ಮಣ್ಣಿನ ಮಡಿಕೆಯಲ್ಲಿ ನೀರನ್ನು ಇಡುವುದರಿಂದ ಆ ನೀರು ಶುದ್ಧವಾಗಿಯೂ ಇರುತ್ತದೆ ಅಲ್ಲದೆ ಆ ನೀರಿನಲ್ಲಿ ವಿಟಮಿನ್‌ಗಳು ನಷ್ಟವಾಗುವುದಿಲ್ಲ, ಅದೇ ನಿಮಗೆ ಫಿಲ್ಟರ್‌ ಮಾಡಿದ ನೀರಿನಲ್ಲಿ ಸಿಗುವುದಿಲ್ಲ. ಆದ್ದರಿಂದ ನೀರೂ ರುಚಿಯಾಗಿರುತ್ತದೆ, ವಿಟಮಿನ್‌ಗಳೂ ದೊರೆಯುವುದು.

ಮಣ್ಣಿನ ಮಡಿಕೆಯಲ್ಲಿಟ್ಟ ನೀರು ಕುಡಿಯುವುದರಿಂದ ಸನ್‌ಸ್ಟ್ರೋಕ್ ತಡೆಗಟ್ಟಲು ಸಹಕಾರಿ. ಏಕೆಂದರೆ ಇದರಲ್ಲಿ ಖನಿಜಾಂಶಗಳು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಕಾಪಾಡುತ್ತದೆ, ಇದರಿಂದಾಗಿ ಈ ನೀರು ಕುಡಿದರ ಸುಸ್ತಾಗಲ್ಲ, ಬೇಗನೆ ಬಾಯಾರಿಕೆ ನೀಗುವುದು.

ಮಣ್ಣಿನ ಮಡಿಕೆಯಲ್ಲಿ ನೀರು ಹಾಕಿ ಕುಡಿಯುವುದರಿಂದ ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು, ಈ ನೀರು ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು. ದೇಹದಲ್ಲಿ ಖನಿಜಾಂಶಗಳ ಕಡಿಮೆಯಾದರೆ ಆರೋಗ್ಯ ಸಮಸ್ಯೆ ಉಂಟಾಗುವುದು. ಈ ಮಣ್ಣಿನ ಮಡಿಕೆಯಲ್ಲಿ ಹಾಕಿದ ನೀರು ಕುಡಿಯುವುದರಿಂದ ದೇಹಕ್ಕೆ ಖನಿಜಾಂಶಗಳು ದೊರೆಯುತ್ತದೆ.

ಮಡಿಕೆಯಲ್ಲಿಟ್ಟ ನೀರು ಕುಡಿಯುವಾಗ ತುಂಬಾನೇ ತಂಪಾಗಿರುತ್ತದೆ, ಗಂಟಲು ನೋವು ಉಂಟಾಗುವುದಿಲ್ಲ. ಮಡಿಕೆಯ ನೀರು ನಮ್ಮ ದಾಹವನ್ನು ನೀಗಿಸುತ್ತದೆ. ಮಣ್ಣಿನ ಮಡಿಕೆಯ ನೀರು ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟುತ್ತದೆ ಕೆಲವೊಂದು ಆಹಾರಗಳು ಅಸಿಡಿಟಿ ಹಾಗೂ ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟು ಮಾಡುತ್ತದೆ. ಮಣ್ಣಿನ ಮಡಿಕೆಯ ನೀರು ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆಯಾಗುವುದು. ಮಣ್ಣಿನಲ್ಲಿರುವ ಲವಣಗಳು ಕ್ಷಾರೀಯವಾಗಿವೆ. ಯಾವುದೇ ಸೆಲೆಯಿಂದ ಬಂದ ನೀರು ಕೊಂಚವಾದರೂ ಆಮ್ಲೀಯತೆ ಹೊಂದಿರುತ್ತದೆ.

ಮಣ್ಣಿನಲ್ಲಿರುವ ಲವಣಗಳು ಈ ಆಮ್ಲಗಳನ್ನು ತಟಸ್ಥಗೊಳಿಸಿ ನೀರಿನ ಪಿಎಚ್ ಮಟ್ಟವನ್ನು ಸೊನ್ನೆಗಿಳಿಸುತ್ತವೆ. ಇದೇ ಕಾರಣದಿಂದ ನೆಲದಿಂದ ಉಕ್ಕಿದ ಅಥವಾ ಬಂಡೆಗಳ ನಡುವೆ ಬರುವ ನೀರು ಕುಡಿಯಲು ಯೋಗ್ಯವಾಗಿರುತ್ತದೆ. ಮಣ್ಣಿನಿಂದ ಮಾಡಿದ ಯಾವುದೇ ಮಡಿಕೆ ಖರೀದಿಸುವಾಗ ಅದು ಸುಟ್ಟ ಮಡಿಕೆಯಾಗಿರಬೇಕು. ಸುಡದ ಅಥವಾ ಬಿಸಿಲಿನಲ್ಲಿ ಒಣಗಿಸಿದ ಮಡಿಕೆಯಲ್ಲಿ ನೀರು ಇಟ್ಟರೆ ನೀರು ತಂಪಾಗಿ ಇರುವುದಿಲ್ಲ. ಸುಟ್ಟ ಮಡಿಕೆಯಲ್ಲಿ ಮಾತ್ರ ಸೂಕ್ಷ್ಮ ರಂಧ್ರಗಳು ಇದ್ದು ನೀರಿನಿಂದ ಉಷ್ಣಾಂಶ ಕೂಡ ಕೂಡ ಹೊರ ಹೋಗುತ್ತದೆ. ಹೀಗಾಗಿ ಮಡಿಕೆಯ ನೀರು ತಂಪಾಗುವುದು.