ಎಲುಬಿನ ಆರೋಗ್ಯಕ್ಕೆ. ಸಂಧಿವಾತ, ಎಲುಬಿನಲ್ಲಿ ಸವೆತ, ಎಲುಬಿನಲ್ಲಿ ಸಾಂದ್ರತೆ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳು ಕಾಡದೆ ಇರಬೇಕೆಂದರೆ ನಮ್ಮ ದೇಹಕ್ಕೆ ಸರಿಯಾಗಿ ವಿಟಮಿನ್‌ ಡಿ ಪೂರೈಕೆಯಾಗುತ್ತಲೂ ಇರಬೇಕು.ಕೇವಲ ಎಲುಬಿನ ಆರೋಗ್ಯವೊಂದೇ ವಿಟಮಿನ್‌ ಡಿಯ ಮೇಲೆ ನಿಂತಿಲ್ಲ. ದೇಹ ಎಲ್ಲ ರೀತಿಯಲ್ಲೂ ಸೌಖ್ಯವಾಗಬೇಕಾಗಿದ್ದರೆ ವಿಟಮಿನ್‌ ಡಿ ಅವಶ್ಯಕವಾಗಿ ಬೇಕು. ನಮ್ಮ ನಿತ್ಯದ ಸಂತೋಷದ ಹಿಂದೆಯೂ ವಿಟಮಿನ್‌ ಡಿಯ ಕೈಚಳಕವಿದೆ. ವಿಟಮಿನ್‌ ಡಿ ಕೊರತೆಯಿಂದ ಖಿನ್ನತೆಯೂ ಬರುವ ಸಾಧ್ಯತೆಗಳಿವೆ ಎಂದು ಇತ್ತೀಚೆಗಿನ ಸಂಶೋಧನೆಗಳು ಬಹಿರಂಗಪಡಿಸಿವೆ.

ಟಮಿನ್‌ ಡಿ ಕೊರತೆಯಾದರೆ ಈ ಕೆಲವು ಲಕ್ಷಣಗಳು ಸಾಮಾನ್ಯ. ಆಗಾಗ ಇನ್‌ಫೆಕ್ಷನ್‌ಗಳಾಗುವುದು, ರೋಗ ನಿರೋಧಕತೆ ಕಡಿಮೆಯಾಗುವುದು, ಆಗಾಗ ನೆಗಡಿ, ಶೀತ ಬರುವುದು ಇತ್ಯಾದಿಗಳೂ ವಿಟಮಿನ್‌ ಡಿಯ ಕೊರತೆಯ ಲಕ್ಷಣಗಳು. ಮೂಳೆಯಲ್ಲಿ ಶಕ್ತಿ ಇಲ್ಲದಂತಾಗುವುದು ಕೂಡಾ ಇದರ ಪ್ರಮುಖ ಲಕ್ಷಣ. ಖಿನ್ನತೆಯೂ ಕೂಡಾ ವಿಟಮಿನ್‌ ಡಿಯ ಕೊರತೆಯಿಂದ ಬರುವ ಸಂಭವವಿದೆ.

ವಿಟಮಿನ್‌ ಡಿ ನಮ್ಮ ಆಹಾರದಲ್ಲಿರುವ ಕ್ಯಾಲ್ಶಿಯಂ ಅನ್ನು ದೇಹಕ್ಕೆ ಸರಿಯಾಗಿ ಒದಗಿಸುವ ಕೆಲಸವನ್ನು ಮಾಡುವುದರಿಂದ ಕ್ಯಾಲ್ಶಿಯಂ ದೇಹಕ್ಕೆ ಸೇರುವ ಪ್ರಕ್ರಿಯೆ ನಿಂತುಹೋಗುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಸಿಗದೇ, ಮೂಳೆಗಳು ದುರ್ಬಲವಾಗುತ್ತದೆ.

ಸೂರ್ಯನ ಬೆಳಕು ಅತ್ಯಂತ ಮುಖ್ಯ

ವಿಟಮಿನ್‌ ಡಿ ಪಡೆಯಲು ಸೂರ್ಯನ ಬೆಳಕು ಅತ್ಯಂತ ಮುಖ್ಯವಾದ ಮೂಲ. ಇದಲ್ಲದೆ, ಅನೇಕ ಆಹಾರಗಳ ಮೂಲಕವೂ ವಿಟಮಿನ್‌ ಡಿ ಲಭ್ಯವಾದರೂ ಇದು ಅತ್ಯಂತ ಕಡಿಮೆ ಪ್ರಮಾಣದ್ದು. ಸೂರ್ಯನ ಬಿಸಿಲಿನಲ್ಲಿ 15ರಿಂದ 0 ನಿಮಿಷಗಳು ಇರುವುದರಿಂದಲೂ ದಿನಕ್ಕೆ ಅಗತ್ಯವಾದ ವಿಟಮಿನ್‌ ಡಿ ಲಭ್ಯವಾಗುತ್ತದೆ. ಹೀಗಾಗಿ. ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು ಅತ್ಯಂತ ಮುಖ್ಯವಾಗುತ್ತದೆ. ಇವೆಲ್ಲಕ್ಕಿಂತಲೂ, ಸೂರ್ಯನ ಬಿಸಿಲಿಗೆ ಬೆಳಗ್ಗೆಯೇ ದೇಹವನ್ನು ಒಡ್ಡುವುದರಿಂದ ಮೈಮನಸ್ಸು ಚುರುಕಾಗಿ ಸಂತಸ ಇಮ್ಮಡಿಸುತ್ತದೆ.

ಹಾಗಾಗಿ ವಿಟಮಿನ್‌ ಡಿ ಕೇವಲ ಮೂಳೆ ಸಂಬಂಧೀ ಮಾತ್ರವಲ್ಲ, ನಮ್ಮ ಇಡಿಯ ಆರೋಗ್ಯದ ಕೀಲಿಕೈ. ಮಿದುಳನು ಚುರುಕಾಗಿಡುವ ಪೋಷಕಾಂಶವೂ ಹೌದು. ವಿಟಮಿನ್‌ ಡಿ ಕೊರತೆಯಿದ್ದರೆ, ಈ ಪೋಷಕಾಂಶವನ್ನು ವೈದ್ಯರ ಮಾರ್ಗದರ್ಶನದ ಮೇರೆಗೆ ತೆಗೆದುಕೊಳ್ಳುವುದು ಒಳ್ಳೆಯದು. ಖಿನ್ನತೆಯ ಸಮಸ್ಯೆ ಇರುವ ಮಂದಿಯೂ ವಿಟಮಿನ್‌ ಡಿ ಸಪ್ಲಿಮೆಂಟ್‌ ಸೇವನೆಯಿಂದ ಈ ಸಮಸ್ಯೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದಾರೆ.