ಕೋಲ್ಕತ್ತಾ: ಶುಕ್ರವಾರ  ಆಸ್ಟ್ರೇಲಿಯಾದಿಂದ  ಭಾರತಕ್ಕೆ ಪ್ರಯಾಣಿಸಿದ್ದ ಎರಡೂವರೆ ವರ್ಷದ ಹೆಣ್ಣುಮಗುವಿನಲ್ಲಿ H5N1 ಹಕ್ಕಿಜ್ವರ  ಪತ್ತೆಯಾಗಿದೆ.

ಅಲ್ಲದೇ ಏವಿಯನ್ ಇನ್ ಫ್ಲುಯೆಂಜಾ (H5N1) ವೈರಸ್‌ನಿಂದ ಮಾನವನಲ್ಲಿ ಉಂಟಾದ ಮೊದಲ ಸೋಂಕು ಇದಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ಪಕ್ಷಿಗಳಿಂದ ಉಂಟಾಗುವ ಈ ವೈರಸ್‌ ಮಾನವರಿಗೆ ತರುವ ಅಪಾಯಗಳು ಕಡಿಮೆ. ಹಾಗಾಗಿ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ  ಅಭಯ ನೀಡಿದೆ.

ಕಳೆದ ಫೆಬ್ರವರಿ 12 ರಿಂದ 29ರ ವರೆಗೆ ಕೋಲ್ಕತ್ತಾದಲ್ಲಿ  ಮಗು ಪ್ರಯಾಣಿಸಿತ್ತು. ಈ ವೇಳೆ ಯಾವುದೇ ಅನಾರೋಗ್ಯ ಇರಲಿಲ್ಲ. ಮಾರ್ಚ್‌ 1ರಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಮರುದಿನವೇ ಇಲ್ಲಿನ ಅಗ್ನೇಯ ವಿಕ್ಟೋರಿಯಾದ ಆಸ್ಪತ್ರೆಗೆ ದಾಖಲಿಸಲಾಯಿತು.

ಮಗುವಿನ ಆರೋಗ್ಯ ಹದಗೆಡುತ್ತಿದ್ದ ಕಾರಣ ಮಾರ್ಚ್‌ 4ರಿಂದ ಒಂದು ವಾರಗಳ ವರೆಗೆ ಮೆಲ್ಬೋರ್ನ್‌ನ ತೀವ್ರ ನಿಗಾಘಟಕದಲ್ಲಿ ಇರಿಸಲಾಗಿತ್ತು. ಎರಡು ವಾರಗಳಲ್ಲಿ ಪೂರ್ಣ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಈ ವೇಳೆ ಮಗುವಿಗೆ ಹೆಚ್‌5ಎನ್‌1 ಗೆ ಪರೀಕ್ಷೆ ನಡಲಾಗಿತ್ತು. ಏಪ್ರಿಲ್‌ನಲ್ಲಿ ಮಗುವಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಮಗುವಿನ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದೆ, ಆದ್ರೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರೋಗ ಲಕ್ಷಣಗಳೇನು?
ಕೆಮ್ಮು, ಉಸಿರಾಟದಲ್ಲಿ ತೊಂದರೆ, ತೀವ್ರ ಜ್ವರ, ತಲೆನೋವು, ಸ್ನಾಯುಗಳ ನೋವು, ಮೂಗು ಸೋರುವಿಕೆ, ಗಂಟಲಿನ ಊತ, ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ.