ಅವಲಕ್ಕಿಯಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಒಳ್ಳೆಯ ಆಹಾರವಾಗಿದೆ. ಅವಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಗಳು, ಫೈಬರ್ ಮತ್ತು ಕಬ್ಬಿಣದ ಅಂಶಗಳು ಸಮೃದ್ಧವಾಗಿದ್ದು, ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಇದರ ಸೇವನೆ ಮಾಡುವುದರಿಂದ ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ರಕ್ತಹೀನತೆಯನ್ನು ತಡೆಯಬಹುದು.
ಅವಲಕ್ಕಿಯಲ್ಲಿರುವ ಫೈಬರ್ ಅಂಶವು ಕರುಳಿನ ಆರೋಗ್ಯವನ್ನು ಕಾಪಾಡಲು ಮತ್ತು ಮಲಬದ್ಧತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅವಲಕ್ಕಿಯ ಫೈಬರ್ ಅಂಶ ಹೆಚ್ಚಾಗಿದ್ದು ಕಡಿಮೆ ಕ್ಯಾಲೊರಿಗಳಿರುವುದರಿಂದ ಹೆಚ್ಚು ಸಮಯದ ವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ನಿಮಗೆ ಪದೇ ಪದೇ ಹಸಿವಾಗುವುದಿಲ್ಲ.
ಅವಲಕ್ಕಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಈ ಆಹಾರವನ್ನು ಜೀರ್ಣಿಸಿಕೊಳ್ಳುವುದು ಕೂಡ ಸುಲಭವಾಗಿರುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ಅವಲಕ್ಕಿಯನ್ನು ನೀರು ಅಥವಾ ಮಜ್ಜಿಗೆಯಲ್ಲಿ ನೆನೆಸಿಟ್ಟು ಆ ಬಳಿಕ ಉಪ್ಪು ಹಾಕಿ ಕುಡಿಯಬಹುದು.
ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸಲು ಅವಲಕ್ಕಿಯನ್ನು ಮೊಸರಿನೊಂದಿಗೆ ಬೆರೆಸಿ ಸೇವನೆ ಮಾಡಬಹುದು. ತ್ವರಿತ ಶಕ್ತಿ ಪಡೆಯಲು ಅವಲಕ್ಕಿ ಉಪ್ಮಾ ಅಥವಾ ಪೋಹಾ ಮಾಡಿ ಸೇವನೆ ಮಾಡಬಹುದು. ಪದೇ ಪದೇ ಕೆಮ್ಮು ಬರುತ್ತಿದ್ದರೆ ಅವಲಕ್ಕಿ ಮತ್ತು ಸಕ್ಕರೆ ಸೇರಿಸಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು ಇದರಿಂದ ಕೆಮ್ಮು ಕಡಿಮೆಯಾಗುತ್ತದೆ.

