News Karnataka Kannada
Friday, May 10 2024
ಹೊರನಾಡ ಕನ್ನಡಿಗರು

ದುಬೈ ದಸರಾ ಕ್ರೀಡೋತ್ಸವ ಕಾರ್ಯಕ್ರಮ

Sports
Photo Credit :

ಅಬುಧಾಬಿ : 26.10.2021 ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಹಬ್ಬ. ಈ ಹಬ್ಬದಲ್ಲಿ ನಡೆಯುವ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಅಷ್ಟೇ ಪ್ರಖ್ಯಾತಿಯನ್ನು ಪಡೆದಿದೆ. ಈ ಕ್ರೀಡೋತ್ಸವ ಲಕ್ಷಾಂತರ ಕನ್ನಡಿಗರ ಕರ್ಮ ಭೂಮಿ ಸಪ್ತ ಸಾಗರದಾಚೆಗಿನ ಸಂಯುಕ್ತ ಅರಬ್ ಸಂಸ್ಥಾನದಲ್ಲೂ ಕೂಡ ಅಷ್ಟೇ ಸಂಭ್ರಮದಿಂದ ನಡೆಸಬೇಕೆಂಬ ಆಶಯದೊಂದಿಗೆ, ದುಬೈ ಕೇಂದ್ರೀಕೃತವಾಗಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಯುಎಇ ಕನ್ನಡಿಗರ ತಂಡವು ದುಬೈ ಯುವರಾಜ ಶೇಕ್ ಹಂದಾನ್, ಎಲ್ಲಾ ವರ್ಷ ಕರೆ ನೀಡುವ ದುಬೈ ಫಿಟ್ನೆಸ್ ಚಾಲೆಂಜ್ ಮತ್ತು ಕನ್ನಡ ರಾಜ್ಯೋತ್ಸವ, ಮೈಸೂರು ದಸರಾ ಪ್ರಯುಕ್ತ ಯುಏಇಯಲ್ಲಿ ನೆಲಸಿರುವ ಸಮಸ್ತ ಕನ್ನಡಿಗರಿಗಾಗಿ ಕಳೆದ ನಾಲ್ಕು ವರ್ಷದಿಂದ ಪ್ರಾರಂಭಿಸಿದ ಕಾರ್ಯಕ್ರಮವೇ “ದುಬೈ ದಸರಾ ಕ್ರೀಡೋತ್ಸವ”.

ಈ ಬಾರಿಯ ದುಬೈ ದಸರಾ ಕ್ರೀಡೋತ್ಸವ – 2021ನ್ನು ದಿನಾಂಕ 29/10/2021 ಶುಕ್ರವಾರದಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ಮತ್ತು ದುಬೈ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಾದಲ್ ಶಿಬಾದಲ್ಲಿರುವ ಕೆಂಟ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಅಂತರಾಷ್ಟ್ರೀಯ ಕಬಡ್ಡಿ ಪಟು ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತ ಭಾರತ ಮತ್ತು ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕರಗಿದ್ದ ಮತ್ತು ಪ್ರಸ್ತುತ ದೆಹಲಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸಿ ಹೊನ್ನಪ್ಪ ಗೌಡ ಅವರು ಈ ಕ್ರೀಡೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಕರ್ನಾಟಕದ ಹೆಸರನ್ನು ಬಾನೆತ್ತರಕ್ಕೆ ಬೆಳಸಿದ ಕ್ರೀಡಾಪಟುಗಳನ್ನು ಗುರುತಿಸಿ ಎಲ್ಲಾ ವರ್ಷ ನೀಡುತ್ತಾ ಬರುತ್ತಿರುವ ಪ್ರತಿಷ್ಠಿತ :ದುಬೈ ಕ್ರೀಡಾ ರತ್ನ” ಪ್ರಶಸ್ತಿಯನ್ನು ಈ ಬಾರಿ ಭಾರತವನ್ನು ಹಲವು ಬಾರಿ ಪ್ರತಿನಿಧಿಸಿ ಭಾರತದ ಮತ್ತು ಕರ್ನಾಟಕದ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಬೆಳಗಿಸಿದ ಹೆಮ್ಮೆಯ ಕನ್ನಡಿಗ ಅರ್ಜುನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಮ್ಮೆಯ ಕನ್ನಡಿಗ ಡಾ.ಹೊನ್ನಪ್ಪ ಗೌಡ ಅವರಿಗೆ ನೀಡಿ ಗೌರವಿಸಲಿದ್ದಾರೆ.

ಅತಿಥಿಗಳಾಗಿ ಎಮ್ ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಸಂಸ್ಥೆಯ ಮಾಲಿಕರಾದ ಕನ್ನಡ ಸಂಘಟನೆಗಳ ಮಹಾ ಪೋಷಕರು ಕೊಡುಗೈ ದಾನಿಗಳು ಆದ ಹೆಮ್ಮೆಯ ಕನ್ನಡಿಗ ಮೊಹಮ್ಮದ್ ಮುಸ್ತಫಾ ಅವರು ಆಗಮಿಸಲಿದ್ದು ಕನ್ನಡಿಗರಿಗೆ ಮತ್ತು ಕನ್ನಡ ಸಂಘಳಿಗೆ ಅವರು ಮಾಡಿದ ಸೇವೆಯನ್ನು ಗುರುತಿಸಿ ಮುಸ್ತಫಾ ದಂಪತಿಗಳನ್ನು ಗೌರವಿಸಲಿದ್ದಾರೆ, ಸಮಾರಂಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕದ ಮೂಲೆ ಮೂಲೆಗಳಿಂದಲೂ ಬಂದು ಇಲ್ಲಿನ ವಿವಿಧ ಎಮಿರೇಟುಗಳಲ್ಲಿ ನೆಲಸಿರುವ ಸಾವಿರಾರು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವದು ವಿಶೇಷ. ಕೆಲ ದಿನಗಳ ಹಿಂದೆ ಯುಎಇ ಕನ್ನಡಿಗರ ದಸರಾ ಕಪ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯ ಮುಗಿದಿದ್ದು ಕಳೆದ ಹಲವು ದಿನಗಳಿಂದ ಆನ್ಲೈನ್ ಮುಖಾಂತರ ಹಲವು ಆಟ ಮತ್ತು ಕಾರ್ಯಕ್ರಮ ನಡೆಯುತ್ತಿದ್ದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪಾರಿತೋಷಕ ಮತ್ತು ಸನ್ಮಾನ ಪತ್ರ ನೀಡಲಿದೆ. ಹಾಗೆ ಯುಎಇ ದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ಮಕ್ಕಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಶೇಕ್ ಹಂದಾನ್, ಶೇಕ್ ಸುಲ್ತಾನ್ ಪ್ರಶಸ್ತಿ ಪಡೆದ ಕನ್ನಡ ಮಕ್ಕಳಿಗೆ ಪ್ರತಿಭಾ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ.

ದಸರಾ ಕುರಿತು ಕನ್ನಡ ಮಕ್ಕಳ ಭಾಷಣ ಸ್ಪರ್ಧೆ ಮತ್ತು ಅವರಿಗೆ ಬಹುಮಾನ ವಿತರಣೆ, ಕವಿಗೋಷ್ಠಿ, ಕನ್ನಡ ರಸಪ್ರಶ್ನೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ, ರಂಗೋಲಿ ಸ್ಪರ್ಧೆ ಮತ್ತು ಬಹುಮಾನ ವಿತರಣೆ, ಅಂತಾಕ್ಷರಿ ಸ್ಪರ್ಧೆ ಮತ್ತು ಬಹುಮಾನ ವಿತರಣೆ, ಕೋವಿಡ್ ಸಮಯದಲ್ಲಿ ಮುಖ್ಯ ವಾಹಿನಿಯಲ್ಲಿ ಸೇವೆ ನೀಡಿದ ಅರೋಗ್ಯ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೋವಿಡ್ ಯೋಧರಿಗೆ ಸನ್ಮಾನ ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿದೆ.

ಸಮಾರಂಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ , ಕ್ರೀಡಾಕೂಟವು ಅಕ್ಟೊಬರ್ ಬೆಳಿಗ್ಗೆಯಿಂದ ನಡೆಯಲಿದ್ದು ಅದರಲ್ಲಿ ಗಂಡಸರು ಮತ್ತು ಮಹಿಳೆಯರಿಗೆ ವಾಲಿಬಾಲ್ , ಗಂಡಸರು ಮತ್ತು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಬ್ಯಾಡ್ಮಿಂಟನ್, ಓಟದ ಸ್ಪರ್ಧೆ, ಗಂಡಸರಿಗೆ ಕಾಲ್ಚೆಂಡು, ಮಹಿಳೆಯರಿಗೆ ಅಂತ್ಯಾಕ್ಷರಿ, ರಸಪ್ರಶ್ನೆ, ರಂಗೋಲಿ ಮತ್ತು ಗೊಂಬೆ ಸ್ಪರ್ಧೆಗಳು ನಡೆಯಲಿದೆ ಹಾಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಶ್ರೀಮತಿ ಮಮತಾ ರಾಘವೇಂದ್ರ ಮೈಸೂರು ಅವರು ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದರು.

ಈ ಕಾಯಕ್ರಮದ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಮಮತಾ ಮೈಸೂರು, ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮುಖ್ಯ ಕಾರ್ಯದರ್ಶಿಯಾದ ಸೆಂತಿಲ್ ಬೆಂಗಳೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಹೆಮ್ಮೆಯ ಯುಎಇ ಕನ್ನಡತಿಯರು ಸಂಚಾಲಕಿಯರಾದ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ಅನಿತಾ ಬೆಂಗಳೂರು ಡಾ.ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು, , ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ ಹಾಜರಿದ್ದರು, ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಮತ್ತು ದಸರಾ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಎಲ್ಲರೂ ಈ ಕ್ರೀಡೋತ್ಸವ ಸಮಾರಂಭಕ್ಕೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕಾಗಿ ಮನವಿ ಮಾಡಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು