ಕರ್ಬೂಜ ಹಣ್ಣಿನಿಂದ ಆರೋಗ್ಯಕ್ಕೆ ಹತ್ತಾರು ಲಾಭವಿದೆ. ಈ ಹಣ್ಣು ತಂಪು ಗುಣವನ್ನು ಹೊಂದಿದೆ. ಇದಕ್ಕೆ ಪಿತ್ತ ಮತ್ತು ವಾತವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಇವಿಷ್ಟು ಮಾತ್ರವಲ್ಲ, ದೇಹದ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥವನ್ನು ಈ ಹಣ್ಣು ಹೊಂದಿದೆ.
ಕರ್ಬೂಜ ಮೂತ್ರವನ್ನು ಹೆಚ್ಚಿಸುವ ಗುಣದ ಜೊತೆಗೆ, ಮೂತ್ರ ಕೋಶದಲ್ಲಿ ಕಾಣಿಸುವ ಕಲ್ಲನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ. ಮತ್ತೊಂದು ವಿಚಾರವೆಂದರೆ ಇದು ಕರುಳನ್ನು ಸಹ ಸ್ವಚ್ಛ ಮಾಡುತ್ತದೆ.
ಮಲ ವಿಸರ್ಜನೆಗೂ ಇದು ಸಹಕಾರಿಯಾಗಿ. ಇದಲ್ಲದೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕಿದೆ. ಹೃದಯ ಸಂಬಂಧ ಕಾಯಿಲೆಯನ್ನು ನಿಯಂತ್ರಿಸುವ ಗುಣ, ಅಧಿಕ ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಹಾಗೂ ಉರಿ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಕರ್ಬೂಜ ಜ್ಯೂಸ್ ಮಾಡಿ ಸೇವಿಸಿದರೆ ಉತ್ತಮವಾಗಿರುತ್ತದೆ.

