News Karnataka Kannada
Sunday, May 05 2024
ಹೊರನಾಡ ಕನ್ನಡಿಗರು

” ಸಂಗೀತ ಸೌರಭ -2021″ ಪ್ರಯುಕ್ತ ” ಗಲ್ಫ್ ಗಾನ ಕೋಗಿಲೆ” ಮಕ್ಕಳ ಹಾಡುವ ಸ್ಪರ್ಧೆ

Signing Show
Photo Credit :

ಫೈನಲ್ಸ್ ಹಂತ ತಲುಪಿದ ಕನ್ನಡಿಗರು ದುಬೈ ತಂಡದ ಸಾರಥ್ಯದಲ್ಲಿ GCC ಕನ್ನಡ ಸಂಘಟನೆಗಳ ಸಹಯೋಗದೊಂದಿಗೆ ನಡೆಯುತ್ತಿರುವ ” ಸಂಗೀತ ಸೌರಭ -2021″ ಪ್ರಯುಕ್ತ ” ಗಲ್ಫ್ ಗಾನ ಕೋಗಿಲೆ” ಮಕ್ಕಳ ಹಾಡುವ ಸ್ಪರ್ಧೆ.

ಕನ್ನಡಿಗರು ದುಬೈ ಸಾರಥ್ಯದಲ್ಲಿ ಹಾಗು GCC ಪರ ಕರ್ನಾಟಕ ಸಂಘಟನೆಗಳ ಸಹಯೋಗದೊಂದಿಗೆ ನಡೆಯುತ್ತಿರುವ “ಸಂಗೀತ ಸೌರಭ -2021″ ಪ್ರಯುಕ್ತ ” ಗಲ್ಫ್ ಗಾನ ಕೋಗಿಲೆ -೨೦೨೧” ಮಕ್ಕಳ ಸಂಗೀತ ಸ್ಪರ್ಧೆಯು ಸೆಮಿ ಫೈನಲ್ಸ್ ಹಂತವನ್ನು ಮುಗಿಸಿ, ಫೈನಲ್ ಪಂದ್ಯದತ್ತ ದಾಪುಗಾಲು ಇಟ್ಟಿದೆ.

ಈ ಕಾರ್ಯಕ್ರಮವು 10.09.2021 ರಂದು ಗಣೇಶ ಚತುರ್ಥಿಯಂದು ಪ್ರಾರಂಭಗೊಂಡು, ಆರಂಭಿಕ ಸುತ್ತಿನಲ್ಲಿ (ಜೂನಿಯರ್ ಮತ್ತು ಸೀನಿಯರ್ಸ್ ವಿಭಾಗದಲ್ಲಿ) ಸುಮಾರು 58 ಸ್ಪಧಿಗಳು ಭಾಗವಹಿಸಿದ್ದರು. ನಂತರ ಕ್ವಾರ್ಟರ್ಸ್ ಫೈನಲ್ಸ್ ಗೆ 38 ಸ್ಪರ್ಧಿಗಳು ಅರ್ಹತೆ ಪಡೆದರು. ತದನಂತರ ಸೆಮಿಫೈನಲ್ಸ್ ನಲ್ಲಿ 21 ಸ್ಪರ್ಧಿಗಳು ಹಣಾಹಣಿ ನಡೆಸಿ ಫೈನಲ್ಸ್ ಗೆ ಅರ್ಹತೆ ಪಡಿದಿರುವ ಸ್ಪರ್ಧಿಗಳು ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತಿದ್ದಾರೆ.

ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾದ ಖ್ಯಾತ ಕನ್ನಡ ಸಿನೆಮಾ ಹಿನ್ನೆಲೆ ಗಾಯಕರುಗಳಾದ ಶ್ರೀಮತಿ. ಮಾನಸ ಹೊಳ್ಳ, ಇನ್ನಿಬ್ಬರು ತೀರ್ಪುಗಾರರಾದ ಶ್ರೀ. ಚಿನ್ಮಯ್ ಆತ್ರೆಯಸ್ ಮತ್ತು ಶ್ರೀಮತಿ. ಆಕಾಂಶ ಬಾದಾಮಿ ಅವರು ಕಾರ್ಯಕ್ರಮ ಶುರುವಾದಾಗಿನಿಂದ ಇಲ್ಲಿಯವರೆಗೆ ನಮ್ಮ ಜೊತೆ ಇದ್ದು, ನಮಗೆ ತಮ್ಮ ಸಹಕಾರವನ್ನು ಕೊಡುತ್ತಾ, ಅದಕ್ಕಿಂತ ಮುಖ್ಯವಾಗಿ ಎಲ್ಲಾ ಸುತ್ತಿನಲ್ಲಿ ಮಕ್ಕಳಿಗೆ ಹಾಡಿದ ನಂತರ ಅತ್ಯಮೂಲ್ಯ ಸಲಹೆಗಳನ್ನು ನೀಡಿವುರುದು ನಿಜಕ್ಕೂ ಶ್ಲಾಘನೀಯ ಮತ್ತು ಎಲ್ಲಾ ಪದಾಧಿಕಾರಿಗಳು, ಪೋಷಕರ ಪ್ರಶಂಸೆಗೆ ಪಾತ್ರವಾಗಿರುವುದನ್ನು ನೆನಪಿಸಕೊಳ್ಳಬಹುದು. ತೀರ್ಪುಗಾರರು ಕೊಟ್ಟಂತಹ ಸಲಹೆಯಿಂದ ಎಷ್ಟೊಂದು ಮಕ್ಕಳು ತಮ್ಮ ಹಾಡಿನ ಪ್ರತಿಭೆ ಯನ್ನು ಉತ್ತಮ ಮಟ್ಟಕ್ಕೆ ಸುಧಾರಿಸಲು ಸಹಾಯವಾಗಿದೆ ಎಂದು ಹಲವಾರು ಪೋಷಕರು ಈ ಕಾರ್ಯಕ್ರಮವನ್ನು ತುಂಬು ಹೃದಯದಿಂದ ಕೊಂಡಾಡಿರುವುದನ್ನು ಮತ್ತು ಇಂತಹ ಕಾರ್ಯಕ್ರಮವನ್ನು ಹಿಂದೆಂದೂ ನೋಡಿರರಿಲ್ಲ ಎಂದು ಹೇಳಿ ಕಾರ್ಯಕ್ರಮದ ಎಲ್ಲಾ ಆಯೋಜಕರಿಗೆ ಹೊಗಳಿಕೆಯನ್ನು ಸಲ್ಲಿಸಿರುವುದನ್ನು ಸ್ಮರಿಸಬಹುದಾಗಿದೆ.

ಈ ಕಾರ್ಯಕ್ರಮಕ್ಕೆ ಪ್ರತಿವಾರವು ಸ್ಪರ್ಧೆಗೆ ಒಬ್ಬ ಗಣ್ಯ ವ್ಯಕ್ತಿಯನ್ನು ಮುಖ್ಯ ಅಥಿತಿಯಾಗಿ, ಶ್ರೀ.ಶ್ರೀಕಾಂತ್ ನಾಗರಾಜ್, ಸೀನಿಯರ್ ಡೈರೆಕ್ಟರ್ PETROFAC (ದುಬೈ) , ಶ್ರೀಮತಿ. ಮಾಧವಿ ಕುಲ್ಕರ್ಣಿ ( ಕುವಾಯ್ತ್), ಶ್ರೀಮತಿ. ವಸಂತ ಅಶೋಕ್ ( ಬೆಂಗಳೂರು), ಶ್ರೀ. ವಿಶ್ವೇಶ್ ಭಟ್ ( ಬೆಂಗಳೂರು), ಶ್ರೀ. ಮಂಜು ( Famous as Drummer Manju, ಇಂಟರ್ನ್ಲಅಶನಲ್ ಡ್ರಮ್ಮರ್) ರವರನ್ನು ಕಾರ್ಯಕ್ರಮಕ್ಕೆ ಕರೆದು ಗೌರವಿಸಲಾಯಿತು.

ಎಲ್ಲಾ ಮುಖ್ಯ ಅಥಿತಿಗಳು ಈ ಕಾರ್ಯಕ್ರಮದ ಬಗ್ಗೆ ಉತ್ತಮ ಪ್ರಶಂಸೆಯನ್ನು ಕೊಟ್ಟು, ಈತರಹದ ಕಾರ್ಯಕ್ರಮಗಳು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಹೊರಗೆ ತರಲು ಸ್ಪೂರ್ತಿಯಾಗಿದೆ ಹಾಗು ಈ ತರಹದ Live ಸ್ಪಧೆಗಳನ್ನು ಇಂದಿಗೂ ನೋಡಿರಲಿಲ್ಲ ಎಂದು ಹಾಡಿ ಹೊಗಳಿದರು. ವಿಶೇಷವಾಗಿ ಈ ಎಲ್ಲಾ ಮಕ್ಕಳು ತಮ್ಮ ತಾಯಿನಾಡಿನಿಂದ ದೂರ ಬಂದು, ಇಲ್ಲಿ ಕಲಿಯುತ್ತಿರುವ ಇಂಗ್ಲಿಷ್ ಮಾಧ್ಯಮದ ನಡುವೆಯೂ ಕನ್ನಡ ಸಿನಿಮಾ ಹಾಡುಗಳನ್ನು ಕಲಿತು ಉತ್ತಮವಾಗಿ ಹಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅತಿಥಿಗಳು ಎಲ್ಲಾ ಮಕ್ಕಳಿಗೆ ಹಾರೈಸಿದರು ಮತ್ತು ಇಂತಹ ಅಪರೂಪದ ಕಾರ್ಯಕ್ರಮ ವನ್ನು ಆಯೋಜಿಸಿರುವ ಕನ್ನಡಿಗರು ದುಬೈ, ಇದಕ್ಕೆ ಕೈ ಜೋಡಿಸಿರುವ ಎಲ್ಲ GCC ಕರ್ನಾಟಕ ಸಂಘಟನೆಗಳನ್ನು ತುಂಬುಹೃದಯದಿಂದ ಪ್ರಶಂಸಿದರು.

ಗಲ್ಫ್ ಗಾನ ಕೋಗಿಲೆ -2021 ಕಾರ್ಯಕ್ರಮವು, ಶುರುವಾದಾಗಿನಿಂದ ಸಂತಸದ ಸಾಗರದಲ್ಲಿದ್ದ ನಮಗೆಲ್ಲರಿಗೂ 29.10.2021 ಅತ್ಯಂತ ದುಃಖ್ಖಭರಿತ ದಿನವಾಗಿತ್ತು ಹಾಗು ಊಹೆಗೂ ಮೀರಿದ ಘಟನೆ ನಡೆದುಹೋಗಿತ್ತು. ಈ ದಿನ ನಾವೆಲ್ಲರೂ ನಮ್ಮ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಹೃದಯಾಘಾತ ದಿಂದ ಕಳೆದುಕೊಂಡು ಈಡೀ ಜಗತ್ತೇ ಶೋಕ ಸಾಗರದಲ್ಲಿ ಬೀಳುವಂತೆ ಮಾಡಿತು. ಇದರ ಬೆನ್ನೆಲ್ಲೇ, ನಾವು ಕತಾರ್ ಕರ್ನಾಟಕ ಸಂಘದ ಅಧ್ಯಕ್ಷ ರಾದ ಶ್ರೀ. ನಾಗೇಶ್ ರಾವ್ ರನ್ನು ಕೂಡ ಹೃದಯಾಘಾತ ದಿಂದ ಕಳೆದು ಕೊಡಿದ್ದು ನಮ್ಮ ದುಃಖ್ಖ ವನ್ನು ದುಪ್ಪಟ್ಟು ಮಾಡಿತು. 30.10.2021 ರಂದು ಈ ಸಂಗೀತ ಸೌರಭ ಕಾರ್ಯಕ್ರಮದ ವೇಧಿಕೆಯಲ್ಲಿ ಎಲ್ಲಾ ಕರ್ನಾಟಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಅಗಲಿದ ನೆಚ್ಚಿನ ” ಅಪ್ಪು” ಗೆ ಮತ್ತು ಶ್ರೀ. ನಾಗೇಶ್ ರಾವ್ ರವರಿಗೆ ನುಡಿನಮನ ವನ್ನು ಸಲ್ಲಿಸಿ ಭಗವಂತಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು ಹಾಗು ಅವರ ಕುಟುಂಬಕ್ಕೆ ದುಃಖ್ಖಭರಿಸುವ ಶಕ್ತಿಯನ್ನು ಕೊಡಲೆಂದು ಪ್ರಾರ್ಥಿಸಲಾಯಿತು.

ಸೆಮಿ ಫೈನಲ್ ನಲ್ಲಿ ಭಾಗವಹಿಸಿದ ಮಕ್ಕಳುಗಳ ಹೆಸರುಗಳು (ಜೂನಿಯರ್ ವಿಭಾಗದಲ್ಲಿ) ಮಾಸ್ಟರ್. ಕಾರ್ತಿಕ್ ( ಓಮನ್), ಕುಮಾರಿ . ಲಿಪಿ ಅಶ್ರಾಯ್ ( ಕುವೈಟ್), ಕುಮಾರಿ. ಕುಮಾರಿ.ಮುಗ್ಧ ಬಂಢಾರಿ ( ಕುವೈಟ್), ಮಾಸ್ಟರ್. ಮಾನ್ವಿತ್( ಬಹರೇನ್), ಕುಮಾರಿ. ನಿಶೆಲ್ ಲೋಬೊ ( ದುಬೈ), ಕುಮಾರಿ.ಪ್ರಕೃತಿ ಶೆಟ್ಟಿ ( ಬಹರೇನ್), ಕುಮಾರಿ.ರೋಹನಿ ರಮಾನಂದ್ ( ಓಮನ್). ಮಾಸ್ಟರ್. ರಿಷಬ್ ಶೈಲೇಶ್ ( ಬಹರೇನ್), ಕುಮಾರಿ. ಸಮನ್ವಿ ಸುಮತ್ ( ಕತಾರ್), ಕುಮಾರಿ. ಶನಲ್ ಲೋಬೊ ( ದುಬೈ) ಮತ್ತು ಕುಮಾರಿ. ಶರ್ವಾಣಿ ಹೊಳ್ಳ ( ಓಮನ್).

ಸೆಮಿ ಫೈನಲ್ ನಲ್ಲಿ ಭಾಗವಹಿಸಿದ ಮಕ್ಕಳುಗಳ ಹೆಸರುಗಳು (ಸೀನಿಯರ್ ವಿಭಾದಲ್ಲಿ) ; ಕುಮಾರಿ. ಅನಘ ಹೊಂಬಾಳಿ ( ಕುವೈಟ್), ಕುಮಾರಿ. ಅನನ್ಯ ಪ್ರಸಾದ್ ( ಓಮನ್), ಮಾಸ್ಟರ್. ಆರುಷ್ ( ಓಮನ್), ಮಾಸ್ಟರ್. ಬಾಲ ಶ್ರೀವತ್ಸ ( ಬಹರೇನ್), ಕುಮಾರಿ. ಭಾಗ್ಯಶ್ರೀ ಭಟ್ ( ಕುವೈಟ್), ಕುಮಾರಿ. ಭಕ್ತಿ ( ದುಬೈ), ಕುಮಾರಿ. ಪ್ರಾಪ್ತಿ ಜಯಾನಂದ್ ( ದುಬೈ), ಮಾಸ್ಟರ್. ಸೂರಜ್ ನವೀನ ( ಓಮನ್), ಕುಮಾರಿ. ಸನ್ನಿಧಿ ಶೆಟ್ಟಿ ( ದುಬೈ), ಕುಮಾರಿ. ತನ್ವಿ ಗಣೇಶ್ ( ಬಹರೇನ್).

ಈ ಸಂಗೀತ ಸೌರಭ ” ಗಲ್ಫ್ ಗಾನ ಕೋಗಿಲೆ-2021″ದ ಮುಖ್ಯ ಪ್ರಾಯೋಜಕ ರಾಗಿರುವ ಶ್ರೀ. ಮೊಹಮ್ಮದ್ ಮುಸ್ತಾಫಾ, Managing Director of EM SQUARE ಹಾಗು ಅವರ ಧರ್ಮಪತ್ನಿ ಶ್ರೀಮತಿ. ಆಸ್ಮಾ ಮುಸ್ತಾಫಾ ರವರು ಸೆಮಿ ಫೈನಲ್ಸ್ ಕಾರ್ಯಕ್ರಮಕ್ಕೆ ಬಂದು ಮೊದಲಿಂದ ಕೊನೆಯವರೆಗೂ ಎರಡು ಸುತ್ತಿನ ಸ್ಪರ್ಧೆಯನ್ನು ವೀಕ್ಷಿಸಿ , ಈ ಕಾರ್ಯಕ್ರಮಕ್ಕೆ ಸಹಯೋಗ ಹಾಗು ಸಹಕಾರ ಹೊಂದಿರುವುದಕ್ಕೆ ಸಂತಸ ಪಡಿಸಿದರು. ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.

ಈ ಕಾರ್ಯಕ್ರಮ ಮುಖ್ಯ ಉಸ್ತುವಾರಿ ವಹಿಸಿರುವ ಶ್ರೀ. ಅರುಣ್ ಕುಮಾರ್ – Cultural Secretary ಕನ್ನಡಿಗರು ದುಬೈ ರವರು ಸೆಮಿಫೈನಲ್ಸ್ ನ ಎರಡು ಸುತ್ತಿನ ನಿರೂಪಣೆ ಯನ್ನು ನಡೆಸಿದರು ಹಾಗು ಸೆಮಿ ಫೈನಲ್ ನ ಮುಕ್ತಯ ಸಮಾರಂಭ ಉದ್ದೇಶಿಸಿ ಮಾತನಾಡುತ್ತಾ, ಈ ಸ್ಪರ್ಧೆಯು ನಡೆದು ಬಂಡ ದಾರಿಯನ್ನು ವಿವರವಾಗಿ ವಿಶ್ಲೇಸಿದರು ಮತ್ತು ಈ ಸ್ಪರ್ಧೆಯ ಉಸ್ತುವಾರಿ ವಹಿಸಲು ನಂಬಿಕೆಯಿಟ್ಟು ಅವಕಾಶ ಮಾಡಿಕೊಟ್ಟು ಸಹಕರಿಸಿದ ಕನ್ನಡಿಗರು ದುಬೈ ನ ಅಧ್ಯಕ್ಷೆ ಶ್ರೀಮತಿ. ಉಮಾ ವಿಧ್ಯಾಧರ್, ಮಾಜಿ ಅಧ್ಯಕ್ಷರುಗಳಾದ ಶ್ರೀ. ಮಲ್ಲಿಕಾರ್ಜುನ ಗೌಡ , ಶ್ರೀ. ವೀರೇಂದ್ರ ಬಾಬು, ಮತ್ತು ಶ್ರೀ. ಸದನ್ ದಾಸ್, ಟೆಕ್ನಿಕಲ್ ಟೀಮ್ ನ ಉಸ್ತುವಾರಿ ಮುಖ್ಯ ಶ್ರೀ. ಶ್ರೀನಿವಾಸ್ ಅರಸು, ಶ್ರೀ. ದೀಪಕ್ ಸೋಮಶೇಖರ್ ರವರಿಗೆ ಧನ್ಯವಾದವನ್ನು ಸಲ್ಲಿಸಿದರು.

ಈ ಕಾರ್ಯಕ್ರಮ ಯಶಸ್ವಿಗೊಳ್ಳಲು ಸಹಕರಿಸಿದ ಎಲ್ಲಾ GCC ಕನ್ನಡ ಸಂಘಟನೆಗಳ ಅಧ್ಯಕ್ಷರುಗಳುಗಳಿಗೆ, ಪದಾಧಿಕಾರಿಗಳಿಗೆ, ಸ್ಪರ್ಧಿಗಳ ಪೋಷಕರುಗಳಿಗೆ ನಮನ ಸಲ್ಲಿಸಿದರು. ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರ ಶ್ರೀ. ಮೊಹಮ್ಮದ್ ಮುಸ್ತಾಫಾ, ಅವರ ಧರ್ಮಪತ್ನಿ ಶ್ರೀಮತಿ. ಆಸ್ಮಾ ಮುಸ್ತಾಫಾ ರವರ ಕಲಾಸೇವೆಯನ್ನು ಹಾಗೂ ಶ್ರೀ. ಮೊಹಮ್ಮದ್ ಮುಸ್ತಫಾ ದಂಪತಿಗಳು ಕನ್ನಡಿಗರು ದುಬೈ ನ ಪೋಷಕರಾಗಿ ಹಲವಾರು ವರ್ಷಗಳ ಸಹಕಾರವನ್ನು ಕೊಡುತ್ತಾ ಬಂದಿರುವುದು ಇಂತಹ ಕಾರ್ಯಕ್ರಮವನ್ನು ನಡೆಸಲು ಸ್ಪೂರ್ತಿಯನ್ನು ಕೊಟ್ಟಿದೆ ಎಂದು ತುಂಬು ಹೃದಯದಿಂದ ಶ್ಲಾಘಿಸಿದರು.

ಕಾರ್ಯಕ್ರಮದ ” ತ್ರಿಮೂರ್ತಿ” ಎಂದೇ ಖ್ಯಾತಿಗೊಂಡಿರುವ ತೀರ್ಪುಗಾರರಾದ ಶ್ರೀಮತಿ . ಮಾನಸ ಹೊಳ್ಳ , ಶ್ರೀ. ಚಿನ್ಮಯ್ ಆತ್ರೆಯಸ್ ಮತ್ತು ಶ್ರೀಮತಿ. ಆಕಾಂಶ ಬಾದಾಮಿ ಯವರ ಅತ್ಯುತ್ತಮ ಸಹಯೋಗ / ಸಹಕಾರಕ್ಕಾಗಿ ವಂದನೆಯನ್ನು ಸಲ್ಲಿಸಲಾಯಿತು.

ಕನ್ನಡಿಗರು ದುಬೈ ನ ಅಧ್ಯಕ್ಷೆ ಶ್ರೀಮತಿ. ಉಮಾ ವಿದ್ಯಾಧರ್, ಮಾಜಿ ಅಧ್ಯಕ್ಷರುಗಳಾದ ಶ್ರೀ. ಮಲ್ಲಿಕಾರ್ಜುನ ಗೌಡ, ಶ್ರೀ. ವೀರೇಂದ್ರ ಬಾಬು, ಶ್ರೀ. ಸದನ್ ದಾಸ್ ಮಾತನಾಡುತ್ತಾ ಈ ಸಂಗೀತ ಸೌರಭ ” ಗಲ್ಫ್ ಗಾನ ಕೋಗಿಲೆ-2021″ ಯು ಕನ್ನಡಿಗರು ದುಬೈ ನ ಬಹಳ ವರ್ಷದ ಕನಸಿನ ಕೂಸಾಗಿದ್ದು ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿರುವುದಕ್ಕೆ ಸಹಕಾರ ಕೊಟ್ಟ ಎಲ್ಲರಿಗೂ ಪ್ರಶಂಸೆ ಯನ್ನು ವ್ಯಕ್ತಪಡಿಸಿದರು.

ಇದು GCC ಕನ್ನಡ ಸಂಘಟನೆಗಳನ್ನು ಒಂದುಗೂಡಿಸುವ ವೇದಿಕೆ ಎಂದು ಕರೆಯಲಾಯಿತು. ಈ ಕಾರ್ಯಕ್ರಮದ ಫೈನಲ್ಸ್ ನ್ನು ದುಬೈ ನ ವೇದಿಕೆಯಲ್ಲಿ ನಡೆಸುವ ಬಗ್ಗೆಯು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗು ತಿಳಿಸಲಾಯಿತು. ದಿನಾಂಕವನ್ನು 21.01.2022 ( ತಾತ್ಕಾಲಿಕವಾಗಿ) ಹಾಗು ಸ್ಥಳವನ್ನು ನಿಗದಿಪಡಿಸಿ, ಎಲ್ಲಾ GCC ಕರ್ನಾಟಕ ಸಂಘದ ಅಧ್ಯಕ್ಷ ರೊಂದಿಗೆ ಚರ್ಚಿಸಿ ಪ್ರಕಟಣೆ ಗೊಳಿಸುವುದಾಗಿ ಹೇಳಿದರು.

