ್ ತಾರೆ ಇವರಿಗೆ ಸನ್ಮಾನಿಸಲಾಗುವುದು . ಶ್ರೀಮತಿ. ಅಶ್ವಿನಿ ನಾಚಪ್ಪ, ಡಾ. ಸಿ.ಹೊನ್ನಪ್ಪ ಗೌಡ, ಶ್ರೀ.ಎಸ್.ವಿ. ಸುನಿಲ್ ಈ ಪ್ರಶಸ್ತಿಯ ಪೂರ್ವ ಪುರಸ್ಕೃತರು.

ದಸರಾ ಕಾರ್ಯಕ್ರಮದ ಪೋಸ್ಟರ್, ವಿವರ , ಟೀಶರ್ಟ್ ಹೆಮ್ಮೆಯ ದುಬೈ ಕನ್ನಡ ಸಂಘ ನವೆಂಬರ್ ೨೫ ರಂದು ಬಿಡುಗಡೆಗೊಳಿಸಿತು . ಸಭೆಯಲ್ಲಿ ಅಧ್ಯಕ್ಷ ಮಧು ದಾವಣಗೆರೆ, ಉಪಾಧ್ಯಕ್ಷೆ ಹಾದಿಯ ಮಂಡ್ಯ,ಮುಖ್ಯ ಕಾರ್ಯದರ್ಶಿ ರಫೀಕ್ ಅಲಿ ಕೊಡಗು, ಮಮತಾ ಮೈಸೂರು , ಸುದೀಪ್ ದಾವಣಗೆರೆ, ಪಲ್ಲವಿ ದಾವಣಗೆರೆ, ವಿಷ್ಣು ಮೂರ್ತಿ ಮೈಸೂರು , ಡಾ. ಸವಿತಾ ಮೈಸೂರು, ಅನಿತಾ ಬೆಂಗಳೂರು, ಶಂಕರ್ ಬೆಳಗಾವಿ , ಮೊಹಿದ್ದೀನ್ ಹುಬ್ಬಳ್ಳಿ, ವರದರಾಜ್ ಕೋಲಾರ , ಅಕ್ರಮ್ ಕೊಡಗು, ಚೇತನ್ ಬೆಂಗಳೂರು, ನಜೀರ ಮಂಡ್ಯ, ಸ್ವಾತಿ ಚಿತ್ರದುರ್ಗ, ಹಾದಿ ಕುಂದಾಪುರ, ರಜಿನಿ ಬೆಂಗಳೂರು , ಪ್ರತಾಪ್ ಮಡಿಕೇರಿ ಮತ್ತು ಉಪಸಮಿತಿ ಸದಸ್ಯರು ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಯುಎಇ ದೇಶದ ಎಲ್ಲ ಕನ್ನಡಿಗರಿಗೆ ಆತ್ಮೀಯ ಸ್ವಾಗತ ಕೋರಿದರು.

Gayathri SG

Recent Posts

ಹೆಸ್ಕಾಂ ಲೈನ್ ಮೆನ್ : ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಏಕಾಏಕಿ ವಿದ್ಯುತ್ ಪ್ರವೇಶಿಸಿದ ಪರಿಣಾಮ ಹಾಗೂ ಹೆಸ್ಕಾಂ ಲೈನ್ ಮೆನ್ , ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡ…

1 min ago

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆ

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅತಿಕಾರಿಬೆಟ್ಟು ನಿವಾಸಿ 20 ವರ್ಷದ ಕಾರ್ತಿಕ್ ಪೂಜಾರಿ…

13 mins ago

ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…

32 mins ago

ಮಾಜಿ ಸಂಸದ ಎಲ್​ ಆರ್ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸಂಬಂಧಿಸಿದಂತೆ ಎಚ್‌ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…

58 mins ago

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ಪ್ರಧಾನಿ ಮೋದಿ ಸಂತಾಪ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್‌ಗಳ ಪೈಕಿ ಒಂದು ಪತನಗೊಂಡಿದ್ದು, ಅಪಘಾತದಲ್ಲಿ ಇರಾನ್‌ ಅಧ್ಯಕ್ಷ…

1 hour ago

‘ರೇವ್ ಪಾರ್ಟಿ’ ಮೇಲೆ ಸಿಸಿಬಿ ದಾಳಿ; ನಟಿ ಹೇಮಾ ಸೇರಿ ಐವರು ಅರೆಸ್ಟ್

ಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…

1 hour ago