News Karnataka Kannada
Monday, April 29 2024
ಯುಎಇ

ಕರ್ನಾಟಕ ಸಂಘ  ಶಾರ್ಜಾದ ಆಶ್ರಯದಲ್ಲಿ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ

Uae
Photo Credit : News Kannada

ಯುಎಇ : ಕರ್ನಾಟಕ ಸಂಘ  ಶಾರ್ಜಾದ ಆಶ್ರಯದಲ್ಲಿ ವಿಶ್ವರಂಗ ದಿನ ಹಾಗೂ ಪ್ರತಿಷ್ಠಿತ “ಮಯೂರಕಪ್” ಮಹಿಳೆಯರ ಮತ್ತು ಪುರುಷರ ಥ್ರೋಬಾಲ್ ಹಾಗೂ ಪುರುಷರ ವಾಲಿಬಾಲ್ ಪಂದ್ಯಾಟಗಳು ಮಾರ್ಚ್ 27ನೇ ತಾರೀಕು ಭಾನುವಾರ ಬೆಳಗಿನಿಂದ ಸಂಜೆಯವರೆಗೆ ಆಜ್ಮಾನ್‌ ಅಕಾಡೆಮಿ ಸ್ಕೂಲ್‌ ಕ್ರೀಡಾಂಗಣದಲ್ಲಿ ವಿಜೃಂಬಣೆಯಿಂದ ನಡೆಯಿತು.

ಬೆಳಿಗೆ 8.30 ಗಂಟೆಗೆ ಕರ್ನಾಟಕದ ಚಿತ್ರದುರ್ಗದ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ ಮಹಾ ಸಂಸ್ಥಾನದ ಪೀಠಾಧೀಶರಾಗಿರುವ ಪೂಜ್ಯಡಾ  ಶಿವಮೂರ್ತಿ ಮುರುಘಾ ಶರಣರು ಹಾಗೂ ಕರ್ನಾಟಕದರಂಗಭೂಮಿ, ಚಲನಚಿತ್ರ ನಟರು ನಿರ್ದೇಶಕರು ಎಂ. ಎನ್. ಸುರೇಶಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ  ಎಂ. ಇ. ಮೂಳೂರ್ ರವರ ಅಧ್ಯಕ್ಷತೆಯಲ್ಲಿಉದ್ಘಾಟನೆ ಸಮಾರಂಭ ಯು.ಎ.ಇ. ರಾಷ್ಟ್ರಗೀತೆ ಮತ್ತು ಭಾರತದ ರಾಷ್ಟ್ರ ಗೀತೆಯೊಂದಿಗೆ ಪ್ರಾರಂಭವಾಯಿತು.

ಕರ್ನಾಟಕ ಸಂಘ ಶಾರ್ಜಾದ ಪೋಷಕರಾದ  ಮಾರ್ಕ್ಡೆನಿಸ್, ಸಲಹೆಗಾರರಾದ  ಪ್ರವೀಣ್‌ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ, ಉಪಾಧ್ಯಕ್ಷ  ನೋಯಲ್‌ ಅಲ್ಮೇಡಾ, ಕ್ರೀಡಾ ಕಾರ್ಯದರ್ಶಿ  ಜೀವನ್‌ಕುಕ್ಯಾನ್, ಮತ್ತು ಕರ್ನಾಟಕದಿಂದ ಅತಿಥಿಗಳಾಗಿ ಆಗ್ಮಿಸಿದ್ದ ಶ್ರೀಮತಿ ಅಹಲ್ಯಾ ಸುರೇಶ,  ರಾಕೇಶ್‌ರೋಬೊಟಿಕ್ಸ್,  ಬಾಲಕೃಷ್ಣ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರು ಶ್ರೀ ಬಿ. ಕೆ. ಗಣೇಶ್‌ ರೈಯವರು ಸರ್ವರನ್ನುಸ್ವಾಗತಿಸುತ್ತಾ ವಿಶ್ವರಂಗ ದಿನಾಚರಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕರ್ನಾಟಕ ಸಂಘ ಶಾರ್ಜಾದ ಸಲಹೆಗಾರರಾದ ಶ್ರೀ ಪ್ರವೀಣ್‌ಕುಮಾರ್ ಶೆಟ್ಟಿಯವರು ಸರ್ವರಿಗೂ ಶುಭವನ್ನು ಹಾರೈಸಿದರು

ಪೂಜ್ಯ ಡಾ  ಶಿವಮೂರ್ತಿ ಮುರುಘಾ ಶರಣರು ಇವರಿಗೆ ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಸ್ವಾಮೀಜಿಯವರು ಆಶೀರ್ವಚನ ನೀಡಿ ಶುಭ ಸಂದೇಶದೂಂದಿಗೆ ಹಾರೈಸಿದರು. ಕನ್ನಡ ರಂಗಭೂಮಿ ಚಲನಚಿತ್ರ ನಟರು ನಿರ್ದೇಶಕರು  ಎಂ. ಎನ್. ಸುರೇಶರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ವಿಶ್ವರಂಗಭೂಮಿ ದಿನಾಚರಣೆಯ ಸಂಪೂರ್ಣ ಮಾಹಿತಿಯನ್ನು ನೀಡಿ ಸಂದೇಶದೂಂದಿಗೆ ಶುಭವನ್ನು ಹಾರೈಸಿದರು.

ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ  ಎಂ.ಇ. ಮೂಳೂರು ರವರು ತಮ್ಮಉದ್ಘಾಟನಾ ಭಾಷಣದಲ್ಲಿ ಸರ್ವರಿಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು . ಇದೇ ಸಂದರ್ಭದಲ್ಲಿಇವರ ಕಾರ್ಯ ಯೋಜನೆಯನ್ನು ಮೆಚ್ಚಿ ಪೂಜ್ಯಡಾ ಶಿವಮೂರ್ತಿ ಮುರುಘಾ ಶರಣರು ಶಾಲು ಹೊದಿಸಿ ಗೌರವಿಸಿದರು. ಗಲ್ಫ್ಕನ್ನಡ ಮೂವೀಸ್ ನ ದೀಪಕ ಸೋಮಶೇಖರ್‌ ರವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ವಾಲಿಬಾಲ್ ಮತ್ತುತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ
ಯು.ಎ.ಇ. ಯಲ್ಲಿ ನಡೆಯುತ್ತಿದ್ದ ಥ್ರೋಬಾಲ್, ವಾಲಿಬಾಲ್ ಪಂದ್ಯಾಟಗಳಲ್ಲಿ ಭಾಗವಹಿಸುತ್ತಿದ್ದುಇತ್ತಿಚೆಗೆ ಅಗಲಿರುವ ಎರದು ಕ್ರೀಡಾ ರತ್ನಗಳಾದ ಉಲ್ಲಾಸ್ ಮಿನೆಂಜಸ್ ಮತ್ತು ರೂಪಾರವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಪಂದ್ಯಾಟದಲ್ಲಿ ಭಾಗವಹಿಸಿದ ಮಹಿಳಾ ಮತ್ತು ಪುರುಷರ ತಂಡದವರಿಗೆ ಥ್ರೋಬಾಲ್‌ ತಂಡದ ನಾಯಕಿ ಮರಿನಾ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು.

ಗೌರವ ಅತಿಥಿಗಳು ಮತ್ತುಅಧ್ಯಕ್ಷರು ಮತ್ತು ಸಲಹೆಗಾರು ತ್ರೋಬಾಲ್‌ ಎಸೆಯುದರ ಮೂಲಕ ಪಂದ್ಯಾಟಗಳಿಗೆ ಚಾಲನೆ ನೀಡಿದರು. ಪ್ರೇಕ್ಷಕರ ಮನಸೆಳೆದ ಆಕರ್ಷಕ ಹಾಗೂ ರೋಚಕ ಪಂದ್ಯಾಟ ವಾಲಿಬಾಲ್‌ತAಡದಲ್ಲಿ ಭಾಗವಹಿಸಿದ ತಂಡಗಳು, ಕರಾವಳಿ ಮಿಲನ್, ಸ್ಮಾರ್ಟ್ ಪ್ಲಸ್, ಟೀಮ್ ಡಿ3, ಅಲ್‌ಗುರಿಯರ್ ಫ್ರೆಂಡ್ಸ್,ಕರ್ನಾಟಕ ಸ್ಟ್ರೈಕರ್ಸ್, ಕೋಸ್ಟಲ್ ಫ್ರೆಂಡ್ಸ್ಯು.ಎ.ಇ., ಯುನೈಟೆಡ್ ಫ್ರೆಂಡ್ಸ್ಕುಡ್ಲ, ಬಿ.ಎಂ.ಜಿ. ಭಟ್ಕಲ್. ತ್ರೋಬಾಲ್ ಮಹಿಳಾ ಮತ್ತು ಪುರುಷರತಂಡಗಳು , ಬಂಟ್ಸ್ದುಬಾಯಿ, ಕೊಂಕಣ್ಸ್ದುಬಾಯಿ, ಕೋಸ್ಟಲ್ ಫ್ರೆಂಡ್ಸ್ಯು.ಎ.ಇ., ಮ್ಯಾಂಗ್ಲೂರ್ ಸ್ಟ್ರೈಕರ್ಸ್, ದಿ ಅನ್‌ಸ್ಟಾಪೆಬಲ್, ಕರ್ನಾಟಕ ಸಂಘ ಶಾರ್ಜಾ. ಶಾರ್ಜಾಕರ್ನಾಟಕ ಸಂಘದ “ಮಯೂರಕಪ್” ತನ್ನದಾಗಿಸಿಕೊಂಡ ತಂಡಗಳು ಬೆಳಗಿನಿಂದ ಸಂಜೆಯವರೆಗೆ ನಡೆದ ಪೈಪೋಟಿಯಲ್ಲಿ ಜಯಗಳಿಸಿದ ತಂಡಗಳು

ರನ್ನರ್ಸಪ್‌ಕರ್ನಾಟಕ ಬುಲ್ಸ್, ವಿನ್ನರ್ಸ್ :ಟೀಮ್ ಡಿ3, ಬೆಸ್ಟ್ಎಟಾಕರ್ :ಆಕಾಶ್ – ಕರ್ನಾಟಕ ಬುಲ್ಸ್, ಬೆಸ್ಟ್ ಸೆಟ್ಟರ್ : ಸಜನ್ ಆಳ್ವಾ – ಟೀಮ್ ಡಿ3 ಬೆಸ್ಟ್ಆಲ್‌ರೌಂಡರ್ ಜಸಲ್ – ಟೀಮ್ ಡಿ3.

ಬಹುಮಾನ ವಿತರಣೆ ಸಮಾರಂಭ ಸಂಜೆ 6.30 ಗಂಟೆಗೆ ಮುಖ್ಯ ಪ್ರಾಯೋಜಕರು ಅತಿಥಿಗಳ ಸಮ್ಮುಖದಲ್ಲಿ ನೆರವೇರಿತು. ಬು ಅಬ್ದುಲ್ಲಾಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರು ಡಾ. ಬು ಅಬ್ದುಲ್ಲಾ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯು.ಎ.ಇ. ಅಧ್ಯಕ್ಷರು ಪ್ರವೀಣ್‌ಕುಮಾರ್ ಶೆಟ್ಟಿ, ಪ್ರೊಮೋಟ್ ಬಿ.ಡಿ. ವ್ಯವಸ್ಥಾಪಕನಿರ್ದೇಶಕರು  ವಿಶಾಂತ್ ಮಿನೆಂಜಸ್, ಕ್ಲಾಸಿಕ್ ಮರಿನ್ ವ್ಯವಸ್ಥಾಪಕ ನಿರ್ದೇಶಕರು ಹಂಝಾ, ಗಡಿಯಾರ್‌ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರು  ಇಬ್ರಾಹಿಂಗಡಿಯಾರ್, ಯೋಗೆಶ್ – ಗ್ರಾಂಡ್ ಸ್ಟೇಶನರಿ,  ನವೀದ್ ಮಗುಂಡಿ, ಸ್ಟ್ರೈಕರ್ಸ್ನ ವ್ಯವಸ್ಥಾಪಕ ನಿರ್ದೇಶಕರು  ರಾಮಚಂದ್ರ ಹೆಗ್ದೆ, ತನ್ವೀರ್‌ಅರಿಬ್‌ಗ್ರೂಪ್,  ವಾಸು ಶೆಟ್ಟಿ – ಬಿಟಾನೀಯಾ,  ಪ್ರಭಾಕರ್ ಸುವರ್ಣ, ಅಧ್ಯಕ್ಷರು ಬಿಲ್ಲವಾಸ್‌ದುಬಾಯಿ,  ಶಶಿಧರ್ ನಾಗರಾಜಪ್ಪ, ಕನ್ನಡ ಪಾಠಶಾಲೆ,  ಮಲ್ಲಿಕಾರ್ಜುನಗೌಡ ಪೂರ್ವಅಧ್ಯಕ್ಷರು, ಕನ್ನಡಿಗರುದುಬಾಯಿ ಭಾಗಿಗಳಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಪಂದ್ಯಾಟದ ಕಾರ್ಯಕ್ರಮ ನಿರೂಪಣೆಯನ್ನು ವಿಘ್ನೇಶ್‌ಕುಂದಾಪುರ ನೆರವೇರಿಸಿ ಕೊಟ್ಟರು. ಕರ್ನಾಟಕ ಸಂಘ ಶಾರ್ಜಾದ ಸರ್ವ ಸದಸ್ಯರುಗಳ ಪೂರ್ವಭಾವಿ ತಯಾರಿಯೊಂದಿಗೆ ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು ಸಹಕಾರ ನೀಡಿರುವ ಎಲ್ಲಾ ಪ್ರಾಯೋಜಕರುಗಳಿಗೆ ಎಲ್ಲಾ ತಂಡಗಳ ಆಟಗಾರರು ಮತ್ತುಕ್ರೀಡಾಕೂಟದಲ್ಲಿ ಭಾಗಿಗಳಾದ ಎಲ್ಲಾಅಹ್ವಾನಿತರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಅಧ್ಯಕ್ಷರಾದ  ಎಂ.ಇ. ಮೂಳೂರ್ ರವರುಕರ್ನಾಟಕ ಸಂಘ ಶಾರ್ಜಾದ ಪರವಾಗಿ ಮಾಧ್ಯಮದ ಮೂಲಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು