ಮುಳ್ಳುಸೌತೆಯನ್ನು ವಿಶ್ವದಾದ್ಯಂತ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಸಲಾಡ್‌ಗೆ ಒಂದು ಉತ್ಕೃಷ್ಟ ತರಕಾರಿಯಾಗಿರುವ ಇದು ನಿಮ್ಮ ಆಹಾರದಲ್ಲಿ ನ್ಯೂಟ್ರೀಶಿಯನ್ ಅನ್ನು ಹೇರಳವಾಗಿ ಪೂರೈಸುತ್ತದೆ.
ನಮ್ಮಲ್ಲಿ ಹಲವಾರು ಜನರು ಬೆಳಗ್ಗೆ ಜ್ಯೂಸ್‌ಗಳನ್ನು ಸೇವಿಸುತ್ತಾರೆ. ದೈನಂದಿನ ಜೀವನದಲ್ಲಿ ಈ ಜ್ಯೂಸ್‌ಗಳು ಮಹತ್ವದ ಪ್ರಭಾವವನ್ನು ಬೀರುತ್ತವೆ. ಕೆಲವರು ಹಾಗಲಕಾಯಿ ಜ್ಯೂಸ್ ಅನ್ನು ಸೇವಿಸುತ್ತಾರೆ ಇದರಿಂದ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ ಚಟುವಟಿಕೆಯಿಂದ ಅವರು ಕೂಡಿರುತ್ತಾರೆ. ಇದರಿಂದ ಐರನ್ ಮತ್ತು ಇತರ ಆರೋಗ್ಯಕರ ಪ್ರಯೋಜನಗಳು ದೊರಕುತ್ತದೆ.
ನ್ಯೂಟ್ರೀಶಿಯನ್‌ನ ಮುಖ್ಯ ಮೂಲ ಮುಳ್ಳುಸೌತೆ ಜ್ಯೂಸ್ ಆಗಿದೆ. ಮುಳ್ಳುಸೌತೆಯಲ್ಲಿ ವಿಟಮಿನ್ ಕೆ ಹೇರಳವಾಗಿದೆ. ಸ್ಥೂಲಕಾಯತೆಗೂ ಇದು ಪರಿಹಾರವನ್ನು ನೀಡುತ್ತದೆ. ಮುಳ್ಳುಸೌತೆ ನಿಮ್ಮ ದೇಹಕ್ಕೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ. ದಿನವಿಡೀ ನಿರ್ಜಲೀಕರಣದ ಸಮಸ್ಯೆ ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತದೆ.
ಬಿಸಿಲಿನ ಬೇಗೆ ದೇಹಕ್ಕೆ ಪರಮ ಶತ್ರು. ಈ ಸಮಯದಲ್ಲಿ ತಂಪಿನ ಪರಿಹಾರವನ್ನು ನೀವು ಮಾಡಲೇಬೇಕು. ಮುಳ್ಳುಸೌತೆಯ ಜ್ಯೂಸ್ ದೇಹದ ಉಷ್ಣವನ್ನು ನಿವಾರಿಸಿ ತಂಪನ್ನೀಯುತ್ತದೆ. ಸನ್‌ಬರ್ನ್ ನಿಮಗುಂಟಾದಲ್ಲಿ ಕೂಡ ಮುಳ್ಳುಸೌತೆ ಜ್ಯೂಸ್ ಅನ್ನು ದೇಹಕ್ಕೆ ಸವರಿಕೊಳ್ಳಿ. ತುರ್ತು ಪರಿಹಾರ ನಿಮಗೆ ದೊರಕುತ್ತದೆ.
ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಮುಳ್ಳುಸೌತೆ ಮುಖ್ಯ ಸಾಮಾಗ್ರಿಯಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆ ನಿಮಗಿದ್ದಲ್ಲಿ ಮುಳ್ಳುಸೌತೆ ಜ್ಯೂಸ್ ಅನ್ನು ಸೇವಿಸಲು ಮರೆಯದಿರಿ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹಾಕಿ ದೇಹದ ಸ್ವಾಸ್ಥ್ಯವನ್ನು ಕಾಪಾಡುತ್ತದೆ.
ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶ ವಿಟಮಿನ್ ಆಗಿದೆ. ಮುಳ್ಳುಸೌತೆ ಎ, ಬಿ ಹಾಗೂ ಸಿ ಮತ್ತು ಕೆ ಸತ್ವಗಳಿಂದ ಕೂಡಿದ್ದು ದೇಹಕ್ಕೆ ವಿಟಮಿನ್‌ನ ಉತ್ತಮ ಪೂರೈಕೆಯನ್ನು ಮಾಡುತ್ತದೆ. ವಿಟಮಿನ್‌ಗಳು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ದೂರೀಕರಿಸಿ ನಿಮ್ಮ ತ್ವಚೆಯನ್ನು ಹೊಳೆಯುವಂತೆಮಾಡುತ್ತದೆ.
ಮುಳ್ಳುಸೌತೆ ಜ್ಯೂಸ್ ಮಿನರಲ್‌ಗಳನ್ನು ಅಧಿಕವಾಗಿ ಹೊಂದಿದೆ. ನಿಮ್ಮ ತ್ವಚೆಯ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಮಿನರಲ್ಸ್ ಮುಳ್ಳುಸೌತೆಯಲ್ಲಿದೆ. ನಿಮ್ಮ ಸಂಪೂರ್ಣ ದೇಹ ಕೂಡ ಅತ್ಯಗತ್ಯ ಮಿನರಲ್ಸ್ ಪೂರೈಕೆಯನ್ನು ಮುಳ್ಳುಸೌತೆಯಿಂದ ಪಡೆಯುತ್ತದೆ. ಅಧಿಕ ಹಾಗೂ ಕಡಿಮೆ ಬಿಪಿ ಸಮಸ್ಯೆಗಳಿಂದ ನೀವು ಬಳಲುತ್ತಿದ್ದಲ್ಲಿ ಮುಳ್ಳುಸೌತೆ ಜ್ಯೂಸ್ ನಿಮಗೆ ಪರಿಣಾಮಕಾರಿಯಾಗಿದೆ.

