ಮೊಟ್ಟೆ ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ. ಕೇವಲ ತ್ವಚೆ ಮತ್ತು ಹೊಳೆಯುವ ಕೂದಲನ್ನು ನೀಡುವುದಲ್ಲದೆ, ಮಾನಸಿಕ ಸ್ಥಿತಿಯನ್ನು ಸಹ ಉತ್ತಮಗೊಳಿಸುತ್ತವೆ.
ಮೊಟ್ಟೆಯಲ್ಲಿ ಹಲವಾರು ಜೀವಸತ್ವಗಳನ್ನು ಒಳಗೊಂಡದ್ದು. ಇವುಗಳಲ್ಲಿ ವಿಟಮಿನ್ ಡಿ, ವಿಟಮಿನ್ ಎ, ವಿಟಮಿನ್ ಬಿ2, ವಿಟಮಿನ್ ಬಿ12, ಬಯೋಟಿನ್ ಮತ್ತು ಫೋಲೇಟ್ ಎಂಬ ಅಂಶಗಳೂ ಸೇರಿವೆ. ಈ ಅಂಶಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು, ಮೂಳೆಗಳ ಆರೋಗ್ಯ ಮತ್ತು ಎಲ್ಲಾ ರೀತಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗಿವೆ.
ಮೊಟ್ಟೆಗಳು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಮೊಟ್ಟೆಯ ಹಳದಿ ಮತ್ತು ಬಿಳಿ ಭಾಗದಲ್ಲಿ ಕಂಡುಬರುವ ಎಲ್ಲಾ 9 ಅಗತ್ಯ ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿವೆ.
ಮೊಟ್ಟೆ ದೇಹದ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಅನಾರೋಗ್ಯಕ್ಕೆ ಕಾರಣವಾಗುವ ಅನಗತ್ಯ ಕುರುಕಲು ತಿಂಡಿ, ಜಂಕ್ ಆಹಾರಗಳ ಸೇವನೆಯನ್ನು ತಡೆಯುತ್ತವೆ. ಮೊಟ್ಟೆ ಹಸಿವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸುವುದರೊಂದಿಗೆ ಆಹಾರ ಸೇವನೆ ಮಿತಿಗೆ ಕಾರಣವಾಗುತ್ತದೆ. ಊಟದ ನಡುವೆ ಜಂಕ್ ಆಹಾರಗಳ ಬದಲಿಗೆ ಮೊಟ್ಟೆ ತಿನ್ನುವುದು ಅತ್ಯುತ್ತಮ ಆಯ್ಕೆ.
ಮೃದು ಮತ್ತು ಕಾಂತಿಯುತ ತ್ವಚೆ ನಿಮ್ಮದಾಗಬೇಕಾದರೆ, ಮೊಟ್ಟೆಗಳನ್ನು ಸೇವಿಸುವುದು ಉತ್ತಮ. ಮೊಟ್ಟೆಗಳಲ್ಲಿ ಸಮೃದ್ಧವಾಗಿರುವ ಲ್ಯೂಟಿನ್ ಮತ್ತು ಪ್ರೋಟೀನ್ ಅಂಶ ಕೂದಲನ್ನು ಸೊಂಪಾಗಿಸಲು ಮತ್ತು ಬೆಳವಣಿಗೆಗೆ ಸಹಾಯಕವಾಗಿವೆ.
ಇವು ತೇವಾಂಶ ಉಳಿಸಿಕೊಳ್ಳಲು ಮತ್ತು ಸುಕ್ಕು, ಸೂಕ್ಷ್ಮ ರೇಖೆಗಳು, ಒರಟಾದ ಚರ್ಮ ಮತ್ತು ಸೂರ್ಯನ ಕಿರಣದಿಂದ ತ್ವಚೆ ಹಾನಿಯಂತಹ ಲಕ್ಷಣಗಳನ್ನು ದೂರ ಮಾಡಲು ಸಹಾಯ ಮಾಡುತ್ತವೆ. ಮೊಟ್ಟೆಗಳಲ್ಲಿರುವ ಫೋಲೇಟ್, ಪ್ರೋಟೀನ್, ಬಯೋಟಿನ್, ವಿಟಮಿನ್ ಎ ಮತ್ತು ವಿಟಮಿನ್ ಇ ಅಂಶ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

