ಲವಂಗ ಆರೋಗ್ಯಕ್ಕೆ ಅನೇಕ ಅನಿರೀಕ್ಷಿತ ಪ್ರಯೋಜನಗಳನ್ನು ನೀಡುತ್ತದೆ. ಲವಂಗದ ನೀರು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದರಿಂದ ಆಹಾರ ಸುಲಭವಾಗಿ ಕರಗುತ್ತದೆ. ಅನಿಯಮಿತ ಆಹಾರ ಪದ್ಧತಿ ಮತ್ತು ಒತ್ತಡದಿಂದ ಕಾಡುವ ಹೊಟ್ಟೆ ಉಬ್ಬರ ಕಡಿಮೆಯಾಗಿ ಜೀರ್ಣಕ್ರಿಯೆ ಸುಗಮವಾಗಿದೆ.
ಲವಂಗದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತವೆ. ವಯಸ್ಸಾಗುವಿಕೆಗೆ ಮತ್ತು ತ್ವಚೆಯ ಹಾನಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸುವ ಮೂಲಕ, ಮುಖದಲ್ಲಿ ಸಹಜ ಕಾಂತಿ ಹೆಚ್ಚುವಂತೆ ಮಾಡುತ್ತದೆ.
ಲವಂಗ ಅತ್ಯುತ್ತಮ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಬಾಯಿಯ ಸ್ವಚ್ಛತೆ ಮತ್ತು ಹಲ್ಲಿನ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿದೆ. ಲವಂಗದ ನೀರು ದೇಹದಲ್ಲಿ ನೈಸರ್ಗಿಕವಾಗಿ ಮೆಲಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನರಮಂಡಲವನ್ನು ಶಾಂತಗೊಳಿಸಿ, ಉತ್ತಮ ಮತ್ತು ನೆಮ್ಮದಿಯ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

