ಮಂಗಳೂರಿನ ಎಸ್ ಸಿ ಎಸ್ ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಸಿ ಎಸ್ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಮತ್ತು ಗ್ಯಾಸ್ಟ್ರೋ ಎಂಟ್ರೋಲಜಿ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ ಸೊರಕೆ ಅವರು ಔಷಧ ವಿತರಣೆಯಲ್ಲಿ ಫಾರ್ಮಸಿಸ್ಟರ ಪಾತ್ರವನ್ನು ವಿವರಿಸಿದರು.

ಪ್ರಿಸ್ಕ್ರಿಪ್ ಶನನ್ನು ಸೂಕ್ತವಾಗಿ ಗಮನಿಸಿ ಪರಿಶೀಲಿಸುವ ಅಗತ್ಯವನ್ನು ಉಲ್ಲೇಖಿಸಿದರು. ಆಡಳಿತ ಮಂಡಳಿಯ ಅನುಮತಿಯೊಂದಿಗೆ ಫಾರ್ಮಸಿ ಡಿಸ್ಕೌಂಟ್ ಕಾರ್ಡ್ ಮುಖೇನ ಅಪೇಕ್ಷಿತರಿಗೆ ರಿಯಾಯ್ತಿ ದರದಲ್ಲಿ ಔಷಧಿ ನೀಡುವುದನ್ನು ಶ್ಲಾಘಿಸಿದರು.
ಆಸ್ಪತ್ರೆಯ ವ್ಯವಸ್ತಾಪಕ ನಿರ್ದೇಶಕ ಮತ್ತು ಅಧ್ಯಕ್ಷರಾದ ಡಾ. ಜೀವ ರಾಜ್ ಸೊರಕೆ ಅವರು ದೀಪ ಬೆಳಗಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ರಮಾ ಸೊರಕೆ, ವೈದ್ಯಕೀಯ ಅಧೀಕ್ಷಕಿ ಡಾ. ಶಾಲಿನಿ ರಾವ್, ನರ್ಸಿಂಗ್ ಅಧೀಕ್ಷಕಿ ಗ್ರೇಸಿ ಮತ್ತು ಆಸ್ಪತ್ರೆಯ ಎಲ್ಲ ವಿಭಾಗದ ಸಿಬ್ಬಂದಿ ವರ್ಗದವರು ಸಮಾರಂಭದಲ್ಲಿ ಭಾಗವಹಿಸಿದರು.
ಹಿರಿಯ ಫಾರ್ಮಸಿಸ್ಟ್ ಎಲ್. ಎನ್ ಭಟ್ ಮಳಿ ಪ್ರಸ್ತಾವಿಸಿದರು. ಫಾರ್ಮಸಿ ತಂಡದವರು ಪ್ರಾರ್ಥಿಸಿದರು ಹಾಗೂ ನಿರೂಪಿಸಿ ವಂದಿಸಿದರು. ಹಿರಿಯ ಫಾರ್ಮಸಿಸ್ಟ್ ನಿತೀಶ್ ಕಾರ್ಯಕ್ರಮ ಸಂಯೋಜಿಸಿದರು. ಆಡಳಿತ ಮಂಡಳಿಯವರು ಫಾರ್ಮಸಿಸ್ಟ್ ಗಳಿಗೆ ಶುಭ ಹಾರೈಸಿದರು.

