ನುಗ್ಗೆ ಸೊಪ್ಪು ಆಯುರ್ವೇದದಲ್ಲಿ ಬಹಳ ಮಹತ್ವ ಪಡೆದಿದೆ. ಪಿತ್ತಜನಕಾಂಗವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಪಿತ್ತಜನಕಾಂಗದ ಕಾರ್ಯವನ್ನು ಸುಧಾರಿಸುವ ಮೂಲಕ, ಜೀವಾಣುಗಳನ್ನು ದೇಹದಿಂದ ಹೊರ ಹಾಕಲು, ಆರೋಗ್ಯ ಉತ್ತಮವಾಗಿರಲು ಇದು ಸಹಕಾರಿಯಾಗಿದೆ.

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ದೇಹವನ್ನು ನಿರ್ವಿಷಗೊಳಿಸುವುದು ತುಂಬಾನೆ ಮುಖ್ಯ.  ಪವಾಡ ಸದೃಶ ಮರ ಎಂದೇ ಕರೆಯಲ್ಪಡುವ ನುಗ್ಗೆ ಸೊಪ್ಪು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.

ಮರದ ಪ್ರತಿಯೊಂದು ಭಾಗವೂ, ಅದರ ಎಲೆಗಳಿಂದ ಅದರ ಕಾಯಿಗಳವರೆಗೆ, ಆರೋಗ್ಯಕ್ಕೆ ತುಂಬಾನೆ ಉತ್ತಮ. ನುಗ್ಗೆ ಎಲೆಗಳಲ್ಲಿ ವಿಟಮಿನ್ ಎ, ಸಿ ಮತ್ತು ಇ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಅವು ಕ್ವೆರ್ಸೆಟಿನ್ ಮತ್ತು ಕ್ಲೋರೊಜೆನಿಕ್ ಆಮ್ಲದಂತಹ ಶಕ್ತಿಯುತ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದೆ, ಇದು ಜೀವಕೋಶಗಳಿಗೆ ಹಾನಿಯಾಗೋದನ್ನು ತಡೆಯುತ್ತದೆ.

ನುಗ್ಗೆ ಸೊಪ್ಪಿನಲ್ಲಿ ಹೆಚ್ಚಿನ ಕ್ಲೋರೊಫಿಲ್ ಇದ್ದು, ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಕ್ಲೋರೊಫಿಲ್ ರಕ್ತದಿಂದ ವಿಷಯುಕ್ತ ಪದಾರ್ಥಗಳನ್ನು ಹೊರ ತೆಗೆಯುವ ಮೂಲಕ ದೇಹವನ್ನು ನಿರ್ವಿಷಗೊಳಿಸುತ್ತದೆ. ಅಷ್ಟೇ ಅಲ್ಲ ಇದು ಲಿವರ್ ಆರೋಗ್ಯಯುತವಾಗಿರಲು, ನಿರ್ವಿಷಗೊಳಿಸುವ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ.

ನುಗ್ಗೆ ಸೊಪ್ಪು ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ, ಇದು ನಿರ್ವಿಷೀಕರಣದ ಪ್ರಮುಖ ಭಾಗವ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು ದೇಹದಿಂದ ವಿಷವನ್ನು ಪರಿಣಾಮಕಾರಿಯಾಗಿ ಹೊರಹಾಕುತ್ತದೆ. ನುಗ್ಗೆಕಾಯಿಯಲ್ಲಿರುವ ಫೈಬರ್ ನಿಯಮಿತ ಕರುಳಿನ ಚಲನೆಗೆ ಸಹಾಯ ಮಾಡಿ, ಹೊಟ್ಟೆಯನ್ನು ಶುದ್ಧೀಕರಿಸುತ್ತದೆ.