Categories: ಯುಎಇ

ಜಾಗತಿಕ ಲಿಂಗಾಯುತ ಮಹಾಸಭಾ ಸಾಗರೋತ್ತರ ಘಟಕದಿಂದ 889ನೇ ಬಸವ ಜಯಂತಿ ಕಾರ್ಯಕ್ರಮ

ದುಬೈ: ಜಾಗತಿಕ ಲಿಂಗಾಯುತ ಮಹಾಸಭಾ ಸಾಗರೋತ್ತರ ಘಟಕದ ವತಿಯಿಂದ 889ನೇ ಬಸವ ಜಯಂತಿ ಕಾರ್ಯಕ್ರಮ ಮೇ 7ರ ಶನಿವಾರದಂದು ಸಂಜೆ 7ಕ್ಕೆ ಭಾರತ, 5.30ಕ್ಕೆ ದುಬೈ ಹಾಗೂ 2.30ಕ್ಕೆ ಲಂಡನ್‌ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಗದಗ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಮ.ನಿ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಶ್ರೀಮತಿ ವಿದ್ಯಾ ಮಗದುಮ ಆದರ್ಶ ಸುಗಮ ಸಂಗೀತ ತಂಡದಿಂದ ವಚನಗಾಯನ ಕಾರ್ಯಕ್ರಮ ನೆರವೇರಲಿದೆ.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅಧ್ಯಕ್ಷರಾಗಿ ನಿಕಟಪೂರ್ವ ಗೃಹ ಸಚಿವ ಹಾಗೂ ನೀರಾವರಿ ಸಚಿವರು ಡಾ. ಎಂ. ಬಿ ಪಾಟೀಲ ಹಾಗೂ ಸ್ವಾಗತ ಭಾಷಣವನ್ನು ಶಿವಾನಂದ ಜಾಮದಾರ್ ಮಾಡಲಿದ್ದಾರೆ.

ಜಾಗತಿಕ ಲಿಂಗಾಯುತ ಮಹಾಸಭೆ ಸಾಗರೋತ್ತರ ಘಟಕದ ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷ ಪ್ರಕಾಶ ಉಳ್ಳೆಗಡ್ಡಿ, ಉಪಾಧ್ಯಕ್ಷ ರಾವಂದೂರ ಶಿವಕುಮಾರ, ದುಬೈ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಲಿಂಗದಳ್ಳಿ, ಖಜಾಂಚಿ ಬಸವಪಾಟೀಲ, ಸಮನ್ವಯ ಮತ್ತು ಸಂಹವನ ಭೀಮ ಹಂಗರಗೆ, ಕಾರ್ಯದರ್ಶಿ ಹೇಮೆಗೌಡ ರುದ್ರಪ್ಪ, ಉಪ ಖಜಾಂಚಿ  ಮಲ್ಲಿ ಕಾರ್ಜುನ ರಾಮನಹಳ್ಳಿ, ದುಬೈ, ಮಸ್ಕತ್, ಯು.ಎ.ಇ ಸಂಪರ್ಕ ಸತೀಶ ಭದ್ರಣ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಗಾಯಕರು ಗುರುರಾಜ ಹೊಸಕೋಟೆ ಭಾಗಿಯಾಗಲಿದ್ದಾರೆ. ನುಡಿದರೆ ಮುತ್ತಿನ ಹಾರದಂತಿರಬೇಕು ಚಿಂತನೆ ಕಾರ್ಯಕ್ರಮವನ್ನು ಡಾ. ರಹಮತ ತರೀಕೆರೆ, ಡಾ. ಶಾಂತಾ ಅಪ್ಟಗಿ, ಡಾ. ಎಸ್. ಈ. ಸಿದ್ಧರಾಮಯ್ಯ ಹಾಗೂ ಡಾ. ಶೀಲಾದೇವಿ ಮಳೀಮಠ ನೆರವೇರಿಸಿ ಕೊಡಲಿದ್ದಾರೆ.

ಕಾರ್ಯಕ್ರಮದಲ್ಲಿ ಹಲವಾರು ಅಂತರಾಷ್ಟ್ರೀಯ ಸಂಘಟನೆಗಳು ಭಾಗವಹಿಸಲಿದೆ. ನ್ಯೂಸ್ ಕರ್ನಾಟಕ ಯೂಟ್ಯೂಬ್ ಚಾನೆಲ್ ಹಾಗೂ ನ್ಯೂಸ್ ಕರ್ನಾಟಕ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್ ಸ್ಟೀಮಿಂಗ್ ಆಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಇ- ಸರ್ಟಿಫಿಕೇಟ್ ಕೊಡಲಾಗುತ್ತದೆ.

Gayathri SG

Recent Posts

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

7 mins ago

50 ಕೋ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿಮಾಲ್‌: ಬೀಗ ಜಡಿದ ಬಿಬಿಎಂಪಿ

ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ ಬೆಳ್ಳಂಬೆಳಗ್ಗೆಯೇ  ಬೀಗ…

13 mins ago

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ : ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿ ನ್ಯೂ ಗಾಂಧಿನಗರದಲ್ಲಿ ನಡೆದಿದೆ.

31 mins ago

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಮುಸ್ತಾಫ ಸೆರೆ

ದೇಶವನ್ನೇ ಬೆಚ್ಚಿಬೀಳಿಸಿದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ…

32 mins ago

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಸುಳ್ಯದಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಹಚ್ಚಿದ್ದಾರೆ

36 mins ago

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

46 mins ago