ಆರ್‌ವಿಆ‌ರ್ ಹೆಲ್ತ್ ಕೇ‌ರ್ ಭಾರತದಾದ್ಯಂತ ಸುಲಭವಾಗಿ ಸಿಗುವ, ಅತ್ಯುನ್ನತ ದರ್ಜೆಯ ವೈದ್ಯಕೀಯ ಸೇವೆಯನ್ನು ಒದಗಿಸುವ ತನ್ನ ಧ್ಯೇಯೋದ್ದೇಶದಲ್ಲಿ ಪ್ರಮುಖ ಮೈಲಿಗಲ್ಲನ್ನು ಘೋಷಿಸಲು ಹೆಮ್ಮೆಪಡುತ್ತದೆ. ಸಂಸ್ಥೆಯು ತನ್ನ ಆಯಕಟ್ಟಿನ ಬೆಳವಣಿಗೆಯ ಯೋಜನೆಗಳನ್ನು ಅನಾವರಣಗೊಳಿಸಲು ಮತ್ತು ಕೇರಳದ ಕಾಸರಗೋಡಿನಲ್ಲಿ ‘ಆರ್‌ವಿಆರ್ ನ್ಯೂರೋ-ಅಂಕಾಲಜಿ ಸೆಂಟರ್‌ನ ಅಧಿಕೃತ ಉದ್ಘಾಟನೆಯನ್ನು ಘೋಷಿಸಲು 24 ಜುಲೈ 2026 ರಂದು ಬೆಳಿಗ್ಗೆ 11:30 ಕ್ಕೆ ಮಂಗಳೂರಿನ ದಿ ಓಷನ್ ಪರ್ಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತು.

ಆರ್‌ವಿಆ‌ರ್ ಹೆಲ್ಸ್‌ಕೇ‌ರ್ ಕುರಿತು

24 ಏಪ್ರಿಲ್ 2026 ರಂದು ಅಧಿಕೃತವಾಗಿ ಚಾಲನೆ ನೀಡಲಾದ ಆರ್‌ವಿಆರ್ ಹೆಲ್ತ್ಕೇರ್, ಕರ್ನಾಟಕದ ಮಂಗಳೂರಿನಲ್ಲಿರುವ ಒಂದು ಸೂಪ‌ರ್ ಸ್ಪೆಷಾಲಿಟಿ ಕೇಂದ್ರವಾಗಿದೆ. ‘ಪ್ರತಿಯೊಬ್ಬ ವ್ಯಕ್ತಿಯೂ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಪಡೆಯಲು ಅರ್ಹರು” ಎಂಬ ದೂರದೃಷ್ಟಿಯೊಂದಿಗೆ ಸ್ಥಾಪಿತವಾಗಿರುವ ಈ ಸಂಸ್ಥೆಯು, ವೈದ್ಯಕೀಯ ಶ್ರೇಷ್ಠತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಮ್ಮಿಲನವಾಗಿದೆ.

ಈ ಸಂಸ್ಥೆಯು ದಶಕಗಳ ವೈಯಕ್ತಿಕ ಅನುಭವ ಹೊಂದಿರುವ ಪ್ರಖ್ಯಾತ ತಜ್ಞ ವೈದ್ಯರ ತಂಡವನ್ನು ಒಳಗೊಂಡಿದೆ. ಒಟ್ಟಾರೆಯಾಗಿ, ಈ ವೈದ್ಯಕೀಯ ತಂಡವು ತಮ್ಮ ವೃತ್ತಿಜೀವನದಲ್ಲಿ 17,000ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ 30ಕ್ಕೂ ಹೆಚ್ಚು ವರ್ಷಗಳ ಸಂಯೋಜಿತ ಶಸ್ತ್ರಚಿಕಿತ್ಸಾ ಮತ್ತು ಕ್ಲಿನಿಕಲ್ ಅನುಭವವನ್ನು ಹೊಂದಿದೆ. ಈ ಅಪಾರ ಅನುಭವವು ಈಗ ಆರ್‌ವಿಆ‌ರ್ ಹೆಲ್ತ್‌ಕೇರ್‌ನ ಮುಖ್ಯ ಧೈಯವಾದ ಸಾಟಿಯಿಲ್ಲದ ವೈದ್ಯಕೀಯ ಸೇವೆಯನ್ನು ಕರುಣೆ ಮತ್ತು ಕೈಗೆಟುಕುವ ವೆಚ್ಚದಲ್ಲಿ ನೀಡಲು ಶ್ರಮಿಸುತ್ತಿದೆ.

ನಾಯಕತ್ವ ಮತ್ತು ದೂರದೃಷ್ಟಿ

ಸಂಸ್ಥಾಪಕರು ಮತ್ತು ಅಧ್ಯಕ್ಷರು: ವಿಜಯ್ ಎಂ.ಎನ್.ಶೆಟ್ಟಿ

ವಿಜಯ್ ಎಂ.ಎನ್.ಶೆಟ್ಟಿ ಅವರು ವಿವಿಧ ಉದ್ಯಮಗಳಲ್ಲಿ ಯಶಸ್ವಿ ದಾಖಲೆಯನ್ನು ಬರೆದಿರುವ ಉದ್ಯಮಿಯಾಗಿದ್ದಾರೆ. ತಮ್ಮ ಇಡೀ ವೃತ್ತಿಜೀವನದಲ್ಲಿ ಅವರು ಅತ್ಯುತ್ತಮ ವ್ಯವಹಾರ ಕೌಶಲ್ಯ, ನಾಯಕತ್ವದ ಸಾಮರ್ಥ್ಯ ಮತ್ತು ಸಾಂಸ್ಥಿಕ ಶ್ರೇಷ್ಠತೆಗೆ ಅಳವಾದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅವರ ಉದ್ಯಮಶೀಲತೆಯ ಪ್ರಯಾಣವು ವಿಭಿನ್ನ ರಂಗಗಳಲ್ಲಿ ಹರಡಿದ್ದು, ಅಲ್ಲಿ ಅವರು ಪ್ರಾಮಾಣಿಕತೆ ಮತ್ತು ದೂರದೃಷ್ಟಿಯೊಂದಿಗೆ ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದಾರೆ.

ಆದಾಗ್ಯೂ ಸಮಾಜಕ್ಕೆ ಮರಳಿ ಏನನ್ನಾದರೂ ಕೊಡುವುದೇ ಶೆಟ್ಟಿ ಅವರ ನಿಜವಾದ ಆಸಕ್ತಿಯಾಗಿತ್ತು. ಉದ್ಯಮದಲ್ಲಿ ಯಶಸ್ಸು ಗಳಿಸಿದರೂ, ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವುದರಿಂದ ಮಾತ್ರ ನಿಜವಾದ ತೃಪ್ತಿ ಸಿಗುತ್ತದೆ ಎಂಬುದನ್ನು ಅವರು ಗುರುತಿಸಿದರು. ಈ ತತ್ವವೇ ಅವರನ್ನು ಆರ್‌ವಿಆರ್ ಹೆಲ್ತ್ಕೇರ್ ಸ್ಥಾಪಿಸಲು ಪ್ರೇರೇಪಿಸಿತು-ಇದನ್ನು ಅವರು ಮತ್ತೊಂದು ಬಿಸಿನೆಸ್ ಆಗಿ ನೋಡದೆ, ಒಂದು ಸಾಮಾಜಿಕ ಯೋಜನೆಯಾಗಿ ರೂಪಿಸಿದರು.

ಆರ್‌ವಿಆ‌ರ್ ಹೆಲ್ತ್ ಕೇ‌ರ್ ಬಗ್ಗೆ ಅವರ ದೂರದೃಷ್ಟಿ ಪರಿವರ್ತನಕಾರಿಯಾಗಿದೆ: ವೈದ್ಯಕೀಯ ಶ್ರೇಷ್ಠತೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ, ಹಾಗೆಯೇ ರೋಗಿಗಳಿಗೆ ಹೊರೆಯಾಗದ ಆರೋಗ್ಯ ಸಂಸ್ಥೆಯನ್ನುಟ್ಟುಟ್ಟುವುದು ಅವರ ಕನಸು.

ರೋಗಿಯ ಆರ್ಥಿಕ ಕ್ಷಮತೆಯು ಅವರು ಪಡೆಯುವ ವೈದ್ಯಕೀಯ ಸೇವೆಯ ಗುಣಮಟ್ಟವನ್ನು ನಿರ್ಧರಿಸಬಾರದು ಎಂದು ಶೆಟ್ಟಿ ಬಲವಾಗಿ ನಂಬುತ್ತಾರೆ. ಮೂಲಸೌಕರ್ಯ ಹೂಡಿಕೆಯಿಂದ ಹಿಡಿದು ಚಿಕಿತ್ಸಾ ವಿಧಾನಗಳು ಮತ್ತು ಸಮುದಾಯ ಸೇವೆಗಳವರೆಗೆ, ಆರ್‌ವಿಆ‌ರ್ ಹೆಲ್ತ್‌ಕೇರ್‌ನ ಪ್ರತಿ ನಿರ್ಧಾರಕ್ಕೂ ಈ ನಂಬಿಕೆಯೇ ಪ್ರೇರಣೆ.

ಆರ್‌ವಿಆ‌ರ್ ಹೆಲ್ತ್‌ಕೇ‌ರ್ ಸ್ಥಾಪಿಸುವ ಮೂಲಕ, ವಿಜಯ್ ಎಂ. ಎನ್. ಶೆಟ್ಟಿ ಅವರು ತಮ್ಮ ಉದ್ಯಮಶೀಲತೆಯ ಶಕ್ತಿಯನ್ನು ಉನ್ನತ ಉದ್ದೇಶದತ್ತ ಅಂದರೆ, ನಿಜವಾದ ಕರುಣೆಯಿಂದ ಸೇವೆ ಸಲ್ಲಿಸುವ ಆರೋಗ್ಯ ವ್ಯವಸ್ಥೆಯನ್ನು ಕಟ್ಟುವತ್ತ ಹರಿಸಿದ್ದಾರೆ. ಅವರ ನಾಯಕತ್ವವು ಪ್ರತಿಯೊಬ್ಬ ರೋಗಿಯೂ, ಅವರ ಹಿನ್ನೆಲೆ ಏನೇ ಇರಲಿ, ಅತ್ಯುನ್ನತ ದರ್ಜೆಯ ವೈದ್ಯಕೀಯ ಸೇವೆಯನ್ನು ಗೌರವ ಮತ್ತು ಕಾಳಜಿಯೊಂದಿಗೆ ಪಡೆಯುವುದನ್ನು ಖಚಿತಪಡಿಸುತ್ತದೆ.

ವೈದ್ಯಕೀಯ ನಿರ್ದೇಶಕರು: ಡಾ. (ಪ್ರೊ.) ರಾಘವೇಂದ್ರ ಬಿ. ಎಸ್.

ಆರ್‌ವಿಆ‌ರ್ ಹೆಲ್ತ್‌ಕೇರ್‌ನ ನಿರ್ದೇಶಕರಲ್ಲೊಬ್ಬರಾದ ಡಾ. (ಪ್ರೊ.) ರಾಘವೇಂದ್ರ ಬಿ. ಎಸ್. ಅವರು ದಕ್ಷಿಣ ಕನ್ನಡದಾದ್ಯಂತ ವೈದ್ಯಕೀಯ ಸೇವೆಯಲ್ಲಿ ಮನೆಮಾತಾಗಿರುವ ಹೆಸರಾಂತ ನರರೋಗ ಶಸ್ತ್ರಚಿಕಿತ್ಸಕ (ನ್ಯೂರೋಸರ್ಜನ್) ಮತ್ತು ಪ್ರವರ್ತಕರಾಗಿದ್ದಾರೆ. ಸಹ-ಸಂಸ್ಥಾಪಕರಾಗಿ, ಅವರು ಉನ್ನತ ಮಟ್ಟದ ಕ್ಲಿನಿಕಲ್ ಪರಿಣತಿ, ನೈತಿಕ ಮೌಲ್ಯಗಳು ಮತ್ತು ರೋಗಿಗಳ ಚಿಕಿತ್ಸಾ ಫಲಿತಾಂಶಗಳ ಬಗ್ಗೆ ಅಚಲ ಬದ್ಧತೆಯನ್ನು ತಂದಿದ್ದಾರೆ.

ಹಿರಿಯ ಸಲಹೆಗಾರರ ಮಂಡಳಿ: ಡಾ. ಮನೀಶ್ ರೈ (ಹೃದ್ರೋಗ ತಜ್ಞರು) ಮತ್ತು ನರರೋಗ, ನ್ಯೂರೋಸರ್ಜರಿ, ಅಂಕಾಲಜಿ ಹಾಗೂ ಸಂಬಂಧಿತ ಕ್ಷೇತ್ರಗಳ ಇತರ ಪ್ರಖ್ಯಾತ ತಜ್ಞರು.

‘ಆರೋಗ್ಯ ಬೈ ಆರ್‌ವಿಆರ್’ (AROGYA BY RVR): ಸುಲಭ ಲಭ್ಯತೆಯ ಆರೋಗ್ಯ ಸೇವಾ ಉಪಕ್ರಮ

ತನ್ನ ಶ್ರೇಷ್ಠತೆಯ ತಡಿಪಾಯದ ಮೇಲೆ ನಿರ್ಮಿತವಾದ ಆರ್‌ವಿಆ‌ರ್ ಹೆಲ್ತ್ಕೇರ್, ಭಾರತದಾದ್ಯಂತ ಹಿಂದುಳಿದ ವರ್ಗಗಳಿಗೆ ತಲುಪಲು “ಆರೋಗ್ಯ ಬೈ ಆರ್‌ವಿಆರ್” ಎಂಬ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮವು ಸಂಸ್ಥೆಯ ಮೂಲ ತತ್ವವಾದ “ಪ್ರತಿಯೊಂದು ಜೀವವೂ ಅತ್ಯುತ್ತಮ ಆರೈಕೆಗೆ ಅರ್ಹವಾಗಿದೆ” ಎಂಬುದನ್ನು ಸಾಕಾರಗೊಳಿಸುತ್ತದೆ.

‘ಆರೋಗ್ಯ ಬೈ ಆರ್‌ವಿಆರ್ ಕಾರ್ಯಕ್ರಮವು ತಜ್ಞ ವೈದ್ಯಕೀಯ ಸಲಹೆಗಳು, ಸಮಗ್ರ ಆರೋಗ್ಯ ತಪಾಸಣೆಗಳು ಮತ್ತು ಆರೋಗ್ಯ ಜಾಗೃತಿಯನ್ನು ಸ್ಥಳೀಯ ಸಮುದಾಯಗಳಿಗೆ ತಲುಪಿಸುತ್ತದೆ. ಚಿಕ್ಕಮಗಳೂರಿನಲ್ಲಿ ನಡೆದ ಯಶಸ್ವಿ ಶಿಬಿರಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಮತ್ತು ಶ್ಲಾಘನೆ ವ್ಯಕ್ತವಾಗಿದ್ದು, ಈಗಾಗಲೇ ತನ್ನ ಪ್ರಭಾವವನ್ನು ನಿರೂಪಿಸಿದೆ. ಈ ಯೋಜನೆಯನ್ನು ಕರ್ನಾಟಕ, ಕೇರಳ ಮತ್ತು ಇತರ ರಾಜ್ಯಗಳಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.

ಆಯಕಟ್ಟಿನ ವಿಸ್ತರಣೆ: ಕಾಸರಗೋಡು ನ್ಯೂರೋ-ಅಂಕಾಲಜಿ ಸೆಂಟರ್

26 ಜುಲೈ 2026 ರಂದು, ಆರ್‌ವಿಆರ್ ಹೆಲ್ತ್ಕೇರ್ ಕೇರಳದ ಕಾಸರಗೋಡಿನಲ್ಲಿ ತನ್ನ ‘ನ್ಯೂರೋ ಅಂಕಾಲಜಿ ಸೆಂಟ‌ರ್’ ಅನ್ನು ಅಧಿಕೃತವಾಗಿ ಉದ್ಘಾಟಿಸಲಿದೆ. ಈ ವಿಸ್ತರಣೆಯು ಸೀಮಿತ ಆರೋಗ್ಯ ಮೂಲಸೌಕರ್ಯವಿರುವ ಪ್ರದೇಶಗಳಿಗೆ ವಿಶೇಷ ವೈದ್ಯಕೀಯ ಸೇವೆಯನ್ನು ತಲುಪಿಸುವ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ. ಈ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳು ಮತ್ತು ಪರಿಣಿತ ನರರೋಗ ಹಾಗೂ ಅರ್ಬುಧರೋಗ (ಅಂಕಾಲಜಿ) ತಜ್ಞರ ತಂಡವನ್ನು ಹೊಂದಿರಲಿದೆ.

ಭವಿಷ್ಯದ ದೂರದೃಷ್ಟಿ

ಆರ್‌ವಿಆ‌ರ್ ಹೆಲ್ತ್‌ಕೇರ್‌ನ ದೂರದೃಷ್ಟಿ ಮಂಗಳೂರು ಮತ್ತು ಕಾಸರಗೋಡಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದ ಅತ್ಯುತ್ತಮ ವೈದ್ಯಕೀಯ ಪರಿಣತಿಯನ್ನು ಪ್ರತಿಯೊಬ್ಬ ರೋಗಿಗೂ ತಲುಪಿಸುವ ಆರೋಗ್ಯ ಜಾಲವನ್ನು ನಿರ್ಮಿಸಲು ಸಂಸ್ಥೆ ಬದ್ಧವಾಗಿದೆ. ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಕಾರ್ಯತಂತ್ರದ ಉಪಕ್ರಮಗಳನ್ನು ಘೋಷಿಸಲಾಗುವುದು.