ದಾಸವಾಳದಿಂದ ಕೆಂಬಣ್ಣದ ಪಾನೀಯವಾದ ಆರೋಗ್ಯಕರ ಚಹಾವನ್ನು ತಯಾರಿಸಬಹುದಾಗಿದ್ದು, ಹೈಬಿಸ್ಕಸ್ ಸಬ್ಡಾರಿಫಾ ಎಂಬ ಹೆಸರಿನಿಂದ ಇದನ್ನು ಕರೆಯಲಾಗುತ್ತದೆ.
ಈ ಚಹಾ ಔಷಧೀಯ ಗುಣಲಕ್ಷಣಗಳನ್ನೊಳಗೊಂಡಿದ್ದು, ಅನೇಕ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆಯಂತೆ ಕೂಡ ಬಳಸಲಾಗುತ್ತದೆ. ಉರಿಯೂತವನ್ನು ಕಡಿಮೆ ಮಾಡುವುದು, ರಕ್ತದೊತ್ತಡವನ್ನು ಕಡಿಮೆ ಮಾಡುವುದು ಹಾಗೂ ರೋಗ ನಿರೋಧಕವನ್ನು ಉತ್ತೇಜಿಸಲು ಕೂಡ ಈ ಚಹಾ ಪರ್ಫೆಕ್ಟ್ ಪೇಯವಾಗಿದೆ.
ದಾಸವಾಳ ಚಹಾ ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲ ಎಂದೆನಿಸಿದ್ದು, ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸುವ ಮೂಲಕ ಜೀವಕೋಶದ ಹಾನಿಯಿಂದ ಸಂರಕ್ಷಿಸುವ ಸಂಯುಕ್ತಗಳನ್ನು ಇದು ಒಳಗೊಂಡಿದೆ.
ವಿಟಮಿನ್ ಸಿ, ಕ್ಯಾರೊಟಿನಾಯ್ಡ್‌ಗಳು ಮತ್ತು ಆಂಥೋಸಯಾನಿನ್‌ಗಳನ್ನು ಒಳಗೊಂಡಂತೆ ಅನಾರೋಗ್ಯದಿಂದ ಕೋಶಗಳನ್ನು ರಕ್ಷಿಸುವ ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಅನೇಕ ಸಂಶೋಧನೆಗಳು ದಾಸವಾಳದ ಚಹಾ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿವೆ. ರಕ್ತದೊತ್ತಡ ಕಡಿಮೆ ಮಾಡುವ ಔಷಧಗಳಲ್ಲಿರುವ ಅದೇ ಅಂಶಗಳು ದಾಸವಾಳದ ಚಹಾದಲ್ಲಿದ್ದು ಇದು ಅತ್ಯಂತ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂದು ಅಧ್ಯಯನಗಳು ಕಂಡುಕೊಂಡಿವೆ.
ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ದಾಸವಾಳದ ಚಹಾ ಈ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಉರಿಯೂತ ಕಡಿಮೆ ಮಾಡುತ್ತದೆ ದಾಸವಾಳ ಚಹಾ ಉರಿಯೂತ ಕಡಿಮೆ ಮಾಡುವ ಅಂಶಗಳನ್ನು ಒಳಗೊಂಡಿದೆ.

