ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಏಲಕ್ಕಿಯನ್ನು ಜಗಿಯುವುದರಿಂದ ದೇಹಕ್ಕೆ ಆರೋಗ್ಯವನ್ನು ನೀಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಆರೋಗ್ಯಕ್ಕೆ ಸಹಕಾರಿಯಾಗಿದೆ.

ನಾವು ತಡವಾಗಿ ಅಥವಾ ತುಂಬಾ ಊಟ ಮಾಡಿದ್ದಾಗ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಆಸಿಡಿಟಿ ಕಾಣಿಸಿಕೊಳ್ಳಬಹುದು. ಏಲಕ್ಕಿ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದು ನಿದ್ರೆಯಲ್ಲೂ ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಇದು ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸಿ, ಹೊಟ್ಟೆ ನೋವು ಅಥವಾ ಸೆಳೆತವನ್ನು ಕಡಿಮೆ ಮಾಡುತ್ತದೆ.

ಬೆಳಿಗ್ಗೆ ಎದ್ದಾಗ ಬಾಯಿ ದುರ್ವಾಸನೆಯಿಂದ ಬಳಲುವವರಿಗೆ ಏಲಕ್ಕಿ ಅತ್ಯುತ್ತಮ ಪರಿಹಾರ. ಇದರಲ್ಲಿರುವ ‘ಸಿನಿಯೋಲ್’ (Cineole) ಎಂಬ ಅಂಶ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ರಾತ್ರಿ ಏಲಕ್ಕಿ ಜಗಿಯುವುದರಿಂದ ನೈಸರ್ಗಿಕ ಮೌತ್ ಫ್ರೆಶ್‌ನರ್ ನಂತೆ ಕಾರ್ಯನಿರ್ವಹಿಸುತ್ತದೆ. ಮಾತ್ರವಲ್ಲದೆ ಬಾಯಿಯ ಬ್ಯಾಕ್ಟೀರಿಯಾವನ್ನು ಕೂಡಾ ಕಡಿಮೆ ಮಾಡುತ್ತದೆ. ಒಸಡುಗಳ ಆರೋಗ್ಯ ವೃದ್ಧಿಸುತ್ತದೆ.

ನಿಮಗೆ ನಿದ್ರಾಹೀನತೆ ಅಥವಾ ಅತಿಯಾದ ಆತಂಕವಿದ್ದರೆ ಏಲಕ್ಕಿ ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ನರಮಂಡಲವನ್ನು ಶಾಂತಗೊಳಿಸಿ, ನಿದ್ರೆಗೆ ಪೂರಕವಾದ ‘ಮೆಲಟೋನಿನ್’ ಹಾರ್ಮೋನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ಬೆಳಿಗ್ಗೆ ತಾಜಾತನದಿಂದ ಏಳುವಂತೆ ಮಾಡುತ್ತದೆ.

ಏಲಕ್ಕಿ ಮೂತ್ರವರ್ಧಕ ಎಂಬ ಗುಣಗಳನ್ನು ಹೊಂದಿದೆ. ಇದು ಮೂತ್ರದ ಮೂಲಕ ದೇಹದ ಕಸ ಮತ್ತು ವಿಷಾಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ನಿಯಮಿತ ಸೇವನೆಯಿಂದ ತ್ವಚೆಯ ಕಾಂತಿ ಹೆಚ್ಚುವುದಲ್ಲದೆ, ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ.

ಏಲಕ್ಕಿ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಇದನ್ನು ಅಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಇದ್ದಕ್ಕಿದ್ದಂತೆ ಏರದಂತೆ ತಡೆಯಲು ಇದು ಸಹಕಾರಿಯಾಗಿದೆ. ಇದು ಮಧುಮೇಹ ನಿಯಂತ್ರಣಕ್ಕೆ ಪೂರಕವಾದ ನೈಸರ್ಗಿಕ ಕ್ರಮವಾಗಿದೆ.