ತಾಳೆ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಜೊತೆಗೆ ದೇಹಕ್ಕೂ ತುಂಬಾ ಒಳ್ಳೆಯದು. ಈ ಹಣ್ಣುಗಳು ಬೇಸಿಗೆಯ ಶಾಖದಿಂದ ನಮ್ಮನ್ನು ರಕ್ಷಿಸುವುದಲ್ಲದೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಗಳನ್ನು ನೀಡುತ್ತದೆ.
ಈ ಹಣ್ಣಿನಲ್ಲಿ ಸತು ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳಿವೆ. ಹಾಗಾಗಿ ಬೇಸಿಗೆಯಲ್ಲಿ ತಾಳೆ ಹಣ್ಣುಗಳನ್ನು ಆಗಾಗ ಸೇವನೆ ಮಾಡುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ಕೂಡ ತಡೆಯಬಹುದು.
ತಾಳೆ ಹಣ್ಣು ಅಥವಾ ಐಸ್ ಸೇಬುಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು ಮತ್ತು ವಿಟಮಿನ್ ಬಿ ನಂತಹ ಸಾಕಷ್ಟು ಪೋಷಕಾಂಶಗಳಿವೆ. ಈ ಹಣ್ಣುಗಳ ಸೇವನೆಯಿಂದ ಆಮ್ಲೀಯತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.
ತಾಳೆ ಹಣ್ಣು ಆಂಥೋಸಯಾನಿನ್ ನಂತಹ ಸ್ತನ ಕ್ಯಾನ್ಸರ್ ಕೋಶಗಳನ್ನು ಅಭಿವೃದ್ಧಿಪಡಿಸುವ ವಿವಿಧ ಗೆಡ್ಡೆಗಳು, ಫೈಟೊಕೆಮಿಕಲ್ ಗಳನ್ನು ತಡೆಯುತ್ತದೆ ಹಾಗಾಗಿ ಮಹಿಳೆಯರು ಈ ಹಣ್ಣುಗಳ ಸೇವನೆ ಮಾಡಬೇಕು.
ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ಈ ಹಣ್ಣು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತಾಳೆ ಹಣ್ಣು, ಬೇಸಿಗೆಯಲ್ಲಿ ಉಂಟಾಗುವ ಚರ್ಮದ ಕಾಯಿಲೆಗಳನ್ನು ತಡೆಗಟ್ಟಲು ಬಹಳ ಉಪಯುಕ್ತವಾಗಿವೆ. ಈ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ತಾಳೆ ಹಣ್ಣುಗಳ ಸೇವನೆ ಮಾಡುವುದರಿಂದ ಕರುಳಿನಲ್ಲಿನ ಹುಣ್ಣುಗಳನ್ನು ಸಹ ಗುಣಪಡಿಸಬಹುದು. ನಾಲಿಗೆಯ ಮೇಲೆ ಆಗಾಗ ಕಂಡು ಬರುವ ಹುಣ್ಣುಗಳನ್ನು ಕೂಡ ಕಡಿಮೆ ಮಾಡುವ ಶಕ್ತಿ ಈ ಹಣ್ಣಿಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುವ ಮೊಡವೆಗಳಿಂದ ಮುಕ್ತಿ ಪಡೆಯುವುದರ ಜೊತೆಗೆ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಹಣ್ಣುಗಳ ಸೇವನೆ ಮಾಡಬಹುದು.
ಅಲ್ಲದೆ ತಾಳೆ ಹಣ್ಣುಗಳು ಬಿಸಿಲಿನಿಂದ ಉಂಟಾಗುವ ಬೆವರು ಗುಳ್ಳೆಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿರುವ ನೀರನ್ನು ಚರ್ಮಕ್ಕೆ ಹಚ್ಚಿದರೆ, ಬೆವರು ಬೇಗನೆ ಕಡಿಮೆಯಾಗುತ್ತದೆ.
ಎದೆಹಾಲುಣಿಸುವ ತಾಯಂದಿರ ಆರೋಗ್ಯಕ್ಕೆ ಈ ಹಣ್ಣು ಬಹಳ ಒಳ್ಳೆಯದು. ಇದಲ್ಲದೆ, ಮಗುವಿಗೂ ಪೋಷಕಾಂಶಗಳು ಚೆನ್ನಾಗಿ ಸಿಗುತ್ತವೆ. ಈ ಹಣ್ಣಿನ ಸೇವನೆಯಿಂದ ಮಹಿಳೆಯರಲ್ಲಿ ಕಂಡು ಬರುವ ಬಿಳಿ ಮುಟ್ಟಿನ ಸಮಸ್ಯೆಯೂ ಕಡಿಮೆಯಾಗುತ್ತದೆ.

