News Karnataka Kannada
Monday, April 29 2024
ಅಮೇರಿಕಾ

ಏಐ ಬಳಸಿ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲು ಚೀನಾ ಸಂಚು: ಮೈಕ್ರೊಸಾಫ್ಟ್‌

ಭಾರತದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲಿ ಚೀನಾ ಏಐ ಬಳಸಿಕೊಂಡು ತನ್ನ ಹಿತಕ್ಕೆ ತಕ್ಕ ವಿಷಯವನ್ನು ಹರಡುವ ಕೆಲಸ ಮಾಡಬಹುದು ಎಂದು ಟೆಕ್‌ ದಿಗ್ಗಜ ಮೈಕ್ರೊಸಾಫ್ಟ್‌ ಎಚ್ಚರಿಸಿದೆ.
Photo Credit : NewsKarnataka

ನ್ಯೂಯಾರ್ಕ್:‌ ಭಾರತದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲಿ ಚೀನಾ ಏಐ ಬಳಸಿಕೊಂಡು ತನ್ನ ಹಿತಕ್ಕೆ ತಕ್ಕ ವಿಷಯವನ್ನು ಹರಡುವ ಕೆಲಸ ಮಾಡಬಹುದು ಎಂದು ಟೆಕ್‌ ದಿಗ್ಗಜ ಮೈಕ್ರೊಸಾಫ್ಟ್‌ ಎಚ್ಚರಿಸಿದೆ.

ಏಐ ಬಳಸಿ ತಯಾರಿಸಲಾದ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಭಾರತ, ದಕ್ಷಿಣ ಕೊರಿಯಾ ಮತ್ತು ಅಮೇರಿಕಾದ ಜನತೆಯಲ್ಲಿ ಚೀನಾ ತನ್ನ ಅನುಕೂಲಕ್ಕೆ ತಕ್ಕ ಯೋಚನೆಗಳನ್ನು ಬಿತ್ತುವ ಸಾಧ್ಯತೆಯಿದೆ. ಈ ಕೆಲಸದಲ್ಲಿ ಉತ್ತರ ಕೊರಿಯಾ ಕೂಡ ಕೈಜೋಡಿಸಲಿದೆ.

ಭಾರತದಲ್ಲಿ ಏ.೧೯ರಿಂದ ಜೂ.೪ರ ವರೆಗೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ದಕ್ಷಿಣ ಕೊರಿಯಾದಲ್ಲಿ ಏ.೧೦ರಂದು ಚುನಾವಣೆಯಿದ್ದು, ಅಮೇರಿಕಾ ಅಧ್ಯಕ್ಷೀಯ ಚುನಾವಣೆ ನ.೫ರಂದು ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು