ನಿರ್ಮಾಣ ಹಂತದಲ್ಲಿರುವ ಅಬುಧಾಬಿ ಹಿಂದೂ ಮಂದಿರದ ಭಕ್ತರಿಂದ ಶಿಲಾ ಸಮರ್ಪಣೆ ಅಭಿಯಾನ. ಯು.ಎ.ಇ. ಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಮತ್ತು ಯು.ಎ.ಇ.ಗೆ ಆಗಮಿಸುವ ಪ್ರವಾಸಿಗರಿಗೆ ಪ್ರತಿ ಭಾನುವಾರ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಅಬುಧಾಬಿಯಲ್ಲಿ ಸ್ವಾಮಿನಾರಾಯಣ ಹಿಂದೂ ಮಂದಿರ ನಿರ್ಮಾಣ ಸ್ಥಳದಲ್ಲಿ ಭಕ್ತಾಧಿಗಳಿಗೆ ಶಿಲೆಯನ್ನು ಪೂಜಿಸಿ ಸಮರ್ಪಿಸಲು ಅಬುಧಾಬಿ ಹಿಂದೂ ಮಂದಿರದ ಆಡಳಿತ ಮಂಡಳಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
ನಮ್ಮ ಜೀವಿತದ ಅವಧಿಯಲ್ಲಿ ದೊರೆತಿರುವ ಈ ಪರಮ ಪಾವನ ಸೌಭಾಗ್ಯವನ್ನು ಉಪಯೋಗಿಸಿಕೊಳ್ಳಲು ಭಕ್ತಜನ ಕೋಟಿಯಲ್ಲಿ ಸವಿನಯ ವಿನಂತಿ.