ಮಧುಮೇಹ ಸಮಸ್ಯೆ ಇರುವವರು ಈರುಳ್ಳಿಯನ್ನು ಬಳಸಿಕೊಂಡು ಅತ್ಯುತ್ತಮ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಈರುಳ್ಳಿಯಲ್ಲಿ ಇರುವ ಔಷಧೀಯ ಗುಣಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವುದು.
ಈರುಳ್ಳಿಯಲ್ಲಿ ಸಮ ಪ್ರಮಾಣದ ಸೆಮಿಕ್ ಗುಣಗಳಿವೆ. ಸಮೆಕ್ ಗುಣವು ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ರಕ್ತದಲ್ಲಿ ಇರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಬೇಕಾಗುವಷ್ಟು ಸೆಮಿಕ್ ಗುಣವನ್ನು ಈರುಳ್ಳಿ ಒಳಗೊಂಡಿದೆ.
ಈರುಳ್ಳಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕಾರ್ಬೋ ಹೈಡ್ರೆಟ್ ಅನ್ನು ಪಡೆದುಕೊಂಡಿದೆ. ಮಧುಮೇಹ ಹೊಂದಿರುವವರು ಅಧಿಕ ಕಾರ್ಬೋ ಹೈಡ್ರೆಟ್ ಇರುವ ಆಹಾರವನ್ನು ಸೇವಿಸಬಾರದು.
ಮಧುಮೇಹಕ್ಕೆ ಫೈಬರ್ ಅತ್ಯಂತ ಪ್ರಯೋಜನಕಾರಿಯಾದ ಅಂಶ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈರುಳ್ಳಿ ಅದ್ಭುತ ಪ್ರಮಾಣದ ನಾರಿನಂಶವನ್ನು ಹೊಂದಿದೆ. ಹಾಗಾಗಿ ಈರುಳ್ಳಿ ಮಧುಮೇಹಗಳಿಗೆ ಪರಿಪೂರ್ಣವಾದ ಆಹಾರವಾಗಿದೆ. ಹಾಗಾಗಿ ನಿಯಮಿತವಾಗಿ ಈರುಳ್ಳಿಯನ್ನು ಸೇವಿಸಿದರೆ ಮಧುಮೇಹ, ಕೊಲೆಸ್ಟ್ರಾಲ್ ಮಟ್ಟ ಹಾಗೂ ಹೃದಯ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುವುದು.
ಇನ್ನು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಈರುಳ್ಳಿ ಅತ್ಯುತ್ತಮವಾದ ಆಯ್ಕೆಯಾಗುವುದು. ಅದಕ್ಕಾಗಿ ಕೆಂಪು ಈರುಳ್ಳಿಯನ್ನು ಆಯ್ಕೆಮಾಡಿಕೊಳ್ಳಬೇಕು. ಊಟ ಮಾಡುವಾಗ, ತಿಂಡಿ ತಿನ್ನುವಾಗ ಒಂದು ಹಸಿ ಈರುಳ್ಳಿಯನ್ನು ಸೇವಿಸಬಹುದು.

