News Karnataka Kannada
Sunday, May 05 2024
ಹೊರನಾಡ ಕನ್ನಡಿಗರು

ಅಬುಧಾಬಿ: ಕರ್ನಾಟಕ ಸರ್ಕಾರದ ಕೋಟಿ ಕಂಠ ಹಾಡಿಗೆ ಬೆಂಬಲ ಸೂಚಿಸಿದ ಹೆಮ್ಮೆಯ ದುಬೈ ಕನ್ನಡಿಗರು

Proud Dubai Kannadigas come out in support of Karnataka government's 'Koti Kanth' song
Photo Credit : By Author

ಅಬುಧಾಬಿ: ಕನ್ನಡಿಗರಲ್ಲಿ ನಾಡು ನುಡಿ ಸಂಸ್ಕೃತಿ ಬಗ್ಗೆ ಒಲವು ಮೂಡಿಸುವ ಸಲುವಾಗಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡು ನುಡಿ ಸಂಸ್ಕೃತಿ ಬಗ್ಗೆ ಇರುವ ನಾಡ ಗೀತೆಗಳನ್ನು ಹಾಡಲು ನಾಡಿನ ಸಮಸ್ತ ಜನರಲ್ಲಿ ತಿಳಿಸಿದ್ದು ಕರ್ನಾಟಕ ಸರ್ಕಾರದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಇಲಾಖೆಯು ನನ್ನ ನಾಡು ನನ್ನ ಹಾಡು ಎಂಬ ಶೀರ್ಷಿಕೆಯಲ್ಲಿ ಕೈಗೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಹೆಮ್ಮೆಯ ದುಬೈ ಕನ್ನಡ ಸಂಘದ ಸಾರಥ್ಯದಲ್ಲಿ ಇಂದು ದುಬೈಯಲ್ಲಿ ಕನ್ನಡಿಗರು ಧ್ವನಿಗೂಡಿಸಿದರು.

ವಿಶ್ವದ ಅತೀ ದೊಡ್ಡ ಕಟ್ಟಡ ದುಬೈಯಲ್ಲಿರುವ ಬುರ್ಜ್ ಖಲೀಫಾ ಬಳಿ ಇರುವ ಜದಾಫ್ ಕ್ರೀಕ್ ಸಮುದ್ರ ಕಿನಾರೆಯಲ್ಲಿ ನವೆಂಬರ್ 6ರಂದು ಕನ್ನಡಿಗರು ಕನ್ನಡ ಧ್ವಜ ಹಿಡಿದು ಕರ್ನಾಟಕದ ನಾಡ ಗೀತೆ, ಹಚ್ಚೇವು ಕನ್ನಡದ ದೀಪ, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮುಂತಾದ ಗೀತೆಗಳನ್ನು ಹಾಡುವ ಮೂಲಕ ಕರ್ನಾಟಕ ಸರ್ಕಾರದ ಅಭಿಯಾನದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಇದೇ ವೇಳೆಯಲ್ಲಿ ನಮ್ಮನ್ನು ಅಗಲಿದ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಸ್ಮರಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮಾಜಿ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಸಮಿತಿ ಸದಸ್ಯರಾದ ಪಲ್ಲವಿ ದಾವಣಗೆರೆ, ಅಕ್ರಮ್ ಕೊಡಗು ಮತ್ತು ನಜೀರ ಮಂಡ್ಯ ಮುಂತಾದವರು ಇತರ ಕನ್ನಡಿಗರೊಂದಿಗೆ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಜೊತೆಗೂಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು