ಮುಂಬೈ: ಬೊರೊಸಿಲ್ ರಿನೀವಬಲ್ಸ್ ಎಂಬ ಸೋಲಾರ್ ಗ್ಲಾಸ್ ತಯಾರಕ ಕಂಪನಿಯ ಷೇರುಗಳಲ್ಲಿ ಬುಧವಾರ ೧೧%ಗಿಂತ ಅಧಿಕ ಏರಿಕೆ ಕಂಡುಬಂದಿದ್ದು, ದಿನದ ಅಂತ್ಯಕ್ಕೆ ೬೦೯ ರೂಪಾಯಿಗೆ ತಲುಪಿದೆ.
ಈ ಕಂಪನಿ ಮಂಗಳವಾರದ ವಹಿವಾಟಿನಲ್ಲಿ ಶೇ.೧೯ರಷ್ಟು ಏರಿಕೆ ಕಂಡಿತ್ತು.
ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಡಿ ೧ ಕೋಟಿ ಮನೆಗಳ ಮೇಲ್ಘಾವಣಿಯಲ್ಲಿ ಸರ್ಕಾರದಿಂದ ಸೋಲಾರ್ ಪ್ಯಾನಲ್ ಅಳವಡಿಸಲಾಗುವುದು ಎಂದು ಪ್ರದಾನಿ ನರೇಂದ್ರ ಮೋದಿಯವರು ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಇದೇ ರೀತಿ ವೆಬ್ಸಾಲ್ ಎನರ್ಜಿ ಸಿಸ್ಟಮ್, ಸ್ಟರ್ಲಿಂಗ್ & ವಿಲ್ಸನ್ ರಿನ್ಯೂವೆಬಲ್ ಎನರ್ಜಿ, ವರಿ ರಿನ್ಯೂವೆಬಲ್ಸ್ ಟೆಕ್ನಾಲಜಿಸ್ ಮತ್ತು ಟಾಟಾ ಪವರ್ ಗಳಂತಹ ಸೌರ ಶಕ್ತಿ ಉದ್ಯಮಕ್ಕೆ ಸಂಬಂಧಿಸಿದ ಷೇರುಗಳಲ್ಲೂ ಏರಿಕೆ ಕಂಡುಬಂದಿದೆ.
ಬೊರೊಸಿಲ್ ರಿನೀವಬಲ್ಸ್ ನ ಷೇರುಗಳು ೧೭ ಪೈಸೆಯಿಂದ ೬೦೦ ರೂಪಾಯಿ ತಲುಪುವ ಮೂಲಕ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿತ್ತು.