ಮಂಗಳೂರು: ನೂತನ ಹೈ ಸ್ಪೀಡ್‌ 128- ಸ್ಲೈಸ್‌ ಸಿಟಿ ಸ್ಕ್ಯಾನ್‌ ಮತ್ತು ಅತ್ಯಾಧುನಿಕ ಮ್ಯಾಮೊಗ್ರಾಫಿಯನ್ನು ನವೀಕರಿಸಲಾದ ರೇಡಿಯೊಲಾಜಿ ವಿಭಾಗದಲ್ಲಿ ಉದ್ಘಾಟಿಸಲಾಯಿತು. ಮಣಿಪಾಲ್‌ ಅಕಾಡೆಮಿಯ ಉನ್ನತ ಶಿಕ್ಷಣದ ಫ್ರೊ. ಚ್ಯಾನ್ಸಲರ್ ಡಾ ಹೆಚ್‌ ಎಸ್‌ ಬಲ್ಲಾಳ್‌ ಏಪ್ರಿಲ್‌ 1 ರಂದು ಈ ನೂತನ ಸೇವೆಯನ್ನು ಉದ್ಘಾಟಿಸಿದರು.

ಈ ನವೀಕರಿಸಿದ ರೇಡಿಯೋಲಾಜಿ ವಿಭಾಗವು ಅತ್ಯಾಧುನಿಕ ಡಯಾಗ್ನೊಸ್ಟಿಕ್‌ ಇಮೇಜಿಂಗ್‌ ಟೆಕ್ನಾಲೊಜಿಸ್‌ ಮತ್ತು ಸಂಯೋಜಿತ ಸೇವೆಗಳನ್ನು ಒಂದೇ ಸೂರಿನಡಿ ಒಗ್ಗೂಡಿಸಿದೆ. ಈ ವಿಭಾಗವು ಡಯಾಗ್ನೊಸ್ಟಿಕ್‌ ಸೇವೆಯ ನಿಖರತೆ , ರೋಗಿಯ ಆರೈಕೆ ಯನ್ನು ಸುಧಾರಿಸುವ ಮತ್ತು ತ್ವರಿತ ವೈದ್ಯಕೀಯ ನರ‍ನಿರ್ಣಯಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಈ ಕುರಿತು ಮಾತನಾಡಿದ ಮಣಿಪಾಲ್‌ ಅಕಾಡೆಮಿ ಉನ್ನತ ಶಿಕ್ಷಣದ ಪ್ರೊ. ಚ್ಯಾನ್ಸಲರ್ ಡಾ ಹೆಚ್‌ ಎಸ್‌ ಬಲ್ಲಾಳ್‌ “ ಕೆಎಂಸಿಯ ರೇಡಿಯೋಲಾಜಿ ವಿಭಾಗವು ಸುದೀರ್ಘ ಇತಿಹಾಸವನ್ನು ಹೊಂದಿದ್ದು , ರೆಡಿಯಾಲಾಜಿಸ್ಟ್‌ ಆಗಿ ಸುಮಾರು ಮೂರು ದಶಕಗಳ ಹಿಂದೆ ಅದರ ಆರಂಭಿಕ ಪ್ರಯಾಣದ ಭಾಗವಾಗಲು ನನಗೆ ಅವಕಾಶ ಸಿಕ್ಕಿತ್ತು. ವರ್ಷಗಳಲ್ಲಿ, ಇದು ಸಾಧಾರಣ ವಿಭಾಗದಿಂದ ಮುಂದುವರಿದ ರೇಡಿಯೊ ಡಯಾಗ್ನೋಸಿಸ್ ಸೌಲಭ್ಯವಾಗಿ ವಿಕಸನಗೊಂಡಿದೆ. ಈ ರೂಪಾಂತರವು ನಾವೀನ್ಯತೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ರೋಗಿಗಳ ಆರೈಕೆಯ ಉನ್ನತ ಗುಣಮಟ್ಟವನ್ನು ತಲುಪಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಇಮೇಜಿಂಗ್ ವಿಧಾನಗಳ ಏಕೀಕರಣವು ಆರಂಭಿಕ ರೋಗನರ‍್ಣಯ ಮತ್ತು ಕ್ಲಿನಿಕಲ್ ಫಲಿತಾಂಶವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದರು.

