ಬಿಲ್ವಪತ್ರೆ ಎಲೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಬಿಲ್ವಪತ್ರೆ ಎಲೆಯನ್ನು ಸೇವಿಸಿದರೆ, ಸಾಕಷ್ಟು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಎಲೆಗಳನ್ನು ಜಗಿದು ಸೇವನೆ ಮಾಡಬಹುದು ಅಥವಾ ಕಷಾಯದ ರೂಪದಲ್ಲಿಯೂ ಸೇವನೆ ಮಾಡಬಹುದು.

ಬಿಲ್ವಪತ್ರೆಯಲ್ಲಿ ಕ್ಯಾಲ್ಸಿಯಂ, ಫೈಬರ್ ಮತ್ತು ವಿಟಮಿನ್ ಎ, ಸಿ, ಬಿ 1, ಬಿ 6 ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ವಿಟಮಿನ್ ಸಿ ಅಧಿಕವಾಗಿರುವ ಈ ಎಲೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಕೆಮ್ಮು ಮತ್ತು ಶೀತದಂತಹ ಸಣ್ಣ ಸೋಂಕುಗಳು ಕಡಿಮೆಯಾಗುತ್ತದೆ.

ಬಿಲ್ವಪತ್ರೆ ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತವೆ. ಜೊತೆಗೆ ಈ ಎಲೆಗಳನ್ನು ಪ್ರತಿನಿತ್ಯ ಸೇವನೆ ಮಾಡಿದರೆ ಬಿಪಿ ಕಡಿಮೆಯಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. ಜೊತೆಗೆ ಯಕೃತ್ತು ಆರೋಗ್ಯಕರವಾಗಿರುತ್ತದೆ. ಪ್ರತಿನಿತ್ಯ ಮುಂಜಾನೆ ಎಲೆಗಳನ್ನು ಜಗಿಯುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ. ಇದರ ಶಿಲೀಂಧ್ರ ವಿರೋಧಿ ಗುಣಗಳು ಚರ್ಮದ ಸಮಸ್ಯೆಗಳನ್ನು ದೂರವಿಡುತ್ತವೆ.

ಬಿಲ್ವಪತ್ರೆ ಎಲೆಗಳಲ್ಲಿರುವ ಕಿಣ್ವಗಳು ಜೀರ್ಣಕಾರಿ ಸಮಸ್ಯೆಗಳನ್ನು ದೂರವಿಡುತ್ತವೆ. ಈ ಎಲೆಗಳನ್ನು ಜಗಿಯುವುದರಿಂದ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಬೆಳಿಗ್ಗೆ ಸಮಯದಲ್ಲಿ ಈ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ಎಲ್ಲಾ ಕಲ್ಮಶಗಳನ್ನು ಹೊರಗೆ ಹೋಗಿ ರಕ್ತ ಶುದ್ಧವಾಗುತ್ತದೆ. ದೇಹವನ್ನು ನಿರ್ವಿಷಗೊಳಿಸಲಾಗುತ್ತದೆ.