ಸಕ್ಕರೆ ಬಳಸುವ ಬದಲು ಬೆಲ್ಲವನ್ನು ಬಳಸುವ ಮೂಲಕ ನಮ್ಮ ದೇಹಕ್ಕೆ ಒಳ್ಳೆಯದು. ಬೆಲ್ಲ ಎಂದರೆ ಸಕ್ಕರೆಯಾಗಿ ಸಂಸ್ಕರಿಸುವ ಮೊದಲ ರೂಪ. ಸಕ್ಕರೆ ಹಾಗೂ ಬೆಲ್ಲ, ಇವೆರಡರ ಮೂಲವೂ ಒಂದೇ, ಅದು ಕಬ್ಬು. ಹಾಗಾಗಿ ಮೂಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ಆರೋಗ್ಯದ ವಿಚಾರಕ್ಕೆ ಬಂದರೆ ಬೆಲ್ಲದಲ್ಲಿ ಸಾಕಷ್ಟು ಖನಿಜಾಂಶಗಳಿವೆ, ಪೋಷಕಾಂಶಗಳಿವೆ.
ಆರೋಗ್ಯಕ್ಕೆ ಇದರಲ್ಲಿ ಸಕ್ಕರೆಗಿಂತ ಹೆಚ್ಚಿನ ಲಾಭಗಳಿವೆ. ಸಕ್ಕರೆಯಲ್ಲಿ ಅಂತಹ ಲಾಭಗಳೇನೂ ಇಲ್ಲ. ಸಕ್ಕರೆಯಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಬೆಲ್ಲದಲ್ಲಿ ಕಬ್ಬಿಣಾಂಶ, ಕ್ಯಾಲ್ಶಿಯಂ ಹಾಗೂ ಇತರ ಖನಿಜಾಂಶಗಳು ಸ್ವಲ್ಪ ಇರುವುದು ನಿಜವಾದರೂ ಇದನ್ನು ಚಹಾಕ್ಕೆ ಬಳಸುವುದರಿಂದ ಲಾಭವಾಗುತ್ತದೆ. ಚಹಾದಲ್ಲಿರುವ ಕೆಲವು ವಸ್ತುಗಳು, ನಮ್ಮ ದೇಹಕ್ಕೆ ಪೋಷಕಾಂಶಗಳು ಸೇರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ.
ಬೆಲ್ಲ ಚಹಾದ ಜೊತೆ ಸೇರಿಕೊಂಡಾಗ, ಬೆಲ್ಲದಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸೇರದೆ ಇರುವ ಸಾಧ್ಯತೆಗಳೇ ಹೆಚ್ಚು. ಯಾಕೆಂದರೆ ಅದನ್ನು ಹೀರಿಕೊಳ್ಳಲು ಚಹಾ ಬಿಡುವುದಿಲ್ಲ. ಹೀಗಾಗಿ ಬೆಲ್ಲದ ಕಬ್ಬಿಣಾಂಶ, ಕ್ಯಾಲ್ಶಿಯಂಗಳು ದೇಹಕ್ಕೆ ಸೇರದೆ ನಷ್ಟವಾಗುತ್ತವೆ. ದೇಹದಲ್ಲಿ ಇನ್ಸುಲಿನ್ ದಿಢೀರ್ ಏರಲು ಬೆಲ್ಲ, ಸಕ್ಕರೆಯೆಂಬ ಬೇಧವಿಲ್ಲ. ಎಲ್ಲದರಲ್ಲಿಯೂ ಇರುವುದು ಗ್ಲುಕೋಸ್. ಹಾಗಾಗಿ, ದೇಹದಲ್ಲಿ ಇದ್ದಕ್ಕಿದ್ದಂತೆ ಗ್ಲುಕೋಸ್ ಮಟ್ಟ ಏರಲು ಬೆಲ್ಲೂ ಕೂಡಾ ಸಕ್ಕರೆಯ ಹಾಗೆಯೇ ಕಾರಣವಾಗುತ್ತದೆ.
ಸಕ್ಕರೆಯ ಹೊರತಾಗಿ ಯಾವುದೇ ಬಗೆಯ ಸಿಹಿಯನ್ನು ಅಂದರೆ, ಬೆಲ್ಲ, ಜೇನುತುಪ್ಪ ಇತ್ಯಾದಿಗಳನ್ನು ಚಹಾಕ್ಕೆ ಸೇರಿದರೂ ಯಾವುದೇ ಲಾಭವಾಗುವುದಿಲ್ಲ. ಅಂತಿಮವಾಗಿ ಅವು ಸಿಹಿಯಾಗಿಯೇ ದೇಹದ ಮೇಲೆ ವರ್ತಿಸುತ್ತವೆ. ಸಕ್ಕರೆಯುಕ್ತ ಚಹಾ ಸೇವಿಸುವುದರಿಂದ ತೊಂದರೆಯೇನಿಲ್ಲ. ಆದರೆ ಯಾವ ಸಮಯಕ್ಕೆ ಸೇವಿಸಬೇಕು ಎಂಬುದನ್ನು ಪಾಲಿಸಿ.
ಬೆಳಗ್ಗೆ ಎದ್ದ ಕೂಡಲೇ ಸೇವಿಸಬೇಡಿ. ಸಂಜೆ ನಾಲ್ಕರ ನಂತರ ಸೇವಿಸುವುದೂ ಕೂಡಾ ಒಳ್ಳೆಯದಲ್ಲ. ರಾತ್ರಿ ಮಲಗುವ ಕನಿಷ್ಟ ಆರು ಗಂಟೆಯ ಮೊದಲು ಸೇವಿಸಿ. ಊಟದ ಜೊತೆಗೆ ಚಹಾ ಸೇವನೆಯೂ ಒಳ್ಳೆಯದಲ್ಲ. ಇದರಿಂದ ಆಹಾರದ ಪೋಷಕಾಂಶಗಳು ದೇಹಕ್ಕೆ ಸೇರದು. ಹಿತಮಿತವಾಗಿ ಚಹಾ ಕಾಫಿ ಸೇವನೆಯಿಂದ ಸಮಸ್ಯೆಯಿಲ್ಲ.

