ಮಣಿಪಾಲ: ವಿಶ್ವ ಆರೋಗ್ಯ ದಿನದ ವಿಶಿಷ್ಟ ಆಚರಣೆ ವಿಶ್ವ ಆರೋಗ್ಯ ದಿನದ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ, ಇದರ ವತಿಯಿಂದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಬಿತ್ತಿ ಪತ್ರವನ್ನು ಸಮುದಾಯ ವೈದ್ಯಕೀಯ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳುಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್-1950 ರಿಂದ ಪ್ರತಿ ವರ್ಷ ಜಗತ್ತಿನಾದ್ಯಾಂತ ನಿರ್ಧಿಷ್ಟ ದ್ಯೆಯೋದ್ದೇಶದೊಂದಿಗೆ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ.

2025 ರ ದ್ಯೇಯ ವಾಕ್ಯ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಬಂಧಿಸಿದ್ದು. ತಡೆಗಟ್ಟಲುಸಾದ್ಯವಿರುವಕಾರಣಗಳಿಂದಾಗುವ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಕಾರ್ಯತತ್ಪರರಾಗುವಂತೆ ವಿಶ್ವ ಆರೊಗ್ಯ ಸಂಸ್ಥೆ ಕರೆ ನೀಡಿದೆ.“ಆಶಾದಾಯಕ ಭವಿಷ್ಯಕ್ಕಾಗಿ ಆರೋಗ್ಯಯುತ ಆರಂಭ” ಎನ್ನುವುದು ಈ ವರ್ಷದ ಘೋಷ ವಾಕ್ಯವಾಗಿದೆ.
ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯಯುತ ಬೆಳವಣಿಗೆಗೆ ಒತ್ತು ನೀಡಿ ಸುದೃಢ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವುದು ಈ ಬಾರಿಯ ವಿಶ್ವ ಆರೋಗ್ಯ ದಿನಾಚರಣಿಯ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಕೆ ಎಂ ಸಿ ಮಣಿಪಾಲದ ನೂತನ ಅಸೋಸಿಯೆಟ್ ಡೀನ್ ಡಾ ರಂಜಿತಾ ಶೆಟ್ಟಿಯವರು ಮಾತನಾಡಿ- ಸುರಕ್ಷಿತ ಮಾತೃತ್ವವು ಸವಲತ್ತು ಅಲ್ಲ, ಅದು ಹಕ್ಕು ಎಲ್ಲರೂ ಜೊತೆಯಾಗಿ ಯಾವುದೇ ತಾಯಿ ಮತ್ತು ಮಗು ಹಿಂದೆ ಉಳಿಯದಂತೆ ನೋಡಿಕೊಳ್ಳೋಣ ಎನ್ನುವ ಮೂಲಕ ಆರೋಗ್ಯ ದಿನದ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬಂಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