ಅಂತಿಮ ಸುತ್ತಿನ ವಿಜೇತರು “ಗಲ್ಫ್ ಗಾನ ಕೋಗಿಲೆ-2021 ” ಬಿರುದಿನ ಜೊತೆಗೆ ಟ್ರೋಫಿ ಮತ್ತು ನಗದು ಪುರಸ್ಕಾರವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಮತ್ತು ರನ್ನರ್ ಅಪ್ ಪ್ರಶಸ್ತಿ, ಇನ್ನಿತರ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಬಹರೈನ್ ಕರ್ನಾಟಕ ಸಂಘ ಅಧ್ಯಕ್ಷ ರಾದ ಶ್ರೀ. ಪ್ರದೀಪ್ ಶೆಟ್ಟಿ, ಓಮನ್ ಕರ್ನಾಟಕ ಸಂಘ ಅಧ್ಯಕ್ಷ ರಾದ ಶ್ರೀ. ಪ್ರಸಾದ್ ಹಾಗೂ ಕುವಾಯ್ತ್ ಕರ್ನಾಟಕ ಸಂಘ ಅಧ್ಯಕ್ಷ ರಾದ ಶ್ರೀ. ರೇಣುಸಿದ್ದಯ್ಯ ಹೊಂಬಾಳಿ ಯವರು ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ತಾವುಗಳು ಇಂತಹ ಅಮೂಲ್ಯ ಕಾರ್ಯಕ್ರಮದ ಭಾಗವಾಗಿರುದಕ್ಕೆ ಮತ್ತು ಕನ್ನಡಿಗರು ದುಬೈ ನ ಜೊತೆ ಕೈ ಜೋಡಿಸಿರುವುದಕ್ಕೆ ಸಂತಸ ವಾಗಿದೆ ಎಂದು ತಿಳಿಸಿದರು.

ಇಂಥಹ ಅಪರೂಪದ ಕಾರ್ಯಕ್ರಮವು GCC ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ನೀಡಿದೆ ಹಾಗು ಎಲ್ಲಾ ತೀರ್ಪುಗಾರರ ಸಲಹೆಗಳು ಮಕ್ಕಳ ಸಂಗೀತ ಭವಿಷ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ತೀರ್ಪುಗಾರರಾದ ಶ್ರೀಮತಿ . ಮಾನಸ ಹೊಳ್ಳ , ಶ್ರೀ. ಚಿನ್ಮಯ್ ಆತ್ರೆಯಸ್ ಮತ್ತು ಶ್ರೀಮತಿ. ಆಕಾಂಶ ಬಾದಾಮಿ ಮಾತನಾಡುತ್ತ ಈ ಕಾರ್ಯಕ್ರಮಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟಿದಕ್ಕೆ ತುಂಬಾ ಖುಷಿಯನ್ನು ಕೊಟ್ಟಿದೆ ಹಾಗು ಇಂತಹ ಅಪರೂಪದ Live ಕಾರ್ಯಕ್ರಮವನ್ನು ಆಯೋಜಿಸಿದ ಕನ್ನಡಿಗರು ದುಬೈನ ತಂಡಕ್ಕೆ ಮತ್ತುGCC ಸಂಘಟನೆಗಳ ಅಧ್ಯಕ್ಷರುಗಳಿಗೆ ಧನ್ಯವಾದ ಹೇಳಿದರು. ಎಲ್ಲಾ ಮಕ್ಕಳುಗಳು ಎಷ್ಟು ಅಚ್ಚುಕಟ್ಟಾಗಿ ಕನ್ನಡದ ಹಾಡುಗಳನ್ನು ಕಲಿತು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸಿದೆ ಎಂದು ವಿವರಿಸಿದರು.

ಕೊನೆಯದಾಗಿ, ಶ್ರೀ. ಅರುಣ್ ಕುಮಾರ್ ಅವರು ಸೆಮಿಫೈನಲ್ಸ್ ನ ಫಲಿತಂಶವು 26.11.2021 ರಂದು ಎಲ್ಲಾ ತೀರ್ಪುಗರೊಂದಿಗೆ ಚರ್ಚಿಸಿ ಫೈನಲ್ಸ್ ಗೆ ಅರ್ಹತೆ ಪಡೆದ ಸ್ಪರ್ಧಿಗಳ ಹೆಸರುಗಳನ್ನು ಪ್ರಕಟಿಸಲಾಗುವುದೆಂದು ಹೇಳಿದರು ಹಾಗೂ ಮೇಲೆ ಹೇಳಿದ ಹಾಗೆ ಫೈನಲ್ ಕಾರ್ಯಕ್ರಮವನ್ನು ದುಬೈ ನ ವೇದಿಕೆಯಲ್ಲಿ ದಿನಾಂಕ 21.01.2022 ( ತಾತ್ಕಾಲಿಕವಾಗಿ) ಮತ್ತು ವಿವರ ಪಟ್ಟಿಯನ್ನು ಎಲ್ಲಾ ಹಿರಿಯರೊಂದಿಗೆ ಚರ್ಚಿಸಿದ ನಂತರ ಘೋಷಿಸಲಾಗುವುದು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು