News Karnataka Kannada
Saturday, May 04 2024
ಯುಎಇ

ದುಬೈ; ಆ.26 ರಂದು 34 ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ

Dubai
Photo Credit :

ದುಬೈ: ಇಂಟರ್‌ನ್ಯಾಶನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಬೆಂಗಳೂರು ಇದರ ಸಹಯೋಗದೊಂದಿಗೆ ಕನ್ನಡ ಮಿತ್ರರು ದುಬೈ ಯುಎಇ., ಆ.26 ರಂದು ಶನಿವಾರ ಬೆಳಿಗ್ಗೆ 10.00 ಗಂಟೆಗೆ 34 ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವು ಫಾರ್ಚೂನ್ ಕಾನ್ಫರೆನ್ಸ್ ಹಾಲ್, ದುಬೈ ಗ್ರ‍್ಯಾಂಡ್ ಹೋಟೆಲ್ ಬೈ ಫಾರ್ಚೂನ್, ಅಲ್ ಕ್ವೇಸಸ್ ದುಬೈ. ಯುಎಇ ಯಲ್ಲಿ ನಡೆಯಲಿದೆ.

50 ಕಲಾವಿದರ ತಂಡವು ಪುನಿತ್ ಸ್ವರ ನಮನ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತದೆ. ಆಸನ ವ್ಯವಸ್ಥೆ ಮಾಡಲು ಉಪಸ್ಥಿತಿಯನ್ನು ಮೊದಲೇ ದೃಢೀಕರಿಸಬೇಕು.

ಅಧ್ಯಕ್ಷರು, ಕೆಎನ್‌ಆರ್‌ಐ ಫೋರಂ, ದುಬೈ, ಯುಎಇ ಶ್ರೀ. ಪ್ರವೀಣ್ ಕುಮಾರ್ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ. ನಿರ್ದೇಶಕರು, ಡಿಪಿಟಿ. ಸಾರ್ವಜನಿಕ ಗ್ರಂಥಾಲಯ ಬೆಂಗಳೂರು ಡಾ. ಸತೀಶ್ ಕುಮಾರ್ ಹೊಸಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಧ್ಯಕ್ಷರು, ಕನ್ನಡ ಮಿತ್ರರು, ಯುಎಇ  ಶಶಿಧರ್ ನಾಗರಾಜಪ್ಪ ಅವರು ಸ್ವಾಗತ ಭಾಷಣ ಮಾಡಲಿದ್ದಾರೆ. ಕೆ.ಪಿ.ಮಂಜುನಾಥ್ ಸಾಗರ್,  ಪ್ರಸಾದ್ ಕೂರ್ಗ್, ಈಶ್ವರ್ ದಾಸ್ ಶೆಟ್ಟಿ ಕಾರ್ಯಕ್ರಮದ ವಿಶೇಷ ಆಹ್ವಾನಿತರು.  ಮಲ್ಲಿಕಾರ್ಜುನ ಗೌಡ, ಹಿದಾಯತ್ ಅಡ್ಡೂರ್, ದುಬೈ ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಸಾಂಸ್ಕೃತಿಕ ಚಟುವಟಿಕೆಗಳು: ಜಾನಪದ ಹಾಡುಹಕ್ಕಿ ಸವಿತಕ್ಕ, ಉತ್ತರ ಕರ್ನಾಟಕದ ಜಾನಪದ ಸೊಗಡಿನ ಮೆಹಬೂಬ್ ಕಿಲ್ಲೆದಾರ್ ಮತ್ತು ಮರಿಯಪ್ಪ ಚಾಮಲಪೂರ ಮುಂತಾದವರಿಂದ ಭಾವಗೀತೆ ಮತ್ತು ಚಿತ್ರಗೀತೆ, ಶೈಲಜಾಕುಮಾರ್ ಮತ್ತು ಡಾ| ಜಯಶ್ರೀ ಹೆಗ್ಡೆ ಶಿಷ್ಯವೃಂದದಿಂದ ಭರತನಾಟ್ಯ ಮತ್ತು ಜಾನಪದ ನೃತ್ಯ, ಕರ್ನಾಟಕದ ಸ್ಟ್ಯಾಂಡಪ್ ಕಾಮಿಡಿಯನ್ ಮಹದೇವ ಸತ್ತಿಗೇರಿಯವರಿಂದ ಹಾಸ್ಯದ ಹೊನಲು ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು