ಉತ್ತಮ ಆರೋಗ್ಯಕ್ಕೆ ಕೊತ್ತಂಬರಿ ನೀರು ಸೇವಿಸುವುದು ಉತ್ತಮ. ಇದರಿಂದ ಹತ್ತಾರು ಲಾಭವಿದೆ. ಅದರಲ್ಲೂ ಉತ್ತಮ ಆರೋಗ್ಯ ಬಯಸುವವರು ಕೊತ್ತಂಬರಿ ನೀರು ಸೇವಿಸಿದರೆ ಕೊಂಚ ದಿನಗಳಲ್ಲೇ ನಿಮ್ಮಲ್ಲಿ ಬದಲಾವಣೆ ಕಾಣಲು ಸಾಧ್ಯ.
ಕೊತ್ತಂಬರಿಯಲ್ಲಿ ಅನೇಕ ಪೋಷಕಾಂಶಗಳು ಇವೆ. ಇದರಿಂದ ಕಷಾಯ ಮಾಡುತ್ತಾರೆ. ಅಡುಗೆಗೂ ಬಳಸುತ್ತಾರೆ. ಆದರೆ ಬಹುತೇಕರಿಗೆ ಕೊತ್ತಂಬರಿಯನ್ನು ಅಡುಗೆ ರುಚಿಯಾಗಿಸಲು ಬಳಸುತ್ತಾರೆ ಎಂದು ನಂಬಿದ್ದಾರೆ. ಇದು ಅಡುಗೆ ರುಚಿಗೆ ಮಾತ್ರವಲ್ಲ, ಇದು ರೋಗನಿರೋಧಕ ಶಕ್ತಿಯನ್ನು ಹೊಂದಿದೆ.
ಕೊತ್ತಂಬರಿ ನೀರು ಸೇವಿಸಿದರೆ ದೇಹಕ್ಕೆ ತಂಪು. ಮಾತ್ರವಲ್ಲ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವಿದೆ. ಅಷ್ಟೇ ಏಕೆ ಹೃದಯವನ್ನ ಆರೋಗ್ಕರವಾಗಿಡುವ ಗುಣವನ್ನ ಕೊತ್ತಂಬರಿ ಹೊಂದಿದೆ. ಹಾಗಾಗಿ ತಿಳಿದವರು ಇದರ ನೀರನ್ನು ಸೇವಿಸುತ್ತಾರೆ. ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಾರೆ.
ಅರ್ಜೀರ್ಣ, ಗ್ಯಾಸ್ ಮುಂತಾದ ಸಮಸ್ಯೆ ಇರುವವರಿಗೂ ಇದು ಮನೆ ಮದ್ದು ಎಂದರೆ ತಪ್ಪಾಗಲಾರದು. ನಿಯಮಿತವಾಗಿ ಬಳಸಿಕೊಂಡು ಇದರ ನೀರು ಸೇವಿಸಿದರೆ ಸಾಕು. ಚರ್ಮದ ಆರೈಕೆಗೂ ಕೊತ್ತಂಬರಿ ಸಹಕಾರಿ.