ಆಸ್ಪತ್ರೆಯ ರೆಡಿಯೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಸಂತೋಷ್‌ ರೈ ಮಾತನಾಡಿ “ ರೆಡಿಯೋಲಾಜಿ ವಿಭಾಗದ ನವೀಕರಣವು ನಿಖರ, ಸಕಾಲಿಕ ಮತ್ತು ರೋಗಿ-ಕೇಂದ್ರಿತ ರೋಗನಿರ್ಣಯ ಸೇವೆಗಳ ಒದಗಿಸುವಲ್ಲಿ ಮಹತ್ವಪರ‍್ಣ ಹೆಜ್ಜೆಯನ್ನಿಟ್ಟಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ವಿಶೇಷ ತಜ್ಞರೊಂದಿಗೆ ಸಂಯೋಜಿಸುವ ಮೂಲಕ ವೈದ್ಯರಿಗೆ ಬೆಂಬಲ ನೀಡುವ ಹಾಗೂ ತ್ವರಿತ ಮತ್ತು ನಿಖರ ರೋಗನರ‍್ಣಯವನ್ನು ಸಾಧಿಸುವಲ್ಲಿ ಬದ್ಧರಾಗಿದ್ದೇವೆ.

ನವೀಕರಿಸಿದ ವಿಭಾಗವು ಹೈ -ಎಂಡ್‌ ಇಮೇಜಿಂಗ್‌ 1.5ಟಿ ಎಮ್‌ಆರ್ಐ, 128 ಸ್ಲೈಸ್‌ ಸಿಟಿ ಸ್ಕ್ಯಾನರ್ , ಅತ್ಯಾಧುನಿಕ ಮ್ಯಾಮೊಗ್ರಾಫಿ, ಡಿಜಿಟಲ್‌ ಎಕ್ಸ್‌ ರೇ, ಅಲ್ಟ್ರಾಸೌಂಡ್‌, ಡಾಪ್ಲರ್, ಫೀಟಲ್‌ ಮೆಡಿಸಿನ್‌ ಮತ್ತು ಇಂಟರ್ವೆನ್ಶನಲ್‌ ರೆಡಿಯಾಲಾಜಿಸ್ಟ್‌ ನಂತಹ ಸೌಲಭ್ಯಗಳನ್ನು ಒಂದೇ ಸೂರಿನಲ್ಲಿ ಒಳಗೊಂಡಿದೆ. ಅನುಭವಿ ಮಹಿಳಾ ರೇಡಿಯಾಲಜಿಸ್ಟ್‌, ಅನುಭವಿ ತಂತ್ರಜ್ಞರು ಮತ್ತು ರೇಡಿಯಾಲಜಿಸ್ಟ್‌ಗಳ ಬೆಂಬಲದೊಂದಿಗೆ ತ್ವರಿತ ರೋಗನಿರ್ಣಯ, ಸಂಯೋಜಿತ ರೋಗಿ ಆರೈಕೆ ಹಾಗೇ ಬ್ರೆಸ್ಟ್‌ ಇಮೇಜಿಂಗ್‌ ಮತ್ತು ವುಮೆನ್ಸ್‌ ಹೆಲ್ತ್‌ ಇಮೇಜಿಂಗ್‌ ಸೌಲಭ್ಯವನ್ನು ಬಲಗೊಳಿಸುತ್ತದೆ. ವಿಭಾಗವು 24/7 ಇಮೇಜಿಂಗ್‌ ಸೇವೆಯನ್ನು ಒದಗಿಸುತ್ತದೆ.”

ತ್ವರಿತ ರೋಗ ನರ‍್ಣಯದ ಮಹತ್ವಕ್ಕೆ ಒತ್ತು ನೀಡುತ್ತಾ, ಆಧುನಿಕ ತಂತ್ರಜ್ಞಾನಗಳಾದ ಮ್ಯಾಮೊಗ್ರಾಫಿ ಸ್ಕ್ರೀನಿಂಗ್‌ ಸ್ತನ ಕ್ಯಾನ್ಸರನ್ನು ಆರಂಭದಲ್ಲೇ ಪತ್ತೆ ಪತ್ತೆಹಚ್ಚುತ್ತದೆ. ನಿಯಮಿತ ಮ್ಯಾಮೊಗ್ರಾಫಿ ತಪಾಸಣೆಯು 40 ರ‍್ಷ ಮೇಲ್ಪಟ್ಟ ಮಹಿಳೆಯರಲ್ಲಿ ಸ್ತನಕ್ಯಾನ್ಸರ್‍ನಿಂದ ಸಾವನ್ನಪ್ಪುವ ಪ್ರಮಾಣವನ್ನು ಶೇ. 25-30 ರಷ್ಟು ತಗ್ಗಿಸುತ್ತದೆ.
ಜೊತೆಗೆ ಕಟ್ಟಿಂಗ್‌ ಎಡ್ಜ್‌ ಸಿಟಿ ತಂತ್ರಜ್ಞಾನವು ಸಿಟಿ ಕೊರೊನರಿ ಎಂಜಿಯೊಗ್ರಾಫಿ ಮತ್ತು ಕೊರೊನರಿ ಆರ್ಟರಿ ಕ್ಯಾಲ್ಶಿಯಮ್‌ ಸ್ಕೊರಿಂಗ್ ಮೂಲಕ ಹೃದಯ ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಲು ನೆರವಾಗುತ್ತದೆ.

ವಿಭಾಗವು ಪ್ರಿವೆಂಟಿವ್‌ ಇಮೆಜಿಂಗ್‌ ಮತ್ತು ಆರಂಭಿಕ ರೋಗಪತ್ತೆಗೆ ಮಹತ್ವ ನೀಡುತ್ತದೆ. ರೋಗ ಪತ್ತೆ ವಿಳಂಬವಾದರೆ ಸಂಕರ‍್ಣ ಚಿಕಿತ್ಸೆ, ದರ‍್ಘಕಾಲದ ಆಸ್ಪತ್ರೆ ವಾಸ ಹಾಗೇ ಆರೋಗ್ಯ ಸೇವೆಯ ರ‍್ಚನ್ನು ಹೆಚ್ಚಿಸುತ್ತದೆ, ಆದರೆ ಸಕಾಲದಲ್ಲಿ ತಪಾಸಣೆ ಸರಳ ಚಿಕಿತ್ಸೆ, ಕಡಿಮೆ ವೆಚ್ಚ ಹಾಗೇ ದೀರ್ಘಕಾಲದ ಆರೋಗ್ಯವನ್ನು ಬೆಂಬಲಿಸುತ್ತದೆ. ಇದು ಉತ್ತಮ ಗುಣಮಟ್ಟದ , ರೋಗಿ ಕೇಂದ್ರಿತ ಸೇವೆ ಒದಗಿಸುವ ಬದ್ದತೆಯನ್ನು ತೋರುತ್ತದೆ.

ಕೆಎಂಸಿ ಆಸ್ಪತ್ರೆಯ ಕ್ಲಸ್ಟರ್ ನರ‍್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ” ಆರೋಗ್ಯ ಕ್ಷೇತ್ರದಲ್ಲಿ ಸದಾ ಉನ್ನತ ಮಟ್ಟದ ಸೌಲಭ್ಯಗಳನ್ನು ರೋಗಿಗಳಿಗೆ ಒದಗಿಸುವುದು ನಮ್ಮ ಸಮೂಹದ ಧ್ಯೇಯವಾಗಿದೆ. ವಿಶ್ವರ‍್ಜೆಯ ಮೂಲಸೌರ‍್ಯದಲ್ಲಿ ಹೂಡಿಕೆ ಮಾಡಲು ಮತ್ತು ಆರೋಗ್ಯ ಸೇವೆಯನ್ನು ಬಲಪಡಿಸುವಲ್ಲಿ ನವೀಕರಿಸಿದ ರೇಡಿಯೊ ಡಯಾಗ್ನೋಸಿಸ್ ವಿಭಾಗವು ನಿರಂತರ ಬದ್ಧತೆಗೆ ಸಹಯೋಗ ನೀಡುತ್ತದೆ. ಈ ಸೌಲಭ್ಯವು ರೋಗಿಗಳ ಆರೈಕೆ ಹೆಚ್ಚಿಸುವಲ್ಲಿ, ದಕ್ಷತೆ ಸುಧಾರಿಸುವಲ್ಲಿ ಮತ್ತು ಆರೋಗ್ಯ ರಕ್ಷಣೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 24/7 ಸ್ಕ್ಯಾನಿಂಗ್ ಮತ್ತು ವರದಿ ಮಾಡುವ ಸೇವೆಯಿಂದ ನಮ್ಮ ರೋಗಿ ಕೇಂದ್ರಿತ ಸೇವೆಗಳಾದ ಭಾನುವಾರದ OPD, ಸಂಜೆ OPD,, ತರ‍್ತು ಚಿಕಿತ್ಸೆಯ ಪ್ರಯೋಜನ ನೀಡುತ್ತದೆ. ಆಧುನಿಕತೆ ಮತ್ತು ರೋಗಿ-ಕೇಂದ್ರಿತ ಆರೈಕೆ ನೀಡುವುದು ನಮ್ಮ ಪ್ರಾಮುಖ್ಯತೆ ಗಳಲ್ಲೊಂದಾಗಿದೆ.” ಎಂದರು.