News Karnataka Kannada
Saturday, May 04 2024
ಹೊರನಾಡ ಕನ್ನಡಿಗರು

ಕೆಐಸಿ ಜಬಲ್ ಅಲಿ ನೂತನ ಸಮಿತಿ ಘಟಕ ರಚನೆ

Photo Credit :

ಕೆಐಸಿ  ಜಬಲ್ ಅಲಿ ನೂತನ ಸಮಿತಿ ಘಟಕ ರಚನೆ

ದುಬೈ: ಪುತ್ತೂರು ತಾಲೂಕಿನ ಕುಂಬ್ರ ಪ್ರದೇಶದಲ್ಲಿ ಸಮನ್ವಯ ವಿದ್ಯಾದಾನ ನೀಡುತ್ತಿರುವ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಇಂದು ಅರಬ್ ರಾಷ್ಟ್ರಾದಾಧ್ಯಂತ ಹಲವಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದ್ದು ಹಲವಾರು ಹಿತೈಶಿ ವರ್ಗವನ್ನು ತನ್ನದಾಗಿಸಿಕೊಂಡಿದೆ. ಇದರ ಮೇಲುಸ್ತುವಾರಿ ಸಮಿತಿ  ಕರ್ನಾಟಕ ಇಸ್ಲಾಮಿಕ್ ಸೆಂಟರ್ ಅಧೀನದಲ್ಲಿ ದುಬೈ ಸಮಿತಿ ಸಹಯೋಗದೊಂದಿಗೆ  ಕೆಐಸಿ  ಜಬಲ್ ಅಲಿ ನೂತನ ಘಟಕವನ್ನು ರಚಿಸಲಾಯಿತು.


ದುಬೈ ಸಮಿತಿ ಅಧ್ಯಕ್ಷರಾದ ಅಶ್ರಫ್ ಖಾನ್ ಮಾಂತೂರ್ ರವರ ಅಧ್ಯಕ್ಷತೆಯಲ್ಲಿ ಅಶ್ರಫ್ ಅಮ್ಜದಿ ಯವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಶಂಸುದ್ದೀನ್ ಹನೀಫಿ ಪ್ರಾರ್ಥಿಸಿದರು. ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆಐಸಿ ಅಕಾಡೆಮಿ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಸರ್ವರ ಸಹಕಾರ ಕೋರಿ, ಪ್ರಸಕ್ತ ಸಂಘ ಸಂಸ್ಥೆಗಳನ್ನು ಪೋಷಿಸ ಬೇಕಾದ ಅಗತ್ಯತೆಯನ್ನು ವಿವರಿಸಿದರು. ಇಂದು ಪೋಷಕರು ತಮ್ಮ ಜೀವನೋಪಾಯಕ್ಕಾಗಿ ಕಡಲಾಚೆಗೆ ಪ್ರಯಾಣಿಸಿ ತನ್ನ  ಮಡದಿ ಮಕ್ಕಳಾದಿಯಾಗಿ ಕುಟುಂಬಿಕರನ್ನು ಸಲಹುವ ಉದ್ದೇಶದಿಂದ ದಿನದ ಹೆಚ್ಚಿನ ಸಮಯನ್ನು ದುಡಿಮೆಯಲ್ಲಿ ಉಪಯೋಗಿಸಿ ಅದರಿಂದ ಸಿಗುವ ಅಲ್ಪ ವೇತನವನ್ನು ತನ್ನ ಕುಟುಂಬಕ್ಕೆ ಕಳುಹಿಸಿಕೊಟ್ಟು, ತನ್ನಲ್ಲೇ ವೆದನೆಗಳನ್ನು ಸಹಿಸಿಕೊಂಡು ಜೀವಿಸುತ್ತಿರುವ ಇಂದಿನ ನಮ್ಮ ಪ್ರವಾಸಿ ಜೀವನದಲ್ಲಿ ನಮಗೆ ಸಿಗುವ ಪುಣ್ಯದಾಯಕ ಕಾರ್ಯವಾಗಿದೆ ಇಂತಹ ಸಂಘ ಸಂಸ್ಥೆಗಳನ್ನು ಪೋಷಿಸುವುದು. ಇಂದು ಸಮುದಾಯದ ಯುವ ತರುಣರು ಅನಾಚಾರ , ಕಳ್ಳತನಗಳಲ್ಲಿ ಭಾಗಿಯಾಗಿ ಅಲೆದಾಟದ ಜೀವನವನ್ನು ನಡೆಸುತ್ತಿದ್ದು ಇವೆಲ್ಲದಕೂ ನಾಂದಿ ಹಾಡಬೇಕಾಗಿದ್ದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಸಮುದಾಯದ ಸಮಾಜದ ಸತ್ಪ್ರಜೆಗಳಾಗಿ ಬೆಳೆಸುವಂತೆ ಕರೆ ನೀಡಿದರು.  

ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ ಯವರು ಮಾತನಾಡಿ ವಿದ್ಯಾ ಸಂಸ್ಥೆಯ  ಕಾರ್ಯ ಚಟುವಟಿಕೆ,  ಅಲ್ಲಿನ ಅಕಾಡೆಮಿ ವಾತಾವರಣ,  ಗಳ ಕುರಿತು ಸವಿವರವಾಗಿ ವಿವರಿಸಿ ಸಮಿತಿ ಭಲವರ್ಧನೆಗೆ ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸುವಂತೆ ಕೇಳಿಕೊಂಡರು.

ಅಶ್ರಫ್ ಅಂಜದಿ ಉಸ್ತಾದ್ ನೂತನ ಸಮಿತಿ ಜವಾಬ್ದಾರಿ ವಹಿಸಿ ಮಾತನಾಡಿ, ಇಂದು ನಮ್ಮ ಸಮುದಾಯವು ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದು , ನಮ್ಮ ಸಂಸ್ಥೆಯು ಎಂಟು ವರ್ಷಗಳ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುತ್ತಿದ್ದು ಇಂದು ಪ್ರಭಾಷಣ ಲೋಕದಲ್ಲಿ ಕೌಸರಿಗಲೆಂಬ ಯುವ ಪ್ರತಿಭೆಗಳನ್ನು ಸಮ್ಮ ಸಮುದಾಯಕ್ಕೆ ಸಮಾಜಕ್ಕೆ ಸಮರ್ಪಿಸಿರುತ್ತೇವೆ. ಆದ್ದರಿಂದ ಮುಂದೆ ಸಂಸ್ಥೆಯು ಬೆಳೆಯುತ್ತಿದ್ದು ನಮ್ಮ ನಿಮ್ಮಲ್ಲೆರ ಸಹಕಾರವು ಅತ್ಯಗತ್ಯವಾಗಿದೆ ಎಂದು ಸರ್ವರ ಸಹಕಾರವನ್ನು ಕೋರಿ ನೂತನ ಸಮಿತಿಗೆ ಚಾಲನೆ ನೀಡಿದರು.

ನೂತನ ಸಮಿತಿ ಪಧಾಧಿಕಾರಿಗಳು:
ಗೌರವಾಧ್ಯಕ್ಷರು : ಮುಹಮ್ಮದ್ ಹಾಜಿ
ಅಧ್ಯಕ್ಷರು : ಆದಂ  ಮುಕ್ರಂಪಾಡಿ
ಉಪಾಧ್ಯಕ್ಷರು : ಶರಫುದ್ದೀನ್ ಇಬ್ರಾಹಿಮ್ ಮೂಡಬಿದ್ರಿ  ನಾಸಿರ್ ಮಂಗಳೂರು
ಪ್ರಧಾನ ಕಾರ್ಯದರ್ಶಿ : ಆಶಿಕ್ ಸಂಪ್ಯ
ಕಾರ್ಯದರ್ಶಿ : ಮಜೀದ್ ಮುಕ್ರಂಪಾಡಿ  ಯಾಕುಬ್ ಕುಂದಾಪುರ
ಕೋಶಾಧಿಕಾರಿ : ಅಬ್ದುಲ್ ರಹ್ಮಾನ್ ಬಪ್ಪಲಿಗೆ
ಸಂಘಟನಾ ಕಾರ್ಯದರ್ಶಿ: ಮುಹಮ್ಮದ್ ಶಾಫಿ ಪೆರ್ಲ ತಾಜುದ್ದೀನ್ ಆದೂರು
ಸಂಚಾಲಕರು : ರಾಫಿ ಮಲಪ್ಪುರಂ ಅಬ್ದುಲ್ ಮಜೀದ್ ಕೊಝಿಕ್ಕೊಡ್ ಹಂಝ ಮಲಪ್ಪುರಂ ಅಬ್ದುಲ್ ಸಲಾಂ ಕನ್ನೂರ್ ಹಮೀದ್ ಕಾಸರಗೋಡು ಶರೀಫ್ ಕನ್ನೂರ್ ಯೂಸುಫ್ ಸಿರಿಯಾ
ಕಾರ್ಯಕಾರಿ ಸಮಿತಿ ಪಧಾಧಿಕಾರಿಗಳಾಗಿ : ಶರೀಫ್ ಮುಸ್ಲಿಯಾರ್ , ಕಾಸರಗೋಡು ಅಶ್ರಫ್ ಅಮ್ಜದಿ ಮಾಡಾವು , ಮುಹಮ್ಮದ್ ಅಲಿ ಪರಂಗಿಪೇಟೆ ಝುಬೈರ್ ಮಲಪ್ಪುರಂ

ಕಾರ್ಯಕ್ರದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆ ಗೊಂಡ ಆದಂ ಮುಕ್ರಂಪಾಡಿ ಪ್ರಧಾನ ಕಾರ್ಯದರ್ಶಿ ಆಶಿಕ್ ಸಂಪ್ಯ ,  ಶರೀಫ್ ಮುಸ್ಲಿಯಾರ್  ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಯ ಬಲ ವರ್ಧನೆಗೆ ಶಕ್ತಿ ಮೀರಿ ತಮ್ಮಿಂದಾಗುವ ರೀತಿಯಲ್ಲಿ ಸಹಕರಿಸುವುದಾಗಿ ಭರವಸೆಯಿತ್ತರು. ನಂತರ ಕೇಂದ್ರ ಸಮಿತಿ ಪಧಾಧಿಕಾರಿಗಳಾದ ಅಶ್ರಫ್ ಅರ್ಥಿಕೆರೆ ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ ಅಬ್ದುಲ್ ಬಾರಿ  ನೂತನ ಸಮಿತಿಗೆ ಶುಭ ಹಾರೈಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು