ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ನೈಸರ್ಗಿಕ ಶಕ್ತಿ ವರ್ಧನೆಯಾಗುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬಾಳೆಹಣ್ಣು ನೈಸರ್ಗಿಕ ಸಕ್ಕರೆಯಿಂದ ಸಮೃದ್ಧವಾಗಿದೆ. ಫೈಬರ್ ಹಾಗೂ ಕಾರ್ಬೋಹೈಡ್ರೇಟ್‌ಗಳು ಸ್ಥಿರವಾದ ಶಕ್ತಿಯ ಮೂಲವಾಗಿವೆ.
ಬಾಳೆಹಣ್ಣಿನಲ್ಲಿ ಪೆಕ್ಟಿನ್ ಎಂಬ ಫೈಬರ್ ಅಂಶವಿರುತ್ತದೆ. ಇದು ಸರಿಯಾದ ಮಲಬದ್ಧತೆಗೆ ಅನುವು ಮಾಡಿಕೊಡುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಬಾಳೆಹಣ್ಣು ವಿಟಮಿನ್ ಬಿ6 ನಿಂದ ಸಮೃದ್ಧವಾಗಿರುತ್ತದೆ. ನರ ಸಂವೇದಕಗಳಾದ ಸೆರೊಟೋನಿನ್ ಮತ್ತು ಟ್ರಿಪ್ಟೋಫಾನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ನಿತ್ಯ ಬಾಳೆಹಣ್ಣಿನ ಸೇವನೆ ಒತ್ತಡ ನಿವಾರಕವಾಗಿಯೂ ಕೆಲಸ ಮಾಡುತ್ತದೆ.
ಬಾಳೆಹಣ್ಣು ವಿಟಮಿನ್ ಸಿ ಮತ್ತು ಇತರೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಇದರ ನಿಯಮಿತ ಸೇವನೆ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

