ಮೊಳಕೆ ಭರಿತ ಕಾಳುಗಳು ಪೋಷಕಾಂಶಯುಕ್ತವಾಗಿದ್ದು, ದೇಹಕ್ಕೆ ಬೇಕಾದ ಚೈತನ್ಯವನ್ನು ನೀಡುವ ಶಕ್ತಿ ಹೊಂದಿವೆ. ಮೊಳಕೆ ಕಾಳುಗಳು ಸುಲಭವಾಗಿ ಜೀರ್ಣವಾಗುತ್ತವೆ. ಇವುಗಳಲ್ಲಿರುವ ನಾರಿನಂಶ ಕರುಳಿನ ಆರೋಗ್ಯ ಸುಧಾರಿಸಿ, ಹೊಟ್ಟೆಯ ಸಮಸ್ಯೆಗಳನ್ನು ದೂರವಿಡುತ್ತದೆ.
ಸಸ್ಯ ಆಧಾರಿತ ಪ್ರೋಟೀನ್ ಮತ್ತು ಫೈಬರ್ ಹೇರಳವಾಗಿರುವುದರಿಂದ, ಇವುಗಳನ್ನು ಸೇವಿಸಿದ ನಂತರ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಅನಗತ್ಯ ತಿಂಡಿ ತಿನ್ನುವ ಬಯಕೆ ಕಡಿಮೆಯಾಗುತ್ತದೆ.
ಇವುಗಳಲ್ಲಿ ಜೀವಸತ್ವಗಳು, ಖನಿಜಾಂಶಗಳು ಮತ್ತು ರೋಗ ನಿರೋಧಕಗಳು ಸಮೃದ್ಧವಾಗಿವೆ. ಮೊಳಕೆ ಕಾಳುಗಳ ನಿಯಮಿತ ಸೇವನೆಯಿಂದ ತ್ವಚೆಯ ಆರೋಗ್ಯ ಸುಧಾರಿಸುವುದಲ್ಲದೆ, ದೇಹದ ರೋಗನಿರೋಧಕ ಶಕ್ತಿಯೂ ವೃದ್ಧಿಸುತ್ತದೆ.

