ಎಳನೀರು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಬೆಳಿಗ್ಗೆ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಯಾವುದೇ ಒತ್ತಡವಿಲ್ಲದೆ ಚುರುಕಾಗುತ್ತದೆ. ಉತ್ತಮ ಹೈಡ್ರೇಶನ್ ನಿಂದಾಗಿ ಕರುಳಿನ ಚಲನೆ ಸುಗಮವಾಗುತ್ತದೆ.

ದೇಹದ ಪ್ರತಿಯೊಂದು ಜೀವಕೋಶಕ್ಕೂ ಆಮ್ಲಜನಕ ಮತ್ತು ಪೋಷಕಾಂಶಗಳು ಸರಾಗವಾಗಿ ತಲುಪಲು ಎಳನೀರು ಸಹಾಯ ಮಾಡುತ್ತದೆ. ಇದು ದಿಢೀರ್ ಶಕ್ತಿ ನೀಡಿ ನಂತರ ಸುಸ್ತು ಮಾಡುವ ಬದಲು, ದಿನವಿಡೀ ಸ್ಥಿರವಾದ ಶಕ್ತಿ ಒದಗಿಸುತ್ತದೆ. ಎಳನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ದೇಹದಲ್ಲಿ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸಲು ನೆರವಾಗುತ್ತದೆ.

ಎಳನೀರು ನೇರವಾಗಿ ಕೊಬ್ಬನ್ನು ಕರಗಿಸುವುದಿಲ್ಲ. ಆದರೆ, ಬೆಳಿಗ್ಗೆ ಅನಗತ್ಯವಾಗಿ ತಿಂಡಿ ತಿನ್ನುವುದನ್ನು ಮತ್ತು ಸಕ್ಕರೆಯುಕ್ತ ಪಾನೀಯ ಕುಡಿಯುವುದನ್ನು ಕಡಿಮೆ ಮಾಡುತ್ತದೆ. ಹೈಡ್ರೇಶನ್ ಸರಿಯಾದಾಗ ಇದು ಪರೋಕ್ಷವಾಗಿ ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಳ್ಳಲು ಹಾಗೂ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.