ಮಾವಿನ ಎಲೆಗಳಲ್ಲೂ ಹಲವಾರು ಔಷಧೀಯ ಗುಣಗಳಿವೆ. ಮಾವಿನ ಎಲೆಗಳಲ್ಲಿ ವಿಟಮಿನ್ ಸಿ, ಬಿ ಮತ್ತು ಎ ಸಮೃದ್ಧವಾಗಿದೆ. ಅನೇಕ ಇತರದ ಪೋಷಕಾಂಶಗಳಿಂದ ಕೂಡಿದೆ. ಹೆಚ್ಚಿನ ಪ್ರಮಾಣದ ಫ್ಲೇವನಾಯ್ಡ್ಸ್, ಫೀನಾಲ್ ಸೇರಿದಂತೆ ರೋಗ ನಿರೋಧಕ ಶಕ್ತಿಯ ಗುಣವನ್ನು ಹೊಂದಿದೆ.
ಹಾಗಾಗಿ ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಾವಿನ ಎಲೆಗಳ ಚಹಾ ಪ್ರತಿದಿನ ಕುಡಿಯುವುದರಿಂದ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು. ಮಾವಿನ ಎಲೆಯ ಚಹಾವು ಚಯಾಪಚಯ ಕ್ರಿಯೆಗೆ ಹೆಚ್ಚು ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ಆಯುರ್ವೇದ ಮಾವಿನ ಎಲೆಯನ್ನು ಹೆಚ್ಚು ನಂಬುತ್ತದೆ.
ಮಾವಿನ ಎಲೆಗಳ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಲೆಗಳಲ್ಲಿರುವ ನಾರಿನಂಶವು ಅಜೀರ್ಣದಂತಹ ಸಮಸ್ಯೆಗಳ ನಿವಾರಣೆ. ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡ್ತದೆ
ರಕ್ತದೊತ್ತಡ ನಿಯಂತ್ರಣದಲ್ಲಿಡಲು ಮಾವಿನ ಎಲೆಗಳ ಸೇವನೆ ಒಳ್ಳೆಯದು ಮಾವಿನ ಎಲೆಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಚರ್ಮವು ಆರೋಗ್ಯಕರ. ಕಿರಿಕಿರಿ ಮತ್ತು ದದ್ದುಗಳಂತಹ ಸಮಸ್ಯೆ ಬರಲ್ಲ ಈ ಎಲೆಗಳ ಸಾರವು ನೀವು ಹೆಚ್ಚು ಯಂಗ್ ಆಗಿ ಕಾಣಲು ಸಹಾಯ ಮಾಡ್ತದೆ. ಮಾವಿನ ಎಲೆಗಳು ಕೂದಲಿನ ಸಮಸ್ಯೆಗಳನ್ನೂ ನಿವಾರಿಸುತ್ತದೆ.

