ಇತ್ತೀಚಿನ ದಿನಗಳಲ್ಲಿ ಕೂದಲನ್ನು ಬೇರೆ ಬೇರೆ ರೀತಿಯ ಸ್ಟೈಲ್‌ಗಳನ್ನು ಮಾಡುತ್ತಾರೆ ಆದರೆ ಅವುಗಳನ್ನು ಮಾಡಲು ಹೆಚ್ಚಿನ ಕೆಮಿಕಲ್‌ಗಳನ್ನು ಉಪಯೋಗಿಸಲಾಗುತ್ತದೆ ಇದರಿಂದ ಕೂದಲಿನ ಶಕ್ತಿ ಕುಂದುತ್ತದೆ ಅಲ್ಲದೇ ನಾನ ರೀತಿಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಆಗಿನ ಕಾಲದಲ್ಲಿ ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಎಣ್ಣೆ ಮತ್ತು ಶಾಂಪೂಗಳಿಂದ ಕೂದಲು ದಟ್ಟವಾಗಿ ಸುಂದರವಾಗಿರುತ್ತಿತ್ತು ಆಗಿನ ಶೈಲಿ ಕೂ ಹಾಗೆ ಇತ್ತು. ಈಗಿನ ಪರಿಸ್ಥಿತಿಯಲ್ಲಿ ಕೂದಲಿನ ಆರೈಕೆ ಮಾಡುವುಕ್ಕೆ ಸಮಯ ಕಡಿಮೆ ಹಾಗಾಗಿ ಈ ಯೋಗಸನಗಳಿಂದ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿವೆ.
ಸರ್ವಾಂಗಾಸನ: ಈ ಆಸನವು ನೆತ್ತಿಯ ರಕ್ತ ಪರಿಚಲನೆಯನ್ನು ಸುಧಾರಿಸಿ, ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುತ್ತದೆ. ಹೀಗಾಗಿ ಹಾರ್ಮೋನ್ ಮಟ್ಟವನ್ನು ನಿಯಂತ್ರಣಕ್ಕೆ ಬರುತ್ತದೆ. ಇದು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ, ಕೂದಲಿನ ಬೆಳವಣಿಗೆಯಾಗುತ್ತದೆ.
ವಜ್ರಾಸನ : ದಿನನಿತ್ಯ ಈ ಆಸನವನ್ನು ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಿ ಕೂದಲು ಉದುರುವಿಕೆಗೆ ಸಮಸ್ಯೆಯನ್ನು ನಿವಾರಿಸುತ್ತದೆ.

ಬಲಯಂ ಮುದ್ರೆ: ಉಗುರುಗಳನ್ನು ಪರಸ್ಪರ ಉಜ್ಜುವುದನ್ನು ಬಲಯಂ ಮುದ್ರೆ ಎನ್ನಲಾಗುತ್ತದೆ. ದಿನಕ್ಕೆ ಐದರಿಂದ ಹತ್ತು ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.

ಉಷ್ಟ್ರಾಸನ : ಉಷ್ಟ್ರಾಸನದಿಂದ ನೆತ್ತಿಯ ಕಡೆಗೆ ರಕ್ತದ ಹರಿವನ್ನು ಪ್ರೇರೇಪಿಸುತ್ತದೆ. ಈ ಮೂಲಕ ಕೂದಲು ಉದುರುವಿಕೆ ಹಾಗೂ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆದು ಸೊಂಪಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ.

ಪಾದಹಸ್ತಾಸನ : ಪ್ರತಿ ದಿನಾಲೂ ಈ ಆಸನವನ್ನು ಮಾಡುವುದರಿಂದ ರಕ್ತ ಪರಿಚಲನೆ ವೇಗವಾಗಿ ಆಗಲು ಸಹಕಾರಿಯಾಗಿದೆ. ಈ ಭಂಗಿಯು ಕೂದಲಿನ ಕೋಶಗಳಿಗೆ ಆಮ್ಲಜನಕವನ್ನು ಒದಗಿ, ಅವುಗಳ ಆರೋಗ್ಯವನ್ನು ಕಾಪಾಡುತ್ತದೆ. ಅದಲ್ಲದೇ, ಒತ್ತಡವನ್ನು ನಿವಾರಿಸಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ಹಲಾಸನ : ಈ ಭಂಗಿಯಲ್ಲಿ ದೇಹದ ವಿವಿಧ ಭಾಗಗಳಿಗೆ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ಮಾಡುತ್ತದೆ. ನೇರವಾಗಿ ತಲೆಯ ಭಾಗಕ್ಕೆ ರಕ್ತ ಪರಿಚಲನೆ ಹೆಚ್ಚಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.


