News Karnataka Kannada
Monday, April 29 2024
ಹೊರನಾಡ ಕನ್ನಡಿಗರು

ದುಬೈ ಗಡಿನಾಡ ಉತ್ಸವ 2023: ಆಮಂತ್ರಣ ಪತ್ರಿಕಾ ಬಿಡುಗಡೆ ಮಾಡಿದ ಹಾಸ್ಯ ನಟ ಸಾದುಕೋಕಿಲ

ದುಬೈನಲ್ಲಿ ಡಿ.10 ರಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯು.ಎ.ಇ. ದುಬೈ ಘಟಕದ ವತಿಯಿಂದ ಅದ್ದೂರಿಯಾಗಿ ನಡೆಯಲಿರುವ "ದುಬೈ ಗಡಿನಾಡ ಉತ್ಸವ-2023"ಕಾರ್ಯಕ್ರಮದ ಆಮಂತ್ರಣ ಪತ್ರಿಕಾ ಬಿಡುಗಡೆ ಮಾಡಿದ ಕನ್ನಡ ಚಿತ್ರರಂಗದ ಹಾಸ್ಯ ನಟ ಸಂಗೀತ ನಿರ್ದೇಶಕ ಸಾದುಕೋಕಿಲರವರು ಮಾತನಾಡುತ್ತಾ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಗಳನ್ನು ಉಳಿಸುವಲ್ಲಿ ಗಡಿನಾಡಿನ ಕನ್ನಡಿಗರ ಪಾತ್ರ ಬಹಳ ದೊಡ್ಡದು ಎಂದರು.
Photo Credit : News Kannada

ದುಬೈ ‌: ದುಬೈನಲ್ಲಿ ಡಿ.10 ರಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯು.ಎ.ಇ. ದುಬೈ ಘಟಕದ ವತಿಯಿಂದ ಅದ್ದೂರಿಯಾಗಿ ನಡೆಯಲಿರುವ “ದುಬೈ ಗಡಿನಾಡ ಉತ್ಸವ-2023″ಕಾರ್ಯಕ್ರಮದ ಆಮಂತ್ರಣ ಪತ್ರಿಕಾ ಬಿಡುಗಡೆ ಮಾಡಿದ ಕನ್ನಡ ಚಿತ್ರರಂಗದ ಹಾಸ್ಯ ನಟ ಸಂಗೀತ ನಿರ್ದೇಶಕ ಸಾದುಕೋಕಿಲರವರು ಮಾತನಾಡುತ್ತಾ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಗಳನ್ನು ಉಳಿಸುವಲ್ಲಿ ಗಡಿನಾಡಿನ ಕನ್ನಡಿಗರ ಪಾತ್ರ ಬಹಳ ದೊಡ್ಡದು. ಅದರಲ್ಲಿ ಅನಿವಾಸಿ ಕನ್ನಡಿಗರ ಪಾತ್ರಕ್ಕೆ ನನ್ನ ದೊಡ್ಡ ಸೆಲ್ಯೂಟ್. ಕೆ.ಪಿ.ಸಿ.ಸಿ.ಯ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ಈಗ ನಾನು ದುಡಿಯುತ್ತಿದ್ದೆನೆ ಸರಕಾರದ ವತಿಯಿಂದ ಗಡಿನಾಡಿನ ಕನ್ನಡಿಗರಿಗೆ ಏನೂ ಯಾವ ರೀತಿಯ ಅನುದಾನ ಬೇಕು ಅದನ್ನು ತೆಗಿಸಿಕೊಡುತ್ತನೆ ಎಂದು ಕರೆ ನೀಡಿದರು. ಹಾಗೂ ನಡೆಯಲಿರುವ ದುಬೈ ಗಡಿನಾಡ ಉತ್ಸವ ಕಾರ್ಯಕ್ರಮಕ್ಕೆ ಶುಭವನ್ನು
ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬಂದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದ ಕೆ.ಎನ್.ಆರ್.ಐ.ಫಾರಂನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಮಾತನಾಡುತ್ತಾ ಗಡಿನಾಡಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೋಡಿ ತುಂಬ ಸಂತೋಷವಾಯಿತು.ಯುಎಇಯಲ್ಲಿ ಇರುವ ಗಡಿನಾಡಿನ ಕನ್ನಡಿಗರ ತಾಕತ್ತು ಏನೆಂಬುದನ್ನು ಕಳೆದ ವರ್ಷದಿಂದ ಯುಎಇಯ ಕನ್ನಡಿಗರಿಗೆ ತೋರಿಸಿಕೊಟ್ಟಿದಿರಿ.ಯುಎಇಯಲ್ಲಿ ಇರುವ ಕನ್ನಡಿಗರ ಒಂದೇ ಒಂದು‌ ಆಶಯ ದುಬೈನಲ್ಲಿ ಕನ್ನಡ ಭವನ ನಿರ್ಮಾಣ ಮಾಡೋದು ಹಾಗೂ ಗಡಿನಾಡಿನ ಅನಿವಾಸಿ ಕನ್ನಡಿಗರ ಕಷ್ಟ ಕಾರ್ಪಣ್ಯ ಬಗ್ಗೆ ‌ಸರಕಾರ ಎಚ್ಚೆತ್ತು ಕೊಳ್ಳುವಂತಹ ಕಾರ್ಯಕ್ರಮ ಮಾಡುತಿದ್ದಿರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಈ ವರ್ಷದ ಹಾಗೂ ಮುಂದಿನ ವರ್ಷದಿಂದ ನಡೆಯುವ ಗಡಿನಾಡಿನ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಮತ್ತು ನನ್ನ ಸಂಸ್ಥೆಯ ಸಭಾಂಗಣದಲ್ಲಿ ಗಡಿನಾಡಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದಕ್ಕೆ ನನಗೆ ತುಂಬಾ ಸಂತೋಷವಾಯಿತ್ತು.ಗಡಿನಾಡಿನ ಕನ್ನಡಿಗರ ಮುಂದಿನ ವರ್ಷದ ಯಾವುದೇ ರೀತಿಯ ಕಾರ್ಯಕ್ರಮದ ಸಭೆಗಳು ಇದ್ದರೆ ನನ್ನ ಸಭಾಂಗಣವು ಯಾವಾಗಲು ತೆರೆದುಕೊಂಡು ಇರುತ್ತದೆ ಎಂದು ಹೇಳುತ್ತ ಕಾರ್ಯಕ್ರಮ ಯಶಸ್ವಿಯಾಗಿ ಸಾಗಲಿ ಎಂದು ಶುಭವನ್ನು ಹಾರೈಸಿದರು.

ಡಿ.6 ರಂದು ಸಂಜೆ ಆರು ಗಂಟೆಗೆ ನಗರದ ಫಾರ್ಚೂನ್ ಆಟ್ರೂಯ್ಯುನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ನ್ಯಾ.ಇಬ್ರಾಹಿಂ ಕಲೀಲ್ ಅಧ್ಯಕ್ಷತೆಯನ್ನು ವಹಿಸಿದ್ದರು.ಬ್ರಾಹ್ಮಣ ಸಮಾಜ ಯು.ಎ.ಇ.ಯಾ ಅಧ್ಯಕ್ಷರಾದ ಸುಧಾಕರ ರಾವ್ ಪೇಜಾವರ, ಅಶ್ರಫ್ ಎಸ್.ಮಂತೂರು,ರತ್ನಾಕರ ಮಲ್ಲಾರ್,ದುಬೈ ಗಡಿನಾಡ ಉತ್ಸವದ ಸಂಚಾಲಕರಾದ ಝಡ್ ಕಯ್ಯಾರ್,ಸಂಯೋಜಕರಾದ ಎ.ಆರ್. ಸುಬ್ಬಯ್ಯಕಟ್ಟೆ,ಘಟಕದ ಪ್ರದಾನ ಕಾರ್ಯದರ್ಶಿ ಅಮರ್ ದೀಪ್ ಕಲ್ಲೂರಾಯ,ಪದಾಧಿಕಾರಿಗಳಾದ ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್, ಮಂಜುನಾಥ ಕಾಸರಗೋಡು, ಅಮನ್ ತಲೆಕಳ,ಅಶ್ರಫ್ ಪಿ.ಪಿ.,ಅನೀಶ್ ಮಡಂದೂರು,ಯುಎಇಯ ಕರ್ನಾಟಕದ ಪತ್ರಿಕಾ ಪ್ರತಿನಿಧಿ ವಿವೇಕ್ ಆನಂದ್ ಉಪಸ್ಥಿತರಿದ್ದರು.ಶ್ರೀಮತಿ ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.

ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಘಟಕದ ಪ್ರದಾನ ಕಾರ್ಯದರ್ಶಿ ಅಮರ್ ಕಲ್ಲೂರಾಯರು ಮಾತನಾಡುತ್ತಾ ಡಿ.10 ರಂದು ಸಂಜೆ 3.30 ರಿಂದ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಸಂಪೂರ್ಣ ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು.
ನಗರದ ಅಲ್ ಗಿಸಾಸ್ ನ ವುಡ್ಲ್ಯಾಮ್ ಪಾರ್ಕ್ (Woodlem park School) ಶಾಲೆಯ ಸಭಾಂಗಣದಲ್ಲಿ ಮಧ್ಯಾಹ್ನ ಮೂರರಿಂದ ವಿವಿಧ ಕ್ಷೇತ್ರದ ಗಣ್ಯತಿ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿದೆ.ಕರ್ನಾಟಕ ಸರಕಾರದ ಲೊಜೆಸ್ಟಿಕ್ ಕೌನ್ಸಿಲರ್ ನ ಅಧ್ಯಕ್ಷರಾದ ಎಸ್.ಬಸವರಾಜ ಹೊರಟ್ಟಿ,ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಕರ್ನಾಟಕ ಸರಕಾರದ ಸಂಸದರಾದ ಐ.ಹನುಮಂತಯ್ಯ,ಮಂಜೇಶ್ವರದ ಜನಪ್ರಿಯ ಶಾಸಕರಾದ ಎ.ಕೆ.ಎಮ್.ಅಶ್ರಫ್,ಯುಎಇ ಸರಕಾರದ ಪರಿಸರ ಮತ್ತು ನೀರಾವರಿ ಮಾಜಿ ಸಚಿವರಾದ ಡಾ.ಎಚ್.ಈ.ಮಹಮ್ಮದ್ ಸಾಹಿದ್ ಅಲ್ ಕಿಂಡಿ,ದುಬೈ ಕೌನ್ಸಲೇಟ್ ನ ಭಾರತದ ಜನರಲ್ ಕೌನ್ಸಿಲರ್ ಸತೀಶ್ ಕುಮಾರ್ ಶಿವಮ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು.

ಎಸ್ಡಿ ಸಿ.ಸಿ. ಬ್ಯಾಂಕ್ ನ ಆಡಳಿತ ನಿರ್ದೇಶಕರಾದ ರಾಜೇಂದ್ರ ಕುಮಾರ್ ರವರನ್ನು “ದುಬೈ ಶ್ರೇಷ್ಠ ಕನ್ನಡಿಗ” ಪ್ರಶಸ್ತಿ ನೀಡಲಾಗುವುದು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಲಿದ್ದರೆ.ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಘಟಕದ ಗೌರವ ಅಧ್ಯಕ್ಷರಾದ ಅಬ್ದುಲ್ಲಾ ಮದುಮೂಲೆ ಮಾಡಲಿದ್ದರೆ.

ಗಡಿನಾಡ ರತ್ನ ಪ್ರಶಸ್ತಿ:
ಸಮಾಜ ಸೇವೆಯ ಸಾಧನೆಯನ್ನು ಗುರುತಿಸಿ ಜಫ್ರುಲ ಖಾನ್,ಜೋಸೆಫ್ ಮಥಯಿಸ್,ಅಶ್ರಫ್ ಶಾಹ ಮಂತೂರು,ಎನ್.ರಮಾನಂದ ಪ್ರಭು ಸಿ.ಎ.ಯವರಿಗೆ ಗಡಿನಾಡ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸಮಾಜ ಸೇವಕರಾದ ಸುಧಾಕರ ರಾವ್ ಪೇಜಾವರ ದುಬೈ,ಡಾ.ಎಸ್.ಮಲ್ಲಿಕಾರ್ಜುನ ಎಸ್.ನಾಸಿ,ಡಾ
ಆರ್.ಸಿಬಗುತುಲ್ಲ ಶರೀಫ್,ಅಶ್ರಫ್ ಕಾರ್ಳೆ,ಫಾರುಕ್ ಚಂದ್ರನಗರ,ಶಾಹೂಲ್ ಹಮೀದ್ ತಂಗಲ್ ಮಲ್ಲಿಗೆ,ಆಶೀಫ್ ಮೇಲ್ಪರಂಬರವರಿಗೆ ಸಾಧಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ ಕಲಾವಿದರಿಂದ “ಮೋಹನ ಮುರಳಿ” ಯಕ್ಷಗಾನ ನೃತ್ಯ ನಾಟಕ,ಯುಎಇಯ ಪ್ರಸಿದ್ಧ ನೃತ್ಯ ಕಲಾವಿದರಿಂದ “ನೃತ್ಯ ವೈಭವ”, ಯುಎಇಯಲ್ಲಿ ಇರುವ ಗಡಿನಾಡಿನ ಪ್ರಸಿದ್ಧ ಗಾಯಕ ಗಾಯಕಿಯರಿಂದ “ಸಂಗೀತ ರಸಸಂಜೆ”,ಹೆಣ್ಣು ಹುಲಿ ನೃತ್ಯ ಹಾಗೂ ದಫ್ ಮುಟ್ಟ್,ಕೋಲ್ ಕ್ಕಳಿ ಇನ್ನಿತರ ಕಾರ್ಯಕ್ರಮಗಳು ಜರುಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು